Wimbledon ಟೆನಿಸ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಜೋಕೋವಿಚ್‌ಗೆ ಅನುಮತಿ

By Suvarna News  |  First Published Apr 27, 2022, 9:05 AM IST

* ವಿಶ್ವ ನಂ.1 ಟೆನಿಸಿಗ ನೋವಾಕ್‌ ಜೋಕೋವಿಚ್‌ ಪಾಲಿಗೆ ಗುಡ್‌ ನ್ಯೂಸ್

*  6 ಬಾರಿ ವಿಂಬಲ್ಡನ್‌ ಗೆದ್ದಿರುವ ನೋವಾಕ್‌ ಜೋಕೋವಿಚ್‌

* 34 ವರ್ಷದ ಜೋಕೋವಿಚ್‌ ಕಳೆದ 3 ಆವೃತ್ತಿಗಳಲ್ಲಿಯೂ ಚಾಂಪಿಯನ್‌ ಆಗಿದ್ದಾರೆ


ಲಂಡನ್(ಏ.27)‌: ಕೋವಿಡ್‌ ಲಸಿಕೆ (COVID Vaccine) ಪಡೆಯದ ಹೊರತಾಗಿಯೂ ವಿಶ್ವ ನಂ.1 ಟೆನಿಸಿಗ ನೋವಾಕ್‌ ಜೋಕೋವಿಚ್‌ (Novak Djokovic) ಜೂನ್‌ನಲ್ಲಿ ಆರಂಭವಾಗಲಿರುವ ವಿಂಬಲ್ಡನ್‌ ಗ್ರ್ಯಾನ್‌ ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ (Wimbledon Tennis Grand slam) ಪಾಲ್ಗೊಳ್ಳಲು ಅನುಮತಿ ಲಭಿಸಿದೆ. 6 ಬಾರಿ ವಿಂಬಲ್ಡನ್‌ ಗೆದ್ದಿರುವ 34 ವರ್ಷದ ಜೋಕೋವಿಚ್‌ ಕಳೆದ 3 ಆವೃತ್ತಿಗಳಲ್ಲಿಯೂ ಚಾಂಪಿಯನ್‌ ಆಗಿದ್ದು, ಈ ಬಾರಿ ಪ್ರಶಸ್ತಿ ಉಳಿಸಿಕೊಳ್ಳಲು ಹೋರಾಡಲಿದ್ದಾರೆ. 

ಮೇ 22ರಿಂದ ಆರಂಭವಾಗಲಿರುವ ಫ್ರೆಂಚ್‌ ಓಪನ್‌ನಲ್ಲೂ (French Open) ಜೋಕೋವಿಚ್‌ ಆಡಲಿದ್ದಾರೆ. ಇತ್ತೀಚೆಗೆ ಆಸ್ಪ್ರೇಲಿಯನ್‌ ಓಪನ್‌ (Australian Open) ಆಡಲು ತೆರಳಿದ್ದ 20 ಗ್ರ್ಯಾನ್‌ ಸ್ಲಾಂಗಳ ಒಡೆಯ ಜೋಕೋವಿಚ್‌ರನ್ನು ಮೆಲ್ಬರ್ನ್‌ ವಿಮಾನ ನಿಲ್ದಾಣದಲ್ಲೇ ತಡೆಯಲಾಗಿತ್ತು. ಬಳಿಕ ಅವರನ್ನು ದೇಶದಿಂದಲೇ ಗಡಿಪಾರು ಮಾಡಲಾಗಿತ್ತು.

Tap to resize

Latest Videos

undefined

ಬ್ಯಾಡ್ಮಿಂಟನ್‌ ಏಷ್ಯಾ: 2ನೇ ಸುತ್ತಿಗೆ ಸಾತ್ವಿಕ್‌-ಚಿರಾಗ್‌

ಮನಿಲಾ(ಫಿಲಿಪ್ಪೀನ್ಸ್‌): ಮಂಗಳವಾರ ಆರಂಭಗೊಂಡ ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಸಾತ್ವಿಕ್‌-ಚಿರಾಗ್‌ ಶೆಟ್ಟಿ, ಇಶಾನ್‌ ಭಟ್ನಾಗರ್‌-ತನಿಶಾ ಕ್ರಾಸ್ಟೊ ಜೋಡಿ 2ನೇ ಸುತ್ತಿಗೆ ಲಗ್ಗೆ ಇಟ್ಟಿದೆ. ಪುರುಷರ ಡಬಲ್ಸ್‌ ವಿಭಾಗದ ಸ್ಪರ್ಧೆಯಲ್ಲಿ ಸಾತ್ವಿಕ್‌-ಚಿರಾಗ್‌ ಜೋಡಿ ಥಾಯ್ಲೆಂಡ್‌ನ ಅಪಿಲುಕ್‌-ತುಲಮೊಕ್‌ ಜೋಡಿ ವಿರುದ್ಧ 21-13, 21-9 ಗೇಮ್‌ಗಳಲ್ಲಿ ಜಯಗಳಿಸಿತು. ಇನ್ನು ಮಿಶ್ರ ಡಬಲ್ಸ್‌ನಲ್ಲಿ ಇಶಾನ್‌-ತನಿಶಾ ಜೋಡಿ ಹಾಂಕಾಂಗ್‌ನ ಲಾ ಚೆವುಕ್‌ ಹಿಮ್‌-ಯೆಂಗ್‌ ತಿಂಗ್‌ ವಿರುದ್ಧ 21-15, 21-17 ಗೇಮ್‌ಗಳಲ್ಲಿ ಗೆಲುವು ಸಾಧಿಸಿತು.

ಜೂನ್ 4ಕ್ಕೆ ಖೇಲೋ ಇಂಡಿಯಾ ಯೂತ್‌ ಗೇಮ್ಸ್‌ ಆರಂಭ

ಚಂಡೀಗಢ: ಕೊರೋನಾ ಸೋಂಕಿನಿಂದಾಗಿ ಮುಂದೂಡಿಕೆಯಾಗಿದ್ದ 4ನೇ ಆವೃತ್ತಿಯ ಖೇಲೋ ಇಂಡಿಯಾ ಯೂತ್‌ ಗೇಮ್ಸ್‌-2021 ಜೂ.4ರಿಂದ 13ರ ವರೆಗೆ ನಡೆಯಲಿದೆ ಎಂದು ಹರಾರ‍ಯಣ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ಅವರು ಘೋಷಿಸಿದ್ದಾರೆ. ಮಂಗಳವಾರ ಕೇಂದ್ರ ಕ್ರೀಡಾ ಇಲಾಖೆ ಸಚಿವ ಅನುರಾಗ್‌ ಠಾಕೂರ್‌ ಜೊತೆಗಿನ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಅವರು ಗೇಮ್ಸ್‌ ಬಗ್ಗೆ ಮಾಹಿತಿ ಹಂಚಿಕೊಂಡರು. ಶಾಹ್‌ಬಾದ್‌, ಅಂಬಾಲ, ಚಂಡೀಗಢ ಹಾಗೂ ಡೆಲ್ಲಿಯಲ್ಲಿ ಗೇಮ್ಸ್‌ ನಡೆಯಲಿದ್ದು, ಸುಮಾರು 8,500 ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ ಎಂದರು.

ಮೇ 23ರಂದು ಭಾರತ, ಪಾಕಿಸ್ತಾನ ಹಾಕಿ ಪಂದ್ಯ

ನವದೆಹಲಿ: 11ನೇ ಆವೃತ್ತಿಯ ಪುರುಷರ ಏಷ್ಯಾ ಕಪ್‌ ಹಾಕಿ ಟೂರ್ನಿ ಮೇ 23ರಿಂದ ಇಂಡೋನೇಷ್ಯಾದ ಜಕಾರ್ತದಲ್ಲಿ ಆರಂಭವಾಗಲಿದ್ದು, ಮೂರು ಬಾರಿ ಚಾಂಪಿಯನ್‌ ಭಾರತ ‘ಎ’ ಗುಂಪಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ಮಂಗಳವಾರ ಏಷ್ಯನ್‌ ಹಾಕಿ ಫೆಡರೇಶನ್‌ ಟೂರ್ನಿಯ ವೇಳಾಪಟ್ಟಿ ಪ್ರಕಟಿಸಿದ್ದು, ಭಾರತ ಮೇ 23ಕ್ಕೆ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಮೊದಲ ಪಂದ್ಯ ಆಡಲಿದೆ. 

Khelo India University Games: ಕರ್ನಾಟಕದ ವಿವಿಗಳಿಗೆ ಮತ್ತಷ್ಟು ಪದಕ

ಇದಾದ ಬಳಿಕ ಅದೇ ಗುಂಪಿನಲ್ಲಿರುವ ಜಪಾನ್‌ ವಿರುದ್ಧ ಮೇ 24ಕ್ಕೆ, ಇಂಡೋನೇಷ್ಯಾ ವಿರುದ್ಧ ಮೇ 26ಕ್ಕೆ ಆಡಲಿದೆ. 4 ಬಾರಿ ಚಾಂಪಿಯನ್‌ ಕೊರಿಯಾ ಜೊತೆ ಮಲೇಷ್ಯಾ, ಒಮಾನ್‌ ಹಾಗೂ ಬಾಂಗ್ಲಾದೇಶ ‘ಬಿ’ ಗುಂಪಿನಲ್ಲಿದ್ದು, ಜೂ.1ರಂದು ಫೈನಲ್‌ ನಡೆಯಲಿದೆ.

ಭಾರತ ಹಾಕಿ ಮಾಜಿ ನಾಯಕಿ ಎಲ್ವೆರಾ ನಿಧನ

ಬೆಂಗಳೂರು: ಭಾರತ ಮಹಿಳಾ ಹಾಕಿ ತಂಡದ ಮಾಜಿ ನಾಯಕಿ, ಕರ್ನಾಟಕದ ಎಲ್ವೆರಾ ಬ್ರಿಟ್ಟೋ(81) ಅವರು ಮಂಗಳವಾರ ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಎಲ್ವೆರಾ ಅವರು 60ರ ದಶಕದಲ್ಲಿ ಬ್ರಿಟ್ಟೋ ಸಹೋದರಿಯರೆಂದೇ ಖ್ಯಾತರಾಗಿದ್ದ (ರಿತಾ ಹಾಗೂ ಮೇ) ಮೂವರಲ್ಲಿ ಹಿರಿಯವರು. ಇವರು 1960-67ರಲ್ಲಿ ಕರ್ನಾಟಕಕ್ಕೆ 7 ರಾಷ್ಟ್ರೀಯ ಟ್ರೋಫಿಗಳನ್ನು ಗೆದ್ದುಕೊಟ್ಟಿದ್ದರು. 1965ರಲ್ಲಿ ಎಲ್ವೆರಾಗೆ ಅರ್ಜುನ ಪ್ರಶಸ್ತಿ ಲಭಿಸಿದ್ದು, ಈ ಪ್ರಶಸ್ತಿ ಪಡೆದ 2ನೇ ಮಹಿಳಾ ಹಾಕಿ ಪಟು ಎಂಬ ಗೌರವಕ್ಕೆ ಪಾತ್ರರಾಗಿದ್ದರು.

click me!