
ಮೆಲ್ಬರ್ನ್(ಫೆ.01): ಚೊಚ್ಚಲ ಗ್ರ್ಯಾಂಡ್‌ಸ್ಲಾಂ ಮೇಲೆ ಕಣ್ಣಿಟ್ಟಿರುವ ಆಸ್ಟ್ರಿಯಾದ ಡೊಮಿನಿಕ್ ಥೀಮ್, ಆಸ್ಪ್ರೇಲಿಯನ್ ಓಪನ್ ಗ್ರ್ಯಾಂಡ್‌ಸ್ಲಾಂ ಟೆನಿಸ್‌ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಮೊದಲ ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿರುವ ಥೀಮ್, ಪ್ರಶಸ್ತಿಗಾಗಿ 7 ಬಾರಿ ಚಾಂಪಿಯನ್ ಸರ್ಬಿಯಾದ ನೋವಾಕ್ ಜೋಕೋವಿಚ್‌ರನ್ನು ಭಾನುವಾರ ಎದುರಿಸಲಿದ್ದಾರೆ.
ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ 5ನೇ ಶ್ರೇಯಾಂಕಿತ ಥೀಮ್, ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ವಿರುದ್ಧ 3-6, 6-4, 7-6(7-3), 7-6(7-4) ಸೆಟ್‌ಗಳಿಂದ ಗೆಲುವು ಸಾಧಿಸಿದರು. ಮ್ಯಾರಾಥಾನ್ ಟೆನಿಸಿಗರು ಎಂದೇ ಖ್ಯಾತಿಯಾಗಿರುವ ಥೀಮ್ ಹಾಗೂ ಜ್ವೆರೆವ್ ಅವರ ಸೆಮೀಸ್ ಕಾದಾಟದಲ್ಲಿ ದೀರ್ಘವಾಧಿ ಬಳಿಕ ಫಲಿತಾಂಶ ಹೊರಬಿದ್ದಿತು. ಇದರಲ್ಲಿ 2 ಸೆಟ್ ಟೈಬ್ರೇಕರ್‌ನಲ್ಲಿ ನಿರ್ಧಾರವಾಯಿತು. ಆಸ್ಪ್ರೇಲಿಯನ್ ಓಪನ್ ಫೈನಲ್‌ಗೇರಿದ ಥೀಮ್, ಈ ಸಾಧನೆ ಮಾಡಿದ ಆಸ್ಟ್ರಿಯಾದ ಮೊದಲ ಟೆನಿಸಿಗ ಎನಿಸಿದರು.
ಆಸ್ಟ್ರೇಲಿಯನ್ ಓಪನ್: ಫೆಡರರ್‌ಗೆ ನಿರಾಸೆ, ಫೈನಲ್‌ಗೆ ಜೋಕೋ ಲಗ್ಗೆ
ಮುಗುರುಜಾ-ಕೆನಿನ್ ಫೈನಲ್ ಕದನ ಇಂದು
ಶನಿವಾರ ನಡೆಯಲಿರುವ ಮಹಿಳಾ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಶ್ರೇಯಾಂಕ ರಹಿತೆ ಸ್ಪೇನ್‌ನ ಗಾರ್ಬೈನ್ ಮುಗುರುಜಾ, ಅಮೆರಿಕದ ಯುವ ಆಟಗಾರ್ತಿ ಸೋಫಿಯಾ ಕೆನಿನ್‌ರನ್ನು ಎದುರಿಸಲಿದ್ದಾರೆ. 21 ವರ್ಷದ ಕೆನಿನ್ ಉತ್ತಮ ಲಯದಲ್ಲಿದ್ದಾರೆ. ಕಳೆದ ಬಾರಿ ಚೀನಾ ಓಪನ್‌ನಲ್ಲಿ ಕೆನಿನ್, ಮುಗುರುಜಾ ಎದುರು ಗೆಲುವು ಸಾಧಿಸಿದ್ದಾರೆ. ಫೈನಲ್‌ನಲ್ಲೂ ಕೆನಿನ್ ಇದೇ ವಿಶ್ವಾಸದಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಒಂದೊಮ್ಮೆ ಕೆನಿನ್ ಫೈನಲ್‌ನಲ್ಲಿ ಸೋತರೂ ಅಗ್ರ 10ರ ರಾರಯಂಕಿಂಗ್‌ನಲ್ಲಿ ಸ್ಥಾನ ಪಡೆಯಲಿದ್ದಾರೆ. 12 ತಿಂಗಳ ಹಿಂದಷ್ಟೇ ಕೆನಿನ್, ವೃತ್ತಿ ಜೀವನದಲ್ಲಿ ಮೊದಲ ಡಬ್ಲ್ಯೂಟಿಎ ಪ್ರಶಸ್ತಿ ಗೆದ್ದಿದ್ದರು. ಇನ್ನು 2 ಗ್ರ್ಯಾಂಡ್‌ಸ್ಲಾಂ ವಿಜೇತೆ ಮುಗುರುಜಾ ಕೂಡಾ ಮೊದಲ ಬಾರಿ ಆಸ್ಪ್ರೇಲಿಯನ್ ಓಪನ್ ಫೈನಲ್ ಪ್ರವೇಶಿಸಿದ್ದು, ಪ್ರಶಸ್ತಿ ಗೆಲ್ಲುವ ಉತ್ಸಾಹದಲ್ಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.