ಪವನ್ ಕುಮಾರ್ ಶೇರಾವತ್ ಮತ್ತೊಮ್ಮೆ ಸ್ಟಾರ್
ಗುಜರಾತ್ ಜೈಂಟ್ಸ್ ವಿರುದ್ಧ ದೊಡ್ಡ ಅಂತರದ ಗೆಲುವು
ದಿನದ ಮೊದಲ ಪಂದ್ಯದಲ್ಲಿ ಪಟನಾ ಪೈರೇಟ್ಸ್ ತಂಡವನ್ನು ಸೋಲಿಸಿದ ಜೈಪುರ
ಬೆಂಗಳೂರು (ಜ. 14): ಸಂಕ್ರಾಂತಿ ದಿನದಂದು ಕಬಡ್ಡಿ ಕೋರ್ಟ್ ನಲ್ಲಿ ಕಿಚ್ಚೆಬ್ಬಿಸಿದ ಬೆಂಗಳೂರು ಬುಲ್ಸ್ (Bengaluru Bulls) ತಂಡ ಗುಜರಾತ್ ಜೈಂಟ್ಸ್ ತಂಡವನ್ನು ದೊಡ್ಡ ಅಂತರದಲ್ಲಿ ಸೋಲಿಸುವ ಮೂಲಕ 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ನ (Pro Kabaddi League) ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ 46-37 ಅಂಕಗಳಿಂದ ಬಲಿಷ್ಠ ಗುಜರಾತ್ ಜೈಂಟ್ಸ್ (Gujarat Giants) ತಂಡವನ್ನು ಸೋಲಿಸಿತು. ಇದು ಕಳೆದ 10 ಪಂದ್ಯಗಳಲ್ಲಿ ಬುಲ್ಸ್ ತಂಡದ 7ನೇ ಗೆಲುವಾಗಿದ್ದು ಅಂಕಪಟ್ಟಿಯಲ್ಲಿ 38 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದೆ.
ಗುಜರಾತ್ ಜೈಂಟ್ಸ್ ವಿರುದ್ಧ ಬೆಂಗಳೂರು ತಂಡದ ಗೆಲುವಿನಲ್ಲಿ ಮತ್ತೊಮ್ಮೆ ಮಿಂಚಿದ್ದು ನಾಯಕ ಪವನ್ ಕುಮಾರ್ ಶೇರಾವತ್. ಒಟ್ಟಾರೆ 19 ಅಂಕಗಳನ್ನು ಸಂಪಾದಿಸಿದ ಪವನ್ ಕುಮಾರ್ ಗೆ ಮತ್ತೊಬ್ಬ ರೈಡರ್ ಭರತ್ ಅವರಿಂದ ಉತ್ತಮ ಸಾಥ್ ಸಿಕ್ಕಿತು. ಇನ್ನೊಂದೆಡೆ ಗುಜರಾತ್ ತಂಡದ ಪರವಾಗಿ ರೈಡರ್ ರಾಕೇಶ್ 14 ಅಂಕಗಳಿಸಿ ಗಮನಸೆಳೆದರು. ವಿರಾಮದ ವೇಳೆ 22-17 ಅಂಕಗಳಿಂದ ಮುನ್ನಡೆಯಲ್ಲಿದ್ದ ಬುಲ್ಸ್, 2ನೇ ಅವಧಿಯ ಆಟದಲ್ಲೂ ಗುಜರಾತ್ ಹೋರಾಟವನ್ನು ಕಟ್ಟಿಹಾಕುವ ಮೂಲಕ 7ನೇ ಗೆಲುವು ದಾಖಲಿಸಿತು.
ಪಂದ್ಯದಲ್ಲಿ ಆರಂಭದಲ್ಲಿಯೇ ಜೈಂಟ್ಸ್ ತಂಡ ರಾಕೇಶ್ ಅವರ ಭರ್ಜರಿ ನಿರ್ವಹಣೆಯ ಮೂಲಕ 4-1 ಮುನ್ನಡೆ ಪಡೆದುಕೊಂಡಿತ್ತು. ಆದರೆ, ಸತತ 5 ಅಂಕಗಳ ಮೂಲಕ ಬುಲ್ಸ್ ತಿರುಗೇಟು ನೀಡಿತು. ಆದರೆ, ಪವನ್ ಶೇರಾವತ್ ಒಮ್ಮೆ ಲಯ ಕಂಡುಕೊಂಡ ಬಳಿಕ ಬುಲ್ಸ್ ಹಿಂತಿರುಗಿ ನೋಡಲಿಲ್ಲ. 2ನೇ ಅವಧಿಯ ಆರಂಭದಲ್ಲಿಯೇ ಆಕರ್ಷಕ ದಾಳಿಯ ಮೂಲಕ ಬುಲ್ಸ್ ಮುನ್ನಡೆಯನ್ನು ಏರಿಸಿಕೊಂಡಿತು. ಬೆಂಗಳೂರು ಪರವಾಗ ಡಿಫೆನ್ಸ್ ವಿಭಾಗದಲ್ಲಿ ಮಿಂಚಿದ ಸೌರಭ್ ನಂದಲ್ ಮೂರು ಅಂಕ ಸಂಪಾದನೆ ಮಾಡಿದರು.
Bengaluru Bulls after reaching the 🔝 tonight! 🤩
Meanwhile Patna Pirates and Dabang Delhi K.C: 🤜💥🤛
Superhit Pange mein action dekhne ke baad ab points table par ek jhalak ho jaye! 😉
Which team looks the strongest? 🤔 pic.twitter.com/P3lIr48Ejr
ದಿನದ ಮೊದಲ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ (Jaipur Pink Panthers) ತಂಡ 38-29 ಅಂಕಗಳಿಂದ ಪಟನಾ ಪೈರೇಟ್ಸ್ (Patna Pirates)ತಂಡವನ್ನು ಸೋಲಿಸಿತು. ಈ ಜಯದೊಂದಿಗೆ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ 28 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. ನಾಯಕ ದೀಪಕ್ ನಿವಾಸ್ ಹೂಡಾ ಹಾಗೂಅರ್ಜುನ್ ದೇಶ್ವಾಲ್ ಅವರು ಜಂಟಿಯಾಗಿ ಸಂಪಾದನೆ ಮಾಡಿದ 19 ಅಂಕಗಳ ನೆರವಿನಿಂದ ಅಜೇಯ ಓಟದಲ್ಲಿದ್ದ ಪಟನಾ ಪೈರೇಟ್ಸ್ ಕೊನೆಗೂ ಸೋಲು ಕಂಡಂತಾಯಿತು. ಸತತ ಆರು ಪಂದ್ಯಗಳಿಂದ ಅಜೇಯವಾಗುಳಿದಿದ್ದ ಪಟನಾ ಪೈರೇಟ್ಸ್ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಕುಸಿದಿದೆ.
Pro Kabaddi League: ಪವನ್ ಶೆರಾವತ್ ಬಿರುಗಾಳಿ, ಡೆಲ್ಲಿ ಎದುರು ಬುಲ್ಸ್‌ಗೆ ಭರ್ಜರಿ ಜಯಭೇರಿ
ಮೊದಲ 10 ನಿಮಿಷದ ಆಟದಲ್ಲ ಎರಡೂ ತಂಡದ ರೈಡರ್ ಗಳು ಗಮನಸೆಳೆದರು. ಈ ಅವಧಿಯಲ್ಲಿ ದಾಖಲಾದ 13 ಅಂಕಗಳ ಪೈಕಿ 11 ಅಂಕಗಳನ್ನು ರೈಡರ್ ಗಳೇ ಪಡೆದಿದ್ದರು. ಮೊದಲ ಅವಧಿಯ ಆಟದಲ್ಲಿಯೇ ಪೈರೇಟ್ಸ್ ತಂಡವನ್ನು ಆಲೌಟ್ ಮಾಡುವಲ್ಲಿ ಯಶ ಕಂಡಿದ್ದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ವಿರಾಮದ ವೇಳೆಗೆ 18-12 ಅಂಕಗಳ ಸ್ಪಷ್ಟ ಮುನ್ನಡೆ ಪಡೆದುಕೊಂಡಿತ್ತು. ವಿರಾಮದ ಬಳಿಕ ಪ್ರಶಾಂತ್ ಕುಮಾರ್ ರೈ (Prashanth Kumar Rai)ಅವರ ಸತತ ಎರಡು ಅಂಕಗಳು ಪೈರೇಟ್ಸ್ ನ ಹಿನ್ನಡೆಯನ್ನು ತಗ್ಗಿಸಿದ್ದವು. ಆದರೆ, ಕೊನೆಯಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸುವಲ್ಲಿ ಯಶ ಕಂಡ ಜೈಪುರ ಗೆಲುವು ಸಾಧಿಸುವಲ್ಲಿ ಯಶ ಕಂಡಿತು.
ಜೈಪುರ ಪರವಾಗಿ ದೀಪಕ್ ಹೂಡಾ 10 ಅಂಕ ಸಂಪಾದನೆ ಮಾಡಿದರೆ, ಡಿಫೆಂಡರ್ ಸಾಹುಲ್ ಕುಮಾರ್ 4 ಅಂಕ ಸಂಪಾದಿಸಿದುರ. ಪಟನಾ ಪರವಾಗಿ ಪ್ರಶಾಂತ್ ಕುಮಾರ್ ರೈ 6 ಅಂಕ ಸಂಪಾದಿಸಿದರೆ, ನೀರಜ್ ಕುಮಾರ್ ಡಿಫೆಂಡಿಂಗ್ ಲ್ಲಿ 2 ಅಂಕ ಪಡೆದರು.