* ಡೆಲ್ಲಿ ಹೈಕೋರ್ಟ್‌ನಲ್ಲಿ ಟೇಬಲ್ ಟೆನಿಸ್ ಪಟು ಮನೀಕಾ ಭಾತ್ರಾ ಹೋರಾಟಕ್ಕೆ ಜಯ
* ಕೋಚ್ ಸೌಮ್ಯದೀಪ್ ರಾಯ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡಿದ್ದ ಭಾತ್ರಾ
* ಭಾರತೀಯ ಟೇಬಲ್ ಟೆನಿಸ್ ಫೆಡರೇಶನ್‌ನ ಕಾರ್ಯಕಾರಿ ಸಮಿತಿಗೆ 6 ತಿಂಗಳು ನಿಷೇಧ ಹೇರಿದ ಕೋರ್ಟ್
ನವದೆಹಲಿ(ಫೆ.12): ಕೋಚ್ ಸೌಮ್ಯದೀಪ್ ರಾಯ್ (Soumyadeep Roy) ವಿರುದ್ಧ ಮ್ಯಾಚ್ ಫಿಕ್ಸಿಂಗ್ (Match Fixing) ಆರೋಪ ಮಾಡಿದ್ದ ಭಾರತದ ಟೇಬಲ್ ಟೆನಿಸ್ ತಾರೆ ಮನಿಕಾ ಬಾತ್ರಾಗೆ (Manika Batra) ದೆಹಲಿ ಹೈಕೋರ್ಟ್‌ನಲ್ಲಿ (Delhi High Court) ಗೆಲುವು ಸಿಕ್ಕಿದೆ. ರಾಯ್ ತಪ್ಪಿತಸ್ಥ ಎಂದು ಕೋರ್ಟ್ ತೀರ್ಪು ನೀಡಿದ್ದು, ಭಾರತೀಯ ಟೇಬಲ್ ಟೆನಿಸ್ ಫೆಡರೇಶನ್‌ನ (Table Tennis Federation of India) ಕಾರ್ಯಕಾರಿ ಸಮಿತಿಗೆ 6 ತಿಂಗಳು ನಿಷೇಧ ಹೇರಿದೆ. ಸಮಿತಿಗೆ ಒಂದು ವಾರದಲ್ಲಿ ಆಡಳಿತಾಧಿಕಾರಿ ನೇಮಕಕ್ಕೆ ಸೂಚನೆ ನೀಡಿದೆ.
‘ಕ್ರೀಡಾ ಸಂಸ್ಥೆ ತನ್ನ ನಂಬಿಕೆಯನ್ನು ಕಳೆದುಕೊಂಡಿದೆ. ದೇಶವು ಇಲ್ಲಿನ ಕ್ರೀಡಾಪಟುಗಳ ಬಗ್ಗೆ ಹೆಮ್ಮೆ ಪಡುತ್ತದೆ. ಆದರೆ ಅವರನ್ನು ಹೇಗೆ ನಡೆಸಿಕೊಳ್ಳಬೇಕೆಂದು ಗೊತ್ತಿಲ್ಲದವರು ಕ್ರೀಡಾ ಸಂಸ್ಥೆಗಳಲ್ಲಿ ಇರಬಾರದು’ ಎಂದು ನ್ಯಾ.ರೇಖಾ ಪಲ್ಲಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಕರಣವೇನು?: ಟೋಕಿಯೋ ಒಲಿಂಪಿಕ್ಸ್ (Tokyo Olympics) ಅರ್ಹತಾ ಸುತ್ತಿನ ವೇಳೆ ತಮ್ಮ ವಿದ್ಯಾರ್ಥಿಯ ಗೆಲುವಿಗಾಗಿ ಕೋಚ್ ಸೌಮ್ಯದೀಪ್ ರಾಯ್ ತಮಗೆ ಪಂದ್ಯದಲ್ಲಿ ಸೋಲುವಂತೆ ಒತ್ತಡ ಹೇರಿದ್ದರು ಎಂದು ಖೇಲ್ ರತ್ನ (Khel Ratna) ವಿಜೇತ ಟಿಟಿ ಪಟು ಮನಿಕಾ ಬಾತ್ರಾ ಆರೋಪಿಸಿದ್ದರು. ಬಳಿಕ ಒಲಿಂಪಿಕ್ಸ್ ವೇಳೆ ರಾಯ್‌ರಿಂದ ಕೋಚಿಂಗ್ ಪಡೆಯಲು ನಿರಾಕರಿಸಿ ಸುದ್ದಿಯಾಗಿದ್ದರು. ಫಿಕ್ಸಿಂಗ್ ಆರೋಪಕ್ಕೆ ಸಂಬಂಧಿಸಿದಂತೆ 3 ಮಂದಿಯ ಸಮತಿಯನ್ನು ರಚಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಕೋಚ್ ರಾಯ್ ತಪ್ಪಿತಸ್ಥ ಎಂದು ತೀರ್ಪು ನೀಡಿದೆ.
ಪ್ರೈಮ್ ವಾಲಿಬಾಲ್ ಲೀಗ್: ಬೆಂಗ್ಳೂರಿಗೆ ಜಯ
ಹೈದರಾಬಾದ್: ಪ್ರೈಮ್ ವಾಲಿಬಾಲ್ ಲೀಗ್(ಪಿವಿಎಲ್)ನಲ್ಲಿ ಬೆಂಗಳೂರು ಟಾರ್ಪೆಡೊಸ್ ಸತತ 2ನೇ ಗೆಲುವು ಸಾಧಿಸಿದೆ. ಶುಕ್ರವಾರ ನಡೆದ ಹೈದರಾಬಾದ್ ಬ್ಲ್ಯಾಕ್ ಹಾಕ್ಸ್ ವಿರುದ್ಧ 15-12, 14-15, 15-12, 11-15, 15-13 ಸೆಟ್‌ಗಳಲ್ಲಿ ಜಯಗಳಿಸಿತು. ಈ ಜಯದೊಂದಿಗೆ ತಂಡ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.
Pro Kabaddi League: ಬೆಂಗಳೂರು ಬುಲ್ಸ್‌ಗಿಂದು ಮಾಡು ಇಲ್ಲವೇ ಮಡಿ ಪಂದ್ಯ..!
ಪಂದ್ಯದಲ್ಲಿ ಬೆಂಗಳೂರು ತಂಡದ ಲವ್ಮೀತ್ 16, ಪಂಕಜ್ ಶರ್ಮಾ 10 ಅಂಕ ಗಳಿಸುವ ಮೂಲಕ ಬೆಂಗಳೂರು ಟಾರ್ಪೆಡೊಸ್ ತಂಡವು ಭರ್ಜರಿ ಗೆಲುವು ದಾಖಲಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.
ಬೆಂಗಳೂರು ಓಪನ್: ಫೈನಲ್‌ಗೆ ರಾಮ್-ಸಾಕೇತ್
ಬೆಂಗಳೂರು: ಭಾರತದ ಸಾಕೇತ್ ಮೈನೇನಿ ಹಾಗೂ ರಾಮ್‌ಕುಮಾರ್ ರಾಮನಾಥನ್ ಜೋಡಿಯು ಬೆಂಗಳೂರು ಓಪನ್ ಎಟಿಪಿ ಟೆನಿಸ್ ಟೂರ್ನಿಯ (Bengaluru Open) ಡಬಲ್ಸ್ ಫೈನಲ್ ಪ್ರವೇಶಿಸಿದೆ. ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಭಾರತೀಯ ಜೋಡಿಯು ಆಸ್ಪ್ರೇಲಿಯಾದ ಮಾರ್ಕ್ ಪೊಲ್ಮನ್ಸ್ ಹಾಗೂ ಬ್ರಿಟನ್‌ನ ಜೇ ಕ್ಲಾರ್ಕ್ ವಿರುದ್ಧ 6-4, 6-4 ಸೆಟ್‌ಗಳಲ್ಲಿ ಜಯಿಸಿತು. ಫೈನಲ್‌ನಲ್ಲಿ ಫ್ರಾನ್ಸ್‌ನ ಹ್ಯುಗೊ ಗ್ರೀನಿಯರ್ ಹಾಗೂ ಅಲೆಕ್ಸಾಂಡರ್ ಮುಲ್ಲರ್ ಜೋಡಿಯನ್ನು ಎದುರಿಸಲಿದೆ.
ಪ್ರೊ ಕಬಡ್ಡಿ: ಬುಲ್ಸ್ ಪಂದ್ಯ ಮುಂದೂಡಿಕೆ
ಬೆಂಗಳೂರು: ಶುಕ್ರವಾರ ನಡೆಯಬೇಕಿದ್ದ ಪ್ರೊ ಕಬಡ್ಡಿ (Pro Kabaddi League) 8ನೇ ಆವೃತ್ತಿಯ ಬೆಂಗಳೂರು ಬುಲ್ಸ್ (Bengaluru Bulls) ಹಾಗೂ ಜೈಪುರ ಪ್ಯಾಂಥರ್ಸ್(Jaipur Pink Panthers) ನಡುವಿನ ಪಂದ್ಯ ಮುಂದೂಡಿಕೆಯಾಗಿದೆ. ಪಂದ್ಯ ಮುಂದೂಡಲು ಆಯೋಜಕರು ಕಾರಣ ತಿಳಿಸಿಲ್ಲ. ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ಹರಾರಯಣ ವಿರುದ್ಧ ಪುಣೆ 45-27ರಲ್ಲಿ ಗೆದ್ದರೆ, ಜೈಪುರ ವಿರುದ್ಧ ಯು.ಪಿ.ಯೋಧಾ 41-34 ರಲ್ಲಿ ಜಯಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ್ದು, ಬೆಂಗಳೂರು ಬುಲ್ಸ್ ಇದೀಗ 5ನೇ ಸ್ಥಾನಕ್ಕೆ ಕುಸಿದಿದೆ.