ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ಬೇಟೆಗೆ ಭಾರತದ ಕುಸ್ತಿಪಟುಗಳಿಗೆ ಟಾಟಾ ಮೋಟಾರ್ಸ್ ಬೆಂಬಲ

By Suvarna NewsFirst Published Aug 28, 2021, 3:43 PM IST
Highlights
  • ಟಾಟಾ ಮೋಟಾರ್ಸ್ ಮತ್ತು ಕುಸ್ತಿ ಫೆಡರೇಷನ್ ಆಫ್ ಇಂಡಿಯಾ ಸಹಭಾಗಿತ್ವ 
  • ಕುಸ್ತಿ ಪಟುಗಳಿಗೆ ಸಮಗ್ರ ಬೆಂಬಲ, ಕ್ರೀಡಾಪಟುಗಳಿಗೆ ಕಲ ನೆರವು
  •  ಪೌಷ್ಠಿಕ ಆಹಾರ, ವೈದ್ಯಕೀಯ, ಫಿಸಿಯೋಥೆರಪಿ,  ವಿಶ್ವದರ್ಜೆಯ ತರಬೇತಿ
     

ಬೆಂಗಳೂರು(ಆ.28): ದೇಶದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕ ಟಾಟಾ ಮೋಟಾರ್ಸ್ ಮತ್ತು ಭಾರತದ ಕುಸ್ತಿ ಫೆಡರೇಷನ್ (WFI) ತಮ್ಮ ಸುಧೀ‍ರ್ಘ ಸಹಭಾಗಿತ್ವವನ್ನು  ಮತ್ತಷ್ಟು ಬಲಪಡಿಸಿವೆ.  'ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಚಿನ್ನದ ದಕವನ್ನು ಗೆಲ್ಲುವ  ಉದ್ದೇಶದೊಂದಿಗೆ ಕ್ರೀಡಾಪಟುಗಳ ಸಮಗ್ರ ಅಭಿವೃದ್ಧಿ ಕಾರ್ಯಕ್ರಮ ಇದಾಗಿದೆ. ಇದರ ಭಾಗವಾಗಿ, WFI, ಟಾಟಾ ಮೋಟಾರ್ಸ್ ನ ಬೆಂಬಲದೊಂದಿಗೆ, ಸೂಕ್ತ ಅತ್ಯಾಧುನಿಕ ಮೂಲಸೌಕರ್ಯ, ವೇದಿಕೆ, ಅವಕಾಶಗಳು, ಭದ್ರತೆಗೆ  ಒದಗಿಸುವ ಮೂಲಕ ವಿವಿಧ ವಯಸ್ಸಿನ ವಿಭಾಗಾದಾದ್ಯಂತ ಪುರುಷರು ಮತ್ತು ಮಹಿಳಾ ಕುಸ್ತಿ ಪಟುಗಳ ಬೆಳವಣಿಗೆ ಮೇಲೆ ವಿಶೇಷ ಗಮನ ಹರಿಸಲಿದೆ.

ಪದಕ ಮಿಸ್ ಮಾಡಿಕೊಂಡ ಒಲಿಂಪಿಕ್ ಪಟುಗಳಿಗೆ ಟಾಟಾ ಅಲ್ಟ್ರೋಜ್ ಕಾರು ಗಿಫ್ಟ್!

ಯುವ ಮತ್ತು ಪ್ರತಿಭಾವಂತ ಭಾರತೀಯ ಕುಸ್ತಿ ಪಟುಗಳಾದ “ಯೋದಾಸ್” ವಿಶ್ವದರ್ಜೆಯ ತರಬೇತಿ ಸೌಲಭ್ಯಗಳು, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರಾಂತ ತರಬೇತುದಾರರು ಮತ್ತು  ಉತ್ತಮ ಗುಣಮಟ್ಟದ ಪೌಷ್ಠಿಕ ಕಾರ್ಯಕ್ರಮದ ಮೂಲಕ ಬೆಂಬಲವನ್ನು ಪಡೆಯುವ ಭರವಸೆಯನ್ನು ಪಡೆಯುತ್ತಿದ್ದಾರೆ.  ಈ ಕಾರ್ಯಕ್ರಮದ ಭಾಗವಾಗಿ, ಅರ್ಹ  ಹಿರಿಯ ಕುಸ್ತಿಪಟುಗಳಿಗೆ ಸೆಂಟ್ರಲ್ ಕಾಂಟ್ರಾಕ್ಟ್ ಗಳನ್ನು ನೀಡಲಾಗುವುದು ಹಾಗೂ  ಉದಯೋನ್ಮುಖ ಕಿರಿಯ ಕುಸ್ತಿಪಟುಗಳಿಗೆ ವಿಮಾ ರಕ್ಷಣೆ, ವೈದ್ಯಕೀಯ ಮತ್ತು ಫಿಸಿಯೋಥೆರಪಿ ಸಹಾಯದ ಜೊತೆಗೆ ಸಾತ್ವಿಕ ವಿದ್ಯಾರ್ಥಿವೇತನ ನೀಡುವ ಮೂಲಕ ಹೆಚ್ಚಿನ ಬೆಂಬಲ ನೀಡಲಾಗುವುದು.

ಟಾಟಾ ಮೋಟಾರ್ಸ್ 2018 ರಿಂದ ನೀಡಿದ ಬದ್ಧತೆಯ ಬೆಂಬಲವು ಭಾರತೀಯ ಕುಸ್ತಿಯು ಹೆಚ್ಚಿನ ಎತ್ತರಕ್ಕೆ ಬೆಳೆಯಲು ಸಹಾಯ ಮಾಡಿದೆ. ಕಳೆದ 3 ವರ್ಷಗಳಲ್ಲಿ, ನಮ್ಮ 'ಯೋಧಾಸ್' (ಕುಸ್ತಿಪಟುಗಳು) ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ 40-50 ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿದ್ದಾರೆ.  ಸೀನಿಯರ್ ವರ್ಲ್ಡ್ ರೆಸ್ಲಿಂಗ್ ಚಾಂಪಿಯನ್ ಶಿಪ್ ನಲ್ಲಿ 5 ಪದಕಗಳು - ಭಾರತಕ್ಕೆ ಅತಿ ಹೆಚ್ಚು. ಈಗಷ್ಟೇ ಮುಕ್ತಾಯಗೊಂಡ ಜೂನಿಯರ್ ವಿಶ್ವ ಚಾಂಪಿಯನ್ ಶಿಪ್ ನಲ್ಲಿ 11 ಪದಕಗಳನ್ನು ಮತ್ತು ಇತ್ತೀಚೆಗೆ ನಡೆದ ಟೋಕಿಯೊ ಒಲಿಂಪಿಕ್ಸ್ ನಲ್ಲಿ 2 ಪದಕಗಳನ್ನು ಗೆದ್ದಿದೆ. ಕೆಡೆಟ್ ಕುಸ್ತಿ ತಂಡವೂ ವಿಶ್ವ ಚಾಂಪಿಯನ್ ಶಿಪ್ ನ ಮೊದಲ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇಂದು ನಮ್ಮ ಜಂಟಿ ಅನ್ವೇಷಣೆಯ ಆರಂಭವಾಗಿದ್ದು, ಮುಂದಿನ 2024 ರ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಕುಸ್ತಿಯಲ್ಲಿ ಒಲಿಂಪಿಕ್ಸ್ ಚಿನ್ನದ ಪದಕ ಗೆಲ್ಲುವ ಇಡೀ ರಾಷ್ಟ್ರದ ಸುದೀರ್ಘವಾದ  ಆಕಾಂಕ್ಷೆಯನ್ನು ಪೂರೈಸಲು ನಮಗೆ ಅವಕಾಶ ಮಾಡಿಕೊಡುತ್ತದೆ ಎಂದರು ಎಂದು  ಕುಸ್ತಿ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷ   ಬ್ರಿಜ್ ಭೂಷಣ್ ಶರಣ್ ಸಿಂಗ್  ಹೇಳಿದರು.

ಚಿನ್ನದ ಹುಡುಗನಿಗೆ ರಕ್ಷಣಾ ಸಚಿವರಿಂದ ಸನ್ಮಾನ; ಕ್ರೀಡಾಂಗಣಕ್ಕೆ ನೀರಜ್ ಚೋಪ್ರಾ ಹೆಸರು!

ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ ಯಶಸ್ವಿ ಭಾರತೀಯ ಕುಸ್ತಿ ತಂಡವನ್ನು ಟಾಟಾ ಮೋಟಾರ್ಸ್ ಗೌರವಿಸಿದೆ.  ಅವರ ವೀರತ್ವ ಮತ್ತು ಯಶಸ್ಸಿನ ಗೌರವ, ಮೆಚ್ಚುಗೆ ಮತ್ತು ಆಚರಣೆಯನ್ನು ತಿಳಿಸಲು ಪ್ರತಿಯೊಬ್ಬ ಸದಸ್ಯನಿಗೂ ಅದರ  ರಫ್ ಮತ್ತು ರಗಡ್ ಆದಾ  ಟಾಟಾ ಯೋಧಾ ಪಿಕ್-ಅಪ್ ಅನ್ನು ನೀಡುವ  ಮೂಲಕ ಗೌರವಿಸಿತು. ಒಲಿಂಪಿಕ್ ಬೆಳ್ಳಿ ಪದಕ ವಿಜೇತ ರವಿ ಕುಮಾರ್ ದಹಿಯಾ, ಕಂಚಿನ ಪದಕ ವಿಜೇತ ಭಜರಂಗ್ ಪುನಿಯಾ ಅವರೊಂದಿಗೆ ಸಹ 'ಯೋಧಾಸ್', ಅನ್ಶು ಮಲಿಕ್, ಸೋನಮ್  ಮಲಿಕ್, ಸೀಮಾಬಿಸ್ಲಾ, ದೀಪಕ್ ಪುನಿಯಾ ಮತ್ತು ವಿನೇಶ್ ಫೋಗಟ್ ಅವರು ಚಿನ್ನದ ಪಕದ ಅನ್ವೇಷಣೆಯನ್ನು ಬೆಂಬಲಿಸಲು ಮತ್ತು ತಮ್ಮ ಟಾಟಾ ಯೋಧಾ ಪಿಕ್-ಅಪ್ ಅನ್ನು ಸ್ವೀಕರಿಸಲು ಖುದ್ದಾಗಿ ಹಾಜರಿದ್ದರು.

ಕುಸ್ತಿ ಕ್ರೀಡೆಯು ಭಾರತದಾದ್ಯಂತ ಆಳವಾಗಿ ಬೇರೂರಿದೆ ಮತ್ತು ಜಾಗತಿಕ ರಂಗದಲ್ಲಿ ಯಶಸ್ಸಿನ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಜನಪ್ರಿಯ ಮತ್ತು ಸಮಾಜದ ಎಲ್ಲಾ ವರ್ಗಗಳು, ಅದರ ಉತ್ತಮ ಪ್ರದರ್ಶನ, ಆಕ್ರಮಣಶೀಲತೆ ಮತ್ತು ಸಹಿಷ್ಣುತೆ ವೇಗ, ಚುರುಕುತನ ಮತ್ತು ಶಕ್ತಿಯನ್ನು ಪರೀಕ್ಷಿಸುತ್ತದೆ. ಈ ಸದ್ಗುಣಗಳು ನಮ್ಮ ವಾಣಿಜ್ಯ ವಾಹನಗಳ ದೀರ್ಘಾಯುಷ್ಯ, ಬಾಳಿಕೆ ಮತ್ತು ದೃಢವಾದ ಕಾರ್ಯಕ್ಷಮತೆಯನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುತ್ತವೆ, ಅವು ಭಾರತ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳೆರಡರಲ್ಲೂ ನಮ್ಮ ಗ್ರಾಹಕರಿಂದ ಹೆಚ್ಚು ಮೌಲ್ಯಯುತವಾಗಿವೆ ಎಂದು  ಟಾಟಾ ಮೋಟಾರ್ಸ್ ನ ಕಾರ್ಯನಿರ್ವಾಹಕ ನಿರ್ದೇಶಕ  ಗಿರೀಶ್  ವಾಘ್ ಹೇಳಿದರು.

click me!