Indonesia Badminton Tournament : ಸಿಂಧು, ಶ್ರೀಕಾಂತ್‌, ಲಕ್ಷ್ಯಾ ಸೇನ್ ಪದಕದ ಭರವಸೆ!

By Kannadaprabha News  |  First Published Nov 16, 2021, 7:37 AM IST

*ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಸಿಂಧು
*ವರ್ಷದ ಆರಂಭದಲ್ಲಿ ಸ್ವಿಸ್‌ ಓಪನ್‌ನಲ್ಲಿ ರನ್ನರ್‌ ಅಪ್‌ಗೆ ತೃಪ್ತಿ
*ಥಾಯ್ಲೆಂಡ್‌ ವಿರುದ್ಧ ಶುಭಾರಂಭದ ನಿರೀಕ್ಷೆಯಲ್ಲಿ ಸಿಂಧು


ಬಾಲಿ(ನ.16): ಇಂಡೋನೇಷ್ಯಾ ಬ್ಯಾಡ್ಮಿಂಟನ್‌ ಪಂದ್ಯಾವಳಿಗೆ (indonesia badminton tournament 2021)  ಮಂಗಳವಾರದಿಂದ ಚಾಲನೆ ದೊರೆಯಲಿದ್ದು, 2 ಬಾರಿ ಒಲಿಂಪಿಕ್ಸ್‌ ಪದಕ ವಿಜೇತೆ ಪಿ.ವಿ.ಸಿಂಧು (PV Sinhu) , ಕಿದಂಬಿ ಶ್ರೀಕಾಂತ್‌ (Srikanth Kidambi) ಹಾಗೂ ಲಕ್ಷ್ಯಸೇನ್‌ (Lakshya Sen) ಪದಕದ ಭರವಸೆ ಮೂಡಿಸಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಸೈನಾ ನೆಹ್ವಾಲ್‌ ಹಾಗೂ ಸಮೀರ್‌ ವರ್ಮಾ ಟೂರ್ನಿಯಿಂದ ದೂರ ಉಳಿದಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ (Tokyo Olympics) ಕಂಚಿನ ಪದಕ ಜಯಿಸಿದ್ದ ಸಿಂಧು, ಡೆನ್ಮಾರ್ಕ್ ಓಪನ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದರು. ಫ್ರಾನ್ಸ್‌ ಓಪನ್‌ನಲ್ಲಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದರು. ಜರ್ಮನಿಯಲ್ಲಿ ನಡೆದ ಹೈಲೊ ಓಪನ್‌ನಿಂದ ಹಿಂದೆ ಸರಿದಿದ್ದರು. 2019ರಲ್ಲಿ ಸ್ವಿಟ್ಜರ್ಲೆಂಡ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಾಂಪಿಯನ್‌ ಆದ ಬಳಿಕ ಸಿಂಧು, ಎಲ್ಲೂ ಸ್ವರ್ಣ ಪದಕ (Gold Medal) ಜಯಿಸಿಲ್ಲ. ಈ ವರ್ಷದ ಆರಂಭದಲ್ಲಿ ಸ್ವಿಸ್‌ ಓಪನ್‌ನಲ್ಲಿ ಫೈನಲ್‌ ಪ್ರವೇಶಿಸಿದ್ದ ಸಿಂಧು, ರನ್ನರ್‌ ಅಪ್‌ಗೆ ತೃಪ್ತರಾಗಿದ್ದರು.

Wrestler Nisha Dahiya: ಸಾವಿನ ವದಂತಿ ಬೆನ್ನಲ್ಲೇ ಚಿನ್ನ ಗೆದ್ದ ನಿಶಾ ದಹಿಯಾ!

Tap to resize

Latest Videos

undefined

3ನೇ ಶ್ರೇಯಾಂಕಿತ ಸಿಂಧು, 2 ವರ್ಷಗಳ ಹಿಂದೆ ಜರ್ಕಾತದಲ್ಲಿ ನಡೆದ ಇಂಡೋನೇಷ್ಯಾ ಓಪನ್‌ನಲ್ಲಿ ಫೈನಲ್‌ ಪ್ರವೇಶಿಸಿದ್ದರು. ಈ ಬಾರಿ ಮಹಿಳಾ ಸಿಂಗಲ್ಸ್‌ನ ಮೊದಲ ಪಂದ್ಯದಲ್ಲಿ ಥಾಯ್ಲೆಂಡ್‌ನ ಸುಪಿನಿದಾ ಕೇಟ್‌ಥೊಂಗ್‌ ಸವಾಲು ಎದುರಾಗಿದ್ದು, ಸಿಂಧು ಶುಭಾರಂಭದ ನಿರೀಕ್ಷೆಯಲ್ಲಿದ್ದಾರೆ. ಹೈಲೊ ಓಪನ್‌ನಲ್ಲಿ (Hailo Open) ಸೆಮಿಫೈನಲ್‌ ಪ್ರವೇಶಿಸಿದ್ದ ಕಿಂದಬಿ ಶ್ರೀಕಾಂತ್‌, ಲಕ್ಷ್ಯಸೇನ್‌ ಮೇಲೂ ಹೆಚ್ಚಿನ ನಿರೀಕ್ಷೆಯಿದೆ. ಬಿ.ಸಾಯಿ ಪ್ರಣೀತ್‌ (B Sai Praneth), ಎಚ್‌.ಎಸ್‌.ಪ್ರಣಯ್‌ (Prannoy HS), ಪಿ.ಕಶ್ಯಪ್‌ (P Kashyap) ಸಹ ಭಾರತದ ಸವಾಲನ್ನು ಮುಂದುವರೆಸಲಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ ಸಾಯಿರಾಜ್‌ ರಂಕಿರೆಡ್ಡಿ ಹಾಗೂ ಚಿರಾಗ್‌ ಶೆಟ್ಟಿ, ಯುವ ಜೋಡಿ ಅರ್ಜುನ್‌, ಧ್ರುವ್‌ ಕಪಿಲಾ ಹಾಗೂ ಮಹಿಳೆಯರ ಡಬಲ್ಸ್‌ನಲ್ಲಿ ಕರ್ನಾಟಕದ ಅಶ್ವಿನಿ ಪೊನ್ನಪ್ಪ ಹಾಗೂ ಎನ್‌.ಸಿಕ್ಕಿ ರೆಡ್ಡಿ ಅದೃಷ್ಟಪರೀಕ್ಷೆಗೆ ಇಳಿಯಲಿದ್ದಾರೆ.

ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌‌: ಆಕಾಶ್‌ ಕುಮಾರ್‌ಗೆ ಒಲಿದ ಕಂಚು

ಚೊಚ್ಚಲ ಬಾರಿಗೆ ಪುರುಷರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ (World Boxing Championships) ಸ್ಪರ್ಧಿಸಿದ ಆಕಾಶ್‌ ಕುಮಾರ್‌ (Akash Kumar) ಕಂಚಿನ ಪದಕ (Bronze Medal) ಜಯಿಸಿದ್ದಾರೆ. 54 ಕೆ.ಜಿ. ವಿಭಾಗದ ಸೆಮಿಫೈನಲ್‌ನಲ್ಲಿ ಗುರುವಾರ (ನ.04)‌ ಕಜಕಸ್ತಾನದ 19 ವರ್ಷದ ಮಖ್ಮುದ್‌ ಸಬ್ರಖಾನ್‌ ವಿರುದ್ಧ 0-5ರಲ್ಲಿ ಸೋಲುಂಡರು.

IOC ಸಮಿತಿ ಸದಸ್ಯರ ಆಯೋಗ ಸೇರಿದ ಭಾರತದ ಒಲಿಂಪಿಕ್ ತಾರೆ ಹಾಗೂ ಕೋಸ್ಟರಿಕಾ ಅಧ್ಯಕ್ಷೆ!

ಇದೇ ಮೊದಲ ಬಾರಿಗೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆಲ್ಲುವ ಬಾಕ್ಸರ್‌ಗಳಿಗೆ ನಗದು ಬಹುಮಾನ ನೀಡುತ್ತಿದ್ದು, ಆಕಾಶ್‌ಗೆ 25,000 ಅಮೆರಿಕನ್‌ ಡಾಲರ್‌ (ಅಂದಾಜು 18.63 ಲಕ್ಷ ರು.) ದೊರೆಯಿತು. 13 ಬಾಕ್ಸರ್‌ಗಳು ಸ್ಪರ್ಧಿಸಿದ್ದ ಈ ಕೂಟವನ್ನು ಭಾರತ ಒಂದು ಕಂಚಿನ ಪದಕದೊಂದಿಗೆ ಮುಕ್ತಾಯಗೊಳಿಸಿತು.

ನೀರಜ್ ಚೋಪ್ರಾ, ಲೊವ್ಲಿನಾ ಸೇರಿ 12 ಮಂದಿಗೆ ಖೇಲ್ ರತ್ನ ಪ್ರಶಸ್ತಿ ಪ್ರದಾನ!

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಶನಿವಾರ (ನ.13) ನವದೆಹಲಿಯಲ್ಲಿ ಕ್ರೀಡಾ ಪ್ರಶಸ್ತಿ ಪ್ರದಾನ (National Sports Award) ಮಾಡಿದ್ದಾರೆ. ಶನಿವಾರ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ (Ramanath Kovind) ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಟೋಕಿಯೊ ಒಲಿಂಪಿಕ್ಸ್ (Tokyo Olympics) 2020 ರಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಸೇರಿದಂತೆ ಒಟ್ಟು 12 ಆಟಗಾರರಿಗೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ನೀಡಲಾಗಿದೆ.

ಆಗಸ್ಟ್ 29 ರಂದು ರಾಷ್ಟ್ರೀಯ ಕ್ರೀಡಾ ದಿನದಂದು (National Sports Day) ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ಸಾಮಾನ್ಯವಾಗಿ ನೀಡಲಾಗುತ್ತದೆ, ಆದರೆ ಒಲಂಪಿಕ್ ಗೇಮ್ಸ್ ಮತ್ತು ಪ್ಯಾರಾಲಿಂಪಿಕ್ ಕ್ರೀಡಾಕೂಟಗಳ ಕಾರಣದಿಂದ ಈ ವರ್ಷ ಅವುಗಳನ್ನು ನವೆಂಬರ್ 13 ಕ್ಕೆ ಮುಂದೂಡಲಾಗಿತ್ತು.

click me!