ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಂ ಟೂರ್ನಿಯಲ್ಲಿ ಸರ್ಬಿಯಾದ ನೊವಾಕ್ ಜೋಕೋವಿಚ್ ಮೂರನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಪ್ಯಾರಿಸ್(ಅ.02): ವಿಶ್ವ ನಂ.1 ಸರ್ಬಿಯಾದ ನೊವಾಕ್ ಜೋಕೋವಿಚ್, ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್‌ನಲ್ಲಿ 3ನೇ ಸುತ್ತು ಪ್ರವೇಶಿಸಿದ್ದಾರೆ.
ಪುರುಷರ ಸಿಂಗಲ್ಸ್‌ನ 2ನೇ ಸುತ್ತಲ್ಲಿ 2016ರ ಫ್ರೆಂಚ್ ಓಪನ್ ಚಾಂಪಿಯನ್ ಜೋಕೋವಿಚ್, ಲಿತುನಿಯಾದ ರಿಕರ್ಡಸ್ ಬೆರ್ನಾಕಿ ವಿರುದ್ಧ 6-1, 6-2, 6-2 ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು. ಉಳಿದಂತೆ ಸ್ವಿಜರ್‌ಲೆಂಡ್‌ನ ಸ್ಟಾನ್ ವಾವ್ರಿಂಕಾ, ಬಲ್ಗೇರಿಯಾದ ಗ್ರಿಗೋರ್ ಡಿಮಿಟ್ರೊವ್, ರಷ್ಯಾದ ಕರೆನ್ ಕಚನೊವ್ ಮೂರನೇ ಸುತ್ತಿಗೆ ಲಗ್ಗೆ ಇಟ್ಟರು.
7⃣0⃣ career wins at RG 🥳 races past Berankis 6-1 6-2 6-2 to advance to the third round in a tidy 1 hour and 23 minutes. pic.twitter.com/NW679IlnAx
— Roland-Garros (@rolandgarros)A 70th victory on the Parisian clay ties Novak Djokovic with Roger Federer for second all-time in wins. pic.twitter.com/HkLUAIopoO
— Roland-Garros (@rolandgarros)ಫ್ರೆಂಚ್ ಓಪನ್: ನಡಾಲ್, ಜೋಕೋವಿಚ್ 2ನೇ ಸುತ್ತಿಗೆ ಲಗ್ಗೆ
ಮಹಿಳಾ ಸಿಂಗಲ್ಸ್‌ನಲ್ಲಿ ಅಮೆರಿಕದ ಸೋಫಿಯಾ ಕೆನಿನ್, ರೋಮೇನಿಯಾದ ಬೊಗ್ಡಾನ್ ವಿರುದ್ಧ 3-6, 6-3, 6-2ರಲ್ಲಿ ಗೆದ್ದು 3ನೇ ಸುತ್ತಿಗೇರಿದರು.
ದಿವಿಜ್ ಶರಣ್ ಜೋಡಿಗೆ ಸೋಲು: ಪುರುಷರ ಡಬಲ್ಸ್‌ನ ಮೊದಲ ಸುತ್ತಲ್ಲಿ ಭಾರತದ ದಿವಿಜ್ ಶರಣ್, ದಕ್ಷಿಣ ಕೊರಿಯಾದ ಕೌನ್ ಸೂನ್ ಜೋಡಿ ಸೋತು ಹೊರಬಿತ್ತು.