ಕೆಲ ಕ್ರೀಡಾ ಒಕ್ಕೂಟಗಳು ಅಥ್ಲೀಟ್‌ಗಳನ್ನು ಬೆಳೆಯಲು ಬಿಡುತ್ತಿಲ್ಲ : ವಾಸ್ತವ ಬಿಚ್ಚಿಟ್ಟ ಕಿರಣ್ ರಿಜಿಜು

By Kannadaprabha News  |  First Published Oct 11, 2021, 9:23 AM IST

* ಕೆಲವು ಕ್ರೀಡಾ ಒಕ್ಕೂಟಗಳ ಒಳ ರಾಜಕೀಯ ಬಿಚ್ಚಿಟ್ಟ ಕಿರಣ್ ರಿಜಿಜು

* ಕಿರಣ್ ರಿಜಿಜು ಭಾರತದ ಮಾಜಿ ಕ್ರೀಡಾ ಸಚಿವ

* ದೇಶಿ ಕ್ರೀಡೆಯನ್ನು ಬೆಳೆಸಲು ಕರೆಕೊಟ್ಟ ರಿಜಿಜು


ನವದೆಹಲಿ(ಅ.11): ದೇಶದ ಕೆಲ ಕ್ರೀಡಾ ಒಕ್ಕೂಟಗಳು ಕ್ರೀಡಾಪಟುಗಳನ್ನು ಬೆಳೆಯಲು ಬಿಡುತ್ತಿಲ್ಲ ಎಂದು ಕೇಂದ್ರದ ಮಾಜಿ ಕ್ರೀಡಾ, ಹಾಲಿ ಕಾನೂನು ಸಚಿವ ಕಿರಣ್‌ ರಿಜಿಜು (Kiren Rijiju) ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

‘ಹಲವು ಕ್ರೀಡಾ ಒಕ್ಕೂಟಗಳಲ್ಲಿ ಜನರು ತಾವು ಕಷ್ಟಪಟ್ಟು ದುಡಿದ ಹಣವನ್ನು ಖರ್ಚು ಮಾಡಿ ಕ್ರೀಡಾಪಟುಗಳನ್ನು ಬೆಳೆಸುತ್ತಿದ್ದಾರೆ. ಆದರೆ ಕೆಲ ಒಕ್ಕೂಟಗಳಲ್ಲಿ ಕ್ರೀಡಾಪಟುಗಳನ್ನು ಬೆಳೆಯಲು ಬಿಡುತ್ತಿಲ್ಲ. ಅಂತಹ ಒಕ್ಕೂಟಗಳು ಸಾಗುತ್ತಿರುವ ಶೈಲಿ ಯಾವುದೇ ಅಥ್ಲೀಟ್‌ ಹಾಗೂ ಕ್ರೀಡೆಗೆ ಸಹಕಾರಿಯಲ್ಲ’ ಎಂದಿದ್ದಾರೆ. 

Latest Videos

undefined

ಇಂಡಿಯಾ ಟುಡೆ (India Today) ಕಾನ್‌ಕ್ಲೇವ್‌ನಲ್ಲಿ ಭಾಗವಹಿಸಿ ಮಾತನಾಡಿದ ಕಿರಣ್ ರಿಜಿಜು, ದೇಶದ ಹಲವು ಕ್ರೀಡಾ ಒಕ್ಕೂಟಗಳ (sports federations) ಪೈಕಿ ಕೆಲವು ಒಕ್ಕೂಟಗಳು ಸಾಕಷ್ಟು ವೃತ್ತಿಪರವಾಗಿ ಕಾರ್ಯ ನಿರ್ವಹಿಸುತ್ತಿವೆ. ಇಲ್ಲಿ ಕೆಲಸ ನಿರ್ವಹಿಸುವ ಕೆಲವು ಜನರು ಅಥ್ಲೀಟ್‌ಗಳನ್ನು ಬೆಳೆಸಲು ಮೂಲಭೂತ ಸೌಕರ್ಯ ಹಾಗೂ ಇತರ ವ್ಯವಸ್ಥೆಗಳಿಗಳ ಅಭಿವೃದ್ದಿಗಾಗಿ ತಾವು ದುಡಿದ ಹಣವನ್ನು ಖರ್ಚು ಮಾಡುತ್ತಿದ್ದಾರೆ. ಆದರೆ ಮತ್ತೆ ಕೆಲವು ಫೆಡರೇಷನ್‌ಗಳಲ್ಲಿ, ಅಂತಹ ಫೆಡರೇಷನ್‌ಗಳ ಹೆಸರು ಹೇಳಲು ಇಚ್ಚಿಸುವುದಿಲ್ಲ, ಅಥ್ಲೀಟ್‌ಗಳನ್ನು ಬೆಳೆಯಲು ಅವಕಾಶವನ್ನೇ ನೀಡುತ್ತಿಲ್ಲ. ಇಂತಹ ಕೆಲವು ಒಕ್ಕೂಟಗಳು ನಡೆಯುತ್ತಿರುವ ರೀತಿ ಅಥ್ಲೀಟ್ಸ್‌ ಹಾಗೂ ಕ್ರೀಡೆಯ ಬೆಳವಣಿಗೆಗೆ ಸಹಾಯವಾಗುತ್ತಿಲ್ಲ. ಅನಿವಾರ್ಯವಾಗಿ ಇಂತಹ ಕಡೆ ಸರ್ಕಾರ ಮಧ್ಯ ಪ್ರವೇಶಿಸಬೇಕಾಗಿದೆ ಎಂದು ಕಿರಣ್ ರಿಜಿಜು ವಾಸ್ತವ ಪರಿಸ್ಥಿತಿ ತೆರೆದಿಟ್ಟಿದ್ದಾರೆ.

IPL 2021: ಡೆಲ್ಲಿ ವಿರುದ್ಧ ಧೋನಿ ಸ್ಫೋಟ ಕಂಡ ಕೊಹ್ಲಿ ಹೇಳಿದ್ದು ಒಂದೇ ಮಾತು!

‘ದೇಶದಲ್ಲಿ ಮೊದಲು ಕ್ರೀಡಾ ಸಂಸ್ಕೃತಿ ಇರಲಿಲ್ಲ. ಆದರೆ ಟೋಕಿಯೋ ಒಲಿಂಪಿಕ್ಸ್‌ (Tokyo Olympics) ಬಳಿಕ ಕ್ರೀಡೆ ಬೆಳೆಯುತ್ತಿದೆ. ನಾವು ಕೇವಲ ವಿದೇಶಿ ಕ್ರೀಡೆಗಳನ್ನೇ ಆಡದೇ ದೇಸೀ ಕ್ರೀಡೆಗಳಾದ ಮಲ್ಲಕಂಬ, ಖೋ-ಖೋ ಆಟವನ್ನೂ ಆಡಬೇಕು’ ಎಂದು ಅವರು ಕರೆ ನೀಡಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾದ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತ 7 ಪದಕಗಳನ್ನು ಗೆಲ್ಲಲಷ್ಟೇ ಶಕ್ತವಾಯಿತು. ನೂರಾರು ಕೋಟಿ ಜನಸಂಖ್ಯೆ ಇರುವ ಭಾರತ ಎರಡಂಕಿ ಮೊತ್ತದ ಪದಕ ಗೆಲ್ಲಲು ಇಂದಿಗೂ ಸಾಧ್ಯವಾಗಿಲ್ಲ ಎಂದರೆ ಅದಕ್ಕೆ ಯಾರು ಹೊಣೆ ಹೇಳಿ..?

ಹಾಕಿ ಇಂಡಿಯಾ ವಿರುದ್ಧ ಕೇಂದ್ರ ಕ್ರೀಡಾ ಸಚಿವ ಕಿಡಿ

ನವದೆಹಲಿ: ಕಾಮನ್‌ವೆಲ್ತ್‌ ಗೇಮ್ಸ್‌ಗೆ ಹಾಕಿ ಇಂಡಿಯಾ (Hockey India) ಗೈರಾಗಲು ನಿರ್ಧರಿಸಿದ್ದು ಏಕಪಕ್ಷೀಯ. ಇಂತಹ ನಿರ್ಧಾರ ಕೈಗೊಳ್ಳುವ ಮುನ್ನ ಕೇಂದ್ರ ಸರ್ಕಾರದ ಜೊತೆ ಚರ್ಚಿಸಬೇಕಿತ್ತು ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ (Anurag Thakur) ಕಿಡಿಕಾರಿದ್ದಾರೆ. 

‘ದೇಶವನ್ನು ಪ್ರತಿನಿಧಿಸುವ ತಂಡದ ವಿಚಾರದಲ್ಲಿ ಯಾವುದೇ ಕ್ರಮಕೈಗೊಳ್ಳುವ ಅಧಿಕಾರ ಸರ್ಕಾರಕ್ಕಿದೆ. ಹಾಕಿ ಇಂಡಿಯಾ ಸರ್ಕಾರದ ಜೊತೆ ಸಮಾಲೋಚಿಸದೆ ಇಂತಹ ನಿರ್ಧಾರ ಕೈಗೊಳ್ಳುವುದನ್ನು ನಿಲ್ಲಿಸಬೇಕು. ಯಾಕೆಂದರೆ ತಂಡ ಕೇವಲ ಹಾಕಿ ಒಕ್ಕೂಟದಲ್ಲ. ಅದು ಇಡೀ ದೇಶದ್ದು’ ಎಂದಿದ್ದಾರೆ. 

ಕಾಮನ್‌ವೆಲ್ತ್‌ ಗೇಮ್ಸ್‌ನಿಂದ ಹಿಂದೆ ಸರಿದ ಭಾರತ ಹಾಕಿ ತಂಡ..!

ಏಷ್ಯನ್‌ ಗೇಮ್ಸ್‌ (Asian Games)ನಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ 2022ರ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ (Commonwealth Games)ಗೆ ತಂಡಗಳನ್ನು ಕಳುಹಿಸುವುದಿಲ್ಲ ಎಂದು ಹಾಕಿ ಇಂಡಿಯಾ ಇತ್ತೀಚೆಗೆ ಘೋಷಿಸಿತ್ತು. ಏಷ್ಯನ್‌ ಗೇಮ್ಸ್‌ನಲ್ಲಿ ಪಾಲ್ಗೊಂಡು 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆಯಲು ಹಾಕಿ ಇಂಡಿಯಾ ಲೆಕ್ಕಾಚಾರ ಹಾಕಿದೆ.

ಅಂಡರ್‌-16 ಟೆನಿಸ್‌: ರಾಜ್ಯದ ಸುಹಿತಾಗೆ ಪ್ರಶಸ್ತಿ

ನವದೆಹಲಿ: ಅಂಡರ್‌-16 ರಾಷ್ಟ್ರೀಯ ಟೆನಿಸ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಸುಹಿತಾ ಪಟೇಲ್‌ ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ 2ನೇ ಶ್ರೇಯಾಂಕಿತೆ ಸುಹಿತಾ, ಮಹಾರಾಷ್ಟ್ರದ ಸೋನಲ್‌ ಪಾಟೀಲ್‌ ವಿರುದ್ಧ 6​-3, 2-​6, 6-​4 ಸೆಟ್‌ಗಳಲ್ಲಿ ಜಯಗಳಿಸಿದರು. ಬಾಲಕರ ವಿಭಾಗದಲ್ಲಿ ಮಧ್ಯಪ್ರದೇಶದ ದಕ್ಷ್‌  ಪ್ರಸಾದ್‌ ಪ್ರಶಸ್ತಿ ಗೆದ್ದರು.

click me!