ಗಾಯದಿಂದ ಹಿಡಿದು ಚಿನ್ನ ಗೆಲ್ಲುವವರೆಗೂ ನೆರವಾದವರನ್ನು ಸ್ಮರಿಸಿದ ನೀರಜ್ ಚೋಪ್ರಾ

By Suvarna NewsFirst Published Aug 16, 2021, 5:08 PM IST
Highlights

* ಟೋಕಿಯೋ ಒಲಿಂಪಿಕ್ಸ್‌ ದೇಶಕ್ಕೆ ಚಿನ್ನದ ಪದಕ ಜಯಿಸಿದ ನೀರಜ್ ಚೋಪ್ರಾ

* ಜಾವಲಿನ್‌ ಥ್ರೋನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ ನೀರಜ್

* ಸಂಕಷ್ಟದ ಸಂದರ್ಭದಲ್ಲಿ ನೆರವಾದವರನ್ನು ಸ್ಮರಿಸಿಕೊಂಡ ಚಿನ್ನದ ಹುಡುಗ

ನವದೆಹಲಿ(ಆ.16): ಜಾಗತಿಕ ಕ್ರೀಡಾ ಜಾತ್ರೆ ಒಲಿಂಪಿಕ್ಸ್‌ ಪದಕ ಗೆದ್ದು ದಿನಬೆಳಗಾಗುವಷ್ಟರಲ್ಲಿ ಹೀರೋ ಆಗುವುದರ ಹಿಂದೆ ಸಾಕಷ್ಟು ವರ್ಷಗಳ ಕಠಿಣ ಪರಿಶ್ರಮ ಅಡಗಿರುತ್ತದೆ. ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ದೇಶಕ್ಕೆ ಏಕೈಕ ಚಿನ್ನದ ಪದಕ ಗೆದ್ದುಕೊಟ್ಟ ಜಾವಲಿನ್ ಥ್ರೋ ಪಟು ನೀರಜ್ ಚೋಪ್ರಾ ಇದೀಗ ಸಂಕಷ್ಟದ ಪರಿಸ್ಥಿತಿಯಿಂದ ಯಶಸ್ಸಿನ ಶಿಖರವೇರಲು ಸಹಕರಿಸಿದ ಎಲ್ಲರಿಗೂ ಚೋಪ್ರಾ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಶತಮಾನಗಳ ಬಳಿಕ ಭಾರತಕ್ಕೆ ಅಥ್ಲೆಟಿಕ್ಸ್‌ನಲ್ಲಿ ಒಲಿಂಪಿಕ್ಸ್‌ ಪದಕ ಗೆದ್ದ ನೀರಜ್ ಚೋಪ್ರಾ ತಮ್ಮ ಕಷ್ಟದ ದಿನಗಳನ್ನು ಮೆಲುಕು ಹಾಕಿದ್ದಾರೆ. ಈ ಸಂದರ್ಭದಲ್ಲಿ ನೀರಜ್ ಕೇವಲ ಕಷ್ಟದ ದಿನಗಳನ್ನು ಮಾತ್ರ ಮೆಲುಕು ಹಾಕಿಲ್ಲ, ಬದಲಾಗಿ ಅಂತಹ ಸಂದರ್ಭದಲ್ಲಿ ನೆರವಾದ ಜತೆಗಾರರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

2019ರಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಎರಡು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೀರಜ್ ಚೋಪ್ರಾ ಹಂಚಿಕೊಂಡಿದ್ದು, ಒಂದು ಚಿತ್ರದಲ್ಲಿ ಮೊಣಕೈ ಗಾಯದ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಫೋಟೋವಾಗಿದ್ದರೆ, ಮತ್ತೊಂದು ಫೋಟೋದಲ್ಲಿ ಒಲಿಂಪಿಕ್ಸ್ ಪದಕ ಹಿಡಿದುಕೊಂಡು ನಿಂತಿರುವ ಫೋಟೋ ಶೇರ್ ಮಾಡಿದ್ದಾರೆ. ಕಷ್ಟದ ಸಂದರ್ಭದಲ್ಲಿ ನೆರವಾದ ವೈದ್ಯರನ್ನು ನೀರಜ್ ಸ್ಮರಿಸಿಕೊಂಡಿದ್ದಾರೆ.

'ಚಿನ್ನ ಗೆದ್ದ ಕ್ಷಣ ನೋಡಲು ಮಿಲ್ಖಾ ನಮ್ಮೊಂದಿಗೆ ಇರಬೇಕಿತ್ತು'

ಸ್ವಾತಂತ್ರ್ಯ ದಿನಾಚರಣೆಯ ದಿನದಂದು ನೀರಜ್ ಚೋಪ್ರಾ ತಮ್ಮ ಯಶಸ್ಸಿಗೆ ಕಾರಣೀಕರ್ತರನ್ನು ಸ್ಮರಿಸಿಕೊಂಡಿದ್ದಾರೆ. ಈ ಶುಭ ಸಂದರ್ಭದಲ್ಲಿ ಇಡೀ ಸಹಾಯಕ ಸಿಬ್ಬಂದಿಗೆ ನೀರಜ್ ಚೋಪ್ರಾ ಧನ್ಯವಾದಗಳನ್ನು ಅರ್ಪಿಸಿದ್ದಾರೆ. 2019ತ ಮೇ ತಿಂಗಳಿನಿಂದ ಇಲ್ಲಿಯ ತನಕ ನಿಮ್ಮೆಲ್ಲರ ಜತೆಗಿನ ಪಯಣ ಅವಿಸ್ಮರಣೀಯವಾದದ್ದು ಎಂದು ಡಾ. ಡಿನ್‌ಶಾ ಪರ್ಡಿವಾಲಾ, ಕೋಚ್‌ ಕ್ಲೌಸ್‌ ಹಾಗೂ ಫಿಸಿಯೋ ಇಶಾನ್‌ ಅವರಿಗೆ ತಾವು ಕೃತಜ್ಞರಾಗಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ನೀರಜ್‌ ನುಡಿನಮನ ಸಲ್ಲಿಸಿದ್ದಾರೆ.
 

click me!