ವಿಶ್ವ ಕುಸ್ತಿ ನಿಯಮದಲ್ಲಿನ ಲೋಪ ವಿನೇಶ್‌ ಫೋಗಟ್‌ಗೆ ವರವಾಗುತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

Published : Aug 14, 2024, 10:33 AM IST
ವಿಶ್ವ ಕುಸ್ತಿ ನಿಯಮದಲ್ಲಿನ ಲೋಪ ವಿನೇಶ್‌ ಫೋಗಟ್‌ಗೆ ವರವಾಗುತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

ಸಾರಾಂಶ

ಪ್ಯಾರಿಸ್ ಒಲಿಂಪಿಕ್ಸ್‌ ಮುಗಿದರೂ ವಿನೇಶ್ ಫೋಗಟ್‌ ಅವರ ಪದಕದ ವಿವಾದ ಇನ್ನೂ ಬಗೆಹರಿದಿಲ್ಲ. ಆದರೆ  ವಿಶ್ವ ಕುಸ್ತಿ ನಿಯಮದಲ್ಲಿನ ಲೋಪ ವಿನೇಶ್‌ ಫೋಗಟ್‌ಗೆ ವರವಾಗುವ ಸಾಧ್ಯತೆಯಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಪ್ಯಾರಿಸ್: ವಿಶ್ವ ಕುಸ್ತಿ ಫೆಡರೇಶನ್‌ನ ನಿಯಮದಲ್ಲಿನ ಲೋಪದೋಷ, ವಿನೇಶ್‌ ಫೋಗಟ್‌ರ ಪ್ರಕರಣಕ್ಕೆ ಸಹಕಾರಿಯಾಗುತ್ತಾ ಎನ್ನುವ ಚರ್ಚೆ ಕ್ರೀಡಾ ವಲಯದಲ್ಲಿ ನಡೆಯುತ್ತಿದೆ. ಫೈನಲ್‌ನಿಂದ ವಿನೇಶ್‌ ಅನರ್ಹಗೊಂಡ ಬಳಿಕ ಅವರ ವಿರುದ್ಧ ಸೆಮಿಫೈನಲ್‌ನಲ್ಲಿ ಸೋತಿದ್ದ ಕ್ಯೂಬಾದ ಯೂಸ್ನೇಲೈಸ್‌ ಗುಜ್ಮನ್‌ ಫೈನಲ್‌ಗೆ ಪ್ರವೇಶ ಪಡೆದರು. ಆದರೆ ವಿನೇಶ್‌ ವಿರುದ್ಧ ಮೊದಲ ಸುತ್ತಿನಲ್ಲಿ ಸೋತಿದ್ದ ಜಪಾನ್‌ನ ಯುಹಿ ಸುಸಾಕಿಗೆ ರಿಪಿಕೇಜ್‌ ಸುತ್ತಿಗೆ ಪ್ರವೇಶ ನೀಡಲಾಯಿತು. ಸುಸಾಕಿ ಕಂಚಿನ ಪದಕ ಸಹ ಗೆದ್ದರು. 

ನಿಯಮದ ಪ್ರಕಾರ, ಫೈನಲ್‌ ಪ್ರವೇಶಿಸಿದ ಕುಸ್ತಿಪಟುಗಳ ವಿರುದ್ಧ ಮೊದಲ ಸುತ್ತಿನಿಂದ ಕ್ವಾರ್ಟರ್‌ ಫೈನಲ್‌ ವರೆಗಿನ ಪಂದ್ಯಗಳಲ್ಲಿ ಸೋತವರಿಗೆ ರಿಪಿಕೇಜ್‌ ಸುತ್ತಿಗೆ ಪ್ರವೇಶ ಸಿಗಲಿದೆ. ಆ ಸುತ್ತಿನಲ್ಲಿ ಆಡಿ ಕಂಚಿನ ಪದಕ ಗೆಲ್ಲುವ ಅವಕಾಶವಿರಲಿದೆ. ಈ ಪ್ರಕರಣದಲ್ಲಿ ವಿನೇಶ್‌ರ ಬದಲು ಫೈನಲ್‌ನಲ್ಲಿ ಆಡಿದ್ದ ಗುಜ್ಮನ್‌. ಹೀಗಾಗಿ, ಅವರ ವಿರುದ್ಧ ಸೋತಿದ್ದ ಎದುರಾಳಿಗಳಿಗೆ ರಿಪಿಕೇಜ್‌ ಸುತ್ತಿಗೆ ಪ್ರವೇಶ ಸಿಗಬೇಕಿತ್ತು. ವಿನೇಶ್‌ ಅನರ್ಹಗೊಂಡ ಬಳಿಕ ಮೊದಲ ಸುತ್ತಿನಿಂದ ಅವರು ಸಾಧಿಸಿದ ಗೆಲುವುಗಳೆಲ್ಲವೂ ಅಮಾನ್ಯಗೊಂಡವು.

Breaking: ವಿನೇಶ್‌ ಪೋಗಟ್‌ 'ಬೆಳ್ಳಿ' ತೀರ್ಪು ಆಗಸ್ಟ್‌ 16ಕ್ಕೆ ಮುಂದೂಡಿದ ಸಿಎಎಸ್‌!

ಹೀಗಾಗಿ, ವಿನೇಶ್‌ ವಿರುದ್ಧ ಸೋತ ಸುಸಾಕಿಗೆ ರಿಪಿಕೇಜ್‌ ಸುತ್ತಿಗೆ ಪ್ರವೇಶ ನೀಡಿದ್ದು ನಿಯಮದಲ್ಲಿರುವ ಲೋಪ ಎಂದು ಕೆಲ ತಜ್ಞರು ಅಭಿಪ್ರಾಯಿಸಿದ್ದಾರೆ. ವಿನೇಶ್‌ ಪರ ವಕೀಲರು ಈ ಲೋಪದೋಷವನ್ನು ನ್ಯಾಯಪೀಠದ ಮುಂದೆ ಎತ್ತಿ ತೋರಿಸಿ, ಬೆಳ್ಳಿ ಪದಕಕ್ಕೆ ಭಾರತೀಯ ಕುಸ್ತಿಪಟು ಅರ್ಹರು ಎಂದು ವಾದಿಸಿದ್ದಾರೆ ಎಂದು ತಿಳಿದುಬಂದಿದೆ.

ಪ್ಯಾರಿಸ್: ಜಾಗತಿಕ ಕ್ರೀಡಾನ್ಯಾಯಾಲಯ (ಸಿಎಎಸ್)ನತಾತ್ಕಾಲಿಕ ಪೀಠವು

ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್‌ ಬೆಳ್ಳಿ ಪದಕದ ತೀರ್ಪನ್ನು 3ನೇ ಬಾರಿಗೆ ಮುಂದೂಡಿದೆ. ಮಂಗಳವಾರ ರಾತ್ರಿ ಪ್ರಕಟಗೊಳ್ಳಬೇಕಿದ್ದ ತೀರ್ಪು, ಆ.16ರ ರಾತ್ರಿ 9.30 (ಭಾರತೀಯ ಕಾಲಮಾನ)ಕ್ಕೆ ಪ್ರಕಟಿಸುವುದಾಗಿ ಸಿಎಎಸ್ ತಿಳಿಸಿದೆ. ಮಹಿಳೆಯರ 50 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದ 29 ವರ್ಷದ ವಿನೇಶ್ ತೂಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಕಾರಣ, ಫೈನಲ್‌ಗೂ ಮುನ್ನ ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಲಾಗಿತ್ತು. 

ನೀರಜ್ ಚೋಪ್ರಾ ಜೊತೆ ಮಗಳ ಮದುವೆ : ಗಾಸಿಪ್‌ ಬಗ್ಗೆ ಮನು ಭಾಕರ್ ತಂದೆ ಹೇಳಿದ್ದೇನು

ವಿನೇಶ್ ನಿಗದಿತ ತೂಕಕ್ಕಿಂತ 100 ಗ್ರಾಂ ಹೆಚ್ಚಿಗೆ ಇದ್ದರು. ಅನರ್ಹತೆ ಪ್ರಶ್ನಿಸಿ ವಿನೇಶ್ ಕಳೆದ ವಾರ ಸಿಎಎಸ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ತಾವು ನ್ಯಾಯಯುತವಾಗಿ ಫೈನಲ್ ಪ್ರವೇಶಿಸಿದ್ದು, ತಮಗೆ ಜಂಟಿ ಬೆಳ್ಳಿ ಪದಕ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿ ಸ್ವೀಕರಿಸಿದ್ದ ಸಿಎಎಸ್, ಒಲಿಂಪಿಕ್ಸ್ ಮುಗಿಯುವ ಮುನ್ನ ತೀರ್ಪು ನೀಡುವುದಾಗಿ ತಿಳಿಸಿತ್ತು. ಬಳಿಕ ಆ.13ಕ್ಕೆ ಮುಂದೂಡಿಕೆಯಾಗಿತ್ತು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್; ಟೂರ್ನಿಯ ವೇಳಾಪಟ್ಟಿ ಪ್ರಕಟ, ಟಿಕೆಟ್ ಬುಕಿಂಗ್ ಆರಂಭ
ಸತತ ಎರಡನೇ ಬಾರಿಗೆ ಭಾರತ ಮಹಿಳೆಯರಿಗೆ ಒಲಿದ ಕಬಡ್ಡಿ ವಿಶ್ವಕಪ್ ಚಾಂಪಿಯನ್ ಪಟ್ಟ!