ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಬಂಗಾರದ ಸಾಧನೆ ಮಾಡಿದೆ. ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲೇ ಈ ಬಾರಿ ಭಾರತ ಶ್ರೇಷ್ಠ ಪ್ರದರ್ಶನ ನೀಡಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಪ್ಯಾರಿಸ್: 17ನೇ ಆವೃತ್ತಿ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಪದಕ ಗಳಿಕೆಯ ನಾಗಾಲೋಟ ಮುಂದುವರಿದಿದೆ. ಶುಕ್ರವಾರ ದೇಶದ ಪದಕ ಖಾತೆಗೆ ಮತ್ತೆ ಎರಡು ಪದಕ ಸೇರ್ಪಡೆಗೊಂಡಿತು. ಪುರುಷರ ಹೈಜಂಪ್ ಟಿ64 ವಿಭಾಗ ದಲ್ಲಿ ಪ್ರವೀಣ್ ಕುಮಾರ್ ಏಷ್ಯಾ ದಾಖಲೆಯೊಂದಿಗೆ ಬಂಗಾರದ ಪದಕಕ್ಕೆ ಕೊರಳೊಡ್ಡಿದರು. ಇದರೊಂದಿಗೆ ಭಾರತದ ಪದಕ ಸಂಖ್ಯೆ 27ಕ್ಕೆ ಹೆಚ್ಚಳವಾಗಿದೆ. ಭಾರತ ಈ ಬಾರಿ 6 ಚಿನ್ನದ ಪದಕ ಗೆದ್ದಿದ್ದು, 9 ಬೆಳ್ಳಿ, 12 ಕಂಚಿನ ಪದಕಗಳೂ ದೇಶದ ಖಾತೆಗೆ ಸೇರ್ಪಡೆಗೊಂಡಿವೆ.
ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ನೋಯ್ಡಾದ 21 ವರ್ಷದ ಪ್ರವೀಣ್ ಕುಮಾರ್ 2.08 ಮೀ. ಎತ್ತರಕ್ಕೆ ನೆಗೆದರು. ಈ ಮೂಲಕ ಅವರು ಏಷ್ಯನ್ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು. ಮೊದಲ ಪ್ರಯತ್ನದಲ್ಲಿ 1.89 ಮೀ. ಎತ್ತರಕ್ಕೆ ನೆಗೆದ ಪ್ರವೀಣ್, ಬಳಿಕ 1.93 ಮೀಟರ್, 1.97 ಮೀಟರ್, 2.00 ಮೀಟರ್, 2.03 ಮೀಟರ್, 2.06 ಮೀಟರ್ ಪ್ರಯತ್ನಗಳಲ್ಲೂ ಸಫಲರಾದರು. ಬಳಿಕ 2.08 ಮೀ. ಎತ್ತರಕ್ಕೆ ಹಾರುವ ಎಲ್ಲಾ 3 ಪ್ರಯತ್ನಗಳಲ್ಲಿ ಯಶಸ್ಸು ಸಾಧಿಸುವ ಮೂಲಕ ಅಗ್ರಸ್ಥಾನ ಗಿಟ್ಟಿಸಿಕೊಂಡರು. ಅಮೆರಿಕದ ಡೆರೆಕ್ ಲಾಕಿ ಡೆಂಡ್ 2.06 ಮೀ. ಎತ್ತರಕ್ಕೆನೆಗೆದು ಬೆಳ್ಳಿ ಪದಕ ಪಡೆದರೆ, ಉಜೇಕಿಸ್ತಾನದ ಟೆಮುರ್‌ಬೆಕ್ ಗಿಯಾಜೊವ್ 2.03 ಮೀ. ಎತ್ತರಕ್ಕೆ ಹಾರಿ ಕಂಚಿನ ಪದಕ ಜಯಿಸಿದರು.
undefined
ಏನಿದು ಟಿ44-ಟಿ64?
864 ಅಂದರೆ ಒಂದು ಕಾಲಿನ ಚಲನೆಯಲ್ಲಿ ಸಮಸ್ಯೆಯಿದ್ದರೆ ಅಥವಾ ಮೊಣಕಾಲಿನ ಕೆಳಗೆ ಒಂದು/ಎರಡು ಕಾಲು ತುಂಡಾಗಿರುವ ಕ್ರೀಡಾ ಪಟುಗಳು ಸ್ಪರ್ಧಿಸುವ ವಿಭಾಗ. ಆದರೆ ಪ್ರವೀಣ್ 844 ವಿಭಾಗಕ್ಕೆ ಸೇರುತ್ತಾರೆ. ಅಂದರೆ ಕಾಲಿನ ಕೆಳ ಭಾಗದ ಚಲನೆಯಲ್ಲಿ ಸಮಸ್ಯೆಯಿರುವ ಕ್ರೀಡಾಪ ಟುಗಳು ಸ್ಪರ್ಧಿಸುವ ವಿಭಾಗ. ಈ ಎರಡೂ ವಿಭಾಗಗಳ ಸ್ಪರ್ಧೆ ಒಟ್ಟಿಗೇ ನಡೆಯುತ್ತದೆ.
ಸೆಮಾ ಹೊಕಾಟೊಗೆ ಶಾಟ್‌ಪುಟ್ ಕಂಚು
ಶುಕ್ರವಾರ ಭಾರತಕ್ಕೆ 2ನೇ ಪದಕ ತಂದು ಕೊಟ್ಟಿದ್ದು ಶಾಟ್‌ಪುಟ್ ಆಟಗಾರ ಸೆಮಾ ಹೊಕಾಟೊ. ಪುರುಷರ ಎಫ್57 ವಿಭಾಗದ ಸ್ಪರ್ಧೆಯಲ್ಲಿ 40 ವರ್ಷದ ಸೆಮಾ ತಮ್ಮ 4ನೇ ಪ್ರಯತ್ನದಲ್ಲಿ 14.65 ಮೀ. ದೂರಕ್ಕೆ ಶಾಟ್‌ಪುಟ್ ಎಸೆದು 3ನೇ ಸ್ಥಾನಿಯಾದರು. ಮೊದಲ ಪ್ರಯತ್ನದಲ್ಲಿ 13.88 ಮೀ. ದೂರ ದಾಖಲಿಸಿದ್ದ ಅವರು, 2 ಮತ್ತು 3ನೇ ಪ್ರಯತ್ನದಲ್ಲಿ ಕ್ರಮವಾಗಿ 14.00 ಮೀ. ಹಾಗೂ 14.40 ದೂರ ಎಸೆದರು. ಆದರೆ 4ನೇ ಪ್ರಯತ್ನದಲ್ಲಿ ವೈಯಕ್ತಿಕ ಶ್ರೇಷ್ಠ 14.65 ಮೀ. ದೂರಕ್ಕೆ ಶಾಟ್‌ಪುಟ್ ಎಸೆದ ಸೆಮಾ ಹೊಕಾಟೊ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಇರಾನ್‌ನ ಸವಿ ಯಾಸಿನ್ 15.96 ಮೀ. ದೂರ ದಾಖಲಿಸಿ ಚಿನ್ನ ಸಂಪಾದಿಸಿದರೆ, ಬ್ರೆಜಿಲ್‌ನ ಪೌಲಿನೊ ಸಾಂಟೊಸ್ (15.06 ಮೀ.) ಬೆಳ್ಳಿ ಜಯಿಸಿದರು. ಭಾರತದ ಮತ್ತೋರ್ವ ಸ್ಪರ್ಧಿ ರಾಣಾ ಸೋಮನ್ 14.07 ಮೀ. ದೂರ ದಾಖಲಿಸಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಅವರು ಉಳಿದ 5 ಪ್ರಯತ್ನಗಳಲ್ಲಿ 14 ಮೀ. ಗಡಿ ದಾಟಲು ವಿಫಲರಾದರು.
Breaking: ಅಯ್ಯೋ ದೇವರೇ.. ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ ಈ ಕ್ರಿಕೆಟಿಗ, ಐಸಿಯುಗೆ ದಾಖಲು..!
ಬಂಗಾರದ ದಾಖಲೆ ಬರೆದ ಭಾರತ
ಈ ಬಾರಿ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಮತ್ತೊಂದು ದಾಖಲೆ ನಿರ್ಮಿಸಿದೆ. ಪ್ಯಾರಾಲಿಂಪಿಕ್ಸ್ ಆವೃತ್ತಿಯಯೊಂದರಲ್ಲಿ ಗರಿಷ್ಠ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದೆ. ಈ ಬಾರಿ ಭಾರತಕ್ಕೆ ಒಟ್ಟು 6 ಚಿನ್ನದ ಪದಕ ಲಭಿಸಿದೆ. ಈ ಮೂಲಕ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಗೆದ್ದಿದ್ದ 5 ಚಿನ್ನದ ಪದಕಗಳ ದಾಖಲೆ ಪತನಗೊಂಡಿತು.
ಮೊದಲ ಸಲ ಅಗ್ರ-20ರಲ್ಲಿ ಸ್ಥಾನ ಗಿಟ್ಟಿಸುವ ವಿಶ್ವಾಸ
ಭಾರತ ಸದ್ಯ ಪ್ಯಾರಿಸ್ ಕ್ರೀಡಾಕೂಟದ ಪದಕ ಪಟ್ಟಿಯಲ್ಲಿ 14ನೇ ಸ್ಥಾನದಲ್ಲಿದೆ. ಇದು ಈವರೆಗಿನ ಶ್ರೇಷ್ಠ ಪ್ರದರ್ಶನ. ಕ್ರೀಡಾಕೂಟ ಇನ್ನೂ 2 ದಿನ ಬಾಕಿಯಿದ್ದು, ಭಾರತ ಅಗ್ರ-10ರಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಕಾತರದಲ್ಲಿದೆ. ಅದಾಗ್ಯೂ ಭಾರತ ಇದೇ ಮೊದಲ ಬಾರಿ ಅಗ್ರ-20ರೊಳಗೆ ಸ್ಥಾನ ಪಡೆಯುವ ಎಲ್ಲಾ ಸಾಧ್ಯತೆಗಳಿವೆ. 1972ರಲ್ಲಿ ಕೇವಲ 1 ಚಿನ್ನ ಗೆದ್ದಿದ್ದ ಭಾರತ, ಪದಕ ಪಟ್ಟಿಯಲ್ಲಿ 25ನೇ ಸ್ಥಾನ ಪಡೆದಿತ್ತು. ಟೋಕಿಯೋ ಒಲಿಂಪಿಕ್ಸ್‌ನಲ್ಲಿ 24ನೇ ಸ್ಥಾನಿಯಾಗಿದ್ದು ಭಾರತದ ಈವರೆಗಿನ ಶ್ರೇಷ್ಠ ಪ್ರದರ್ಶನ.
25 ಮೆಡಲ್: ಜೈಕಾರ ಕೂಗಿ ಸಂಭ್ರಮಿಸಿದ ಭಾರತ
ಪ್ಯಾರಾಲಿಂಪಿಕ್ಸ್‌ನಲ್ಲಿ 25 ಪದಕಗಳ ಗುರಿ ಸಾಧಿಸಿದ ಹಿನ್ನೆಲೆಯಲ್ಲಿ ಪ್ಯಾರಿಸ್‌ನ ಕ್ರೀಡಾ ಗ್ರಾಮದಲ್ಲಿ ಭಾರತದ ಕ್ರೀಡಾಪಟುಗಳು, ಕೋಚ್‌ಗಳು ಹಾಗೂ ಅಧಿಕಾರಿಗಳು ಸಂಭ್ರಮಾಚರಣೆ ನಡೆಸಿದರು. ಭಾರತ ಜಿಂದಾಬಾದ್ ಎಂದು ಘೋಷಣೆ ಕೂಗಿ ಸಂತಸಪಟ್ಟರು.