ಭಾರತದ ತಾರಾ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಬರೋಬ್ಬರಿ 2 ವರ್ಷಗಳ ಬಳಿಕ ಮೊದಲ ಬಾರಿಗೆ ಟೂರ್ನಿಯೊಂದರಲ್ಲಿ ಸೆಮೀಸ್ ಫೈನಲ್ ಪ್ರವೇಶಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಪ್ಯಾರಿಸ್(ಮಾ.27): ಆರ್ಲಿಯಾನ್ಸ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ತಾರಾ ಶಟ್ಲರ್ ಸೈನಾ ನೆಹ್ವಾಲ್ ಸೆಮಿಫೈನಲ್ ಪ್ರವೇಶಿಸಿದರೆ, ಕಿದಂಬಿ ಶ್ರೀಕಾಂತ್ ಕ್ವಾರ್ಟರ್ ಫೈನಲ್‌ನಲ್ಲಿ ಸೋತು ನಿರಾಸೆ ಅನುಭವಿಸಿದ್ದಾರೆ.
ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಸೈನಾ, ಅಮೆರಿಕದ ಐರಿಸ್ ವಾಂಗ್ ವಿರುದ್ಧ 21-19, 17-21, 21-19 ಗೇಮ್‌ಗಳಲ್ಲಿ ರೋಚಕ ಗೆಲುವು ಸಾಧಿಸಿದರು. 2 ವರ್ಷಗಳಲ್ಲಿ ಸೈನಾ ಮೊದಲ ಬಾರಿಗೆ ಟೂರ್ನಿಯೊಂದರ ಸೆಮೀಸ್‌ಗೇರಿದ್ದಾರೆ.
𝐒𝐄𝐌𝐈 𝐅𝐈𝐍𝐀𝐋𝐒 𝐈𝐓 𝐈𝐒💪🏻 progresses in the Semi finals of as she defeats 🇺🇲's Iris Wang in a close contest by 21-19, 17-21, 21-19.👏🏻 pic.twitter.com/d3qZCSFqr1
— BAI Media (@BAI_Media)ಖೇಲೋ ಇಂಡಿಯಾಗೆ ಯೋಗಾಸನ ಸೇರ್ಪಡೆ: ಕಿರಣ್ ರಿಜಿಜು
ಪುರುಷರ ಕ್ವಾರ್ಟರ್ ಫೈನಲ್‌ನಲ್ಲಿ ಶ್ರೀಕಾಂತ್, ಫ್ರಾನ್ಸ್‌ನ ಟೊಮಾ ಪೊಪೊವ್ ವಿರುದ್ಧ 19-21, 17-21 ಗೇಮ್‌ಗಳಲ್ಲಿ ಸೋತು ಹೊರಬಿದ್ದರು. ಇದೇ ವೇಳೆ ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಹಾಗೂ ಸಿಕ್ಕಿಮ ರೆಡ್ಡಿ ಜೋಡಿ ಸೆಮಿಫೈನಲ್ ಪ್ರವೇಶಿಸಿತು.
𝗠𝗔𝗝𝗘𝗦𝗧𝗜𝗖🔥
Newly paired Mixed doubles pair & put up a great performance as they booked their Semi final seats at beating 🏴's Max Flynn & Jessica Pugh by 21-13, 21-18.
Very well played💪🏻 pic.twitter.com/pEdoNn3mDi