ದಾಖಲೆ ನಿರ್ಮಿಸಿದ ಸಜನ್ ಪ್ರಕಾಶ್; ಟೊಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಈಜುಪಟು!

By Suvarna News  |  First Published Jun 26, 2021, 10:10 PM IST
  • ದಾಖಲೆ ನಿರ್ಮಿಸಿದ ಭಾರತೀಯ ಈಜುಪಟು ಸಾಜನ್ ಪ್ರಕಾಶ್ 
  • ಟೊಕಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಪ್ರಕಾಶ್
  • ಈ ಸಾಧನೆ ಮಾಡಿದ ಭಾರತದ ಮೊದಲ ಈಜುಪಟು ಸಜನ್ 

ನವದೆಹಲಿ(ಜೂ.26): ಒಲಿಂಪಿಕ್ಸ್‌ನಲ್ಲಿ ಭಾರತ ಪ್ರತಿ ಬಾರಿ ಅತ್ಯುತ್ತಮ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಬಾರಿಯ ಟೊಕಿಯೋ ಒಲಿಂಪಿಕ್ಸ್ ಭಾರತದ ಪಾಲಿಗೆ ಮತ್ತಷ್ಟು ಸ್ಮರಣೀಯವಾಗಿದೆ. ಕಾರಣ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ ಕ್ರೀಡಾಕೂಟದ ಈಜು ಸ್ಪರ್ಧೆಯಲ್ಲಿ ಭಾರತ ಸ್ಪರ್ಧಿಸುತ್ತಿದೆ. ಇದಕ್ಕೆ ಕಾರಣವಾಗಿದ್ದು ಸಜನ್ ಪ್ರಕಾಶ್.

 

I congratulate for becoming the 1st Indian swimmer to qualify for as he clocks 1:56:38 in men’s 200m butterfly at the Sette Colli Trophy in Rome. It shows the commitment of our athletes towards making India proud. pic.twitter.com/27LMd3OVj4

— Kiren Rijiju (@KirenRijiju)

Tap to resize

Latest Videos

ಭಾರತದ ಈಜುಪಟು ಸಜನ್ ಪ್ರಕಾಶ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಈಜುಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರೋಮ್‌ನಲ್ಲಿ ನಡೆದ ಕ್ರೀಡಾಕೂಟದ 200 ಮೀಟರ್ ಬಟರ್‌ಪ್ಲೈ ಈಜು ಸ್ಪರ್ದೆಯಲ್ಲಿ ಸಜನ್ ಪ್ರಕಾಶ್ 1:56:38 ನಿಮಿಷದಲ್ಲಿ ಗುರಿ ತಲುಪಿದ್ದಾರೆ. ಈ ಮೂಲಕ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.

ಒಲಿಂಪಿಕ್‌ಗೆ ಆಯ್ಕೆಯಾಗುವ ಕರ್ನಾಟಕದ ಕ್ರೀಡಾಪಟುಗಳಿಗೆ 10 ಲಕ್ಷ ರೂ ಪ್ರೋತ್ಸಾಹಧನ.

ಈ ಕೂಟದಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು 1:56:48 ನಿಮಿದೊಳಗೆ ಗುರಿ ತಲುಪಬೇಕಿತ್ತು. ಆದರೆ ಸಜನ್ ಇನ್ನೂ 10 ಸೆಕೆಂಡ್ ಮುಂಚೆ ಗುರಿ ತಲುಪಿ ದಾಖಲೆ ಬರೆದಿದ್ದಾರೆ.    

click me!