2023ರ ಸಾಲಿನ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರಕಟಗೊಂಡಿದೆ. ವೇಗಿ ಮೊಹಮ್ಮದ್ ಶಮಿ ಅರ್ಜುನ ಪ್ರಶಸ್ತಿ ಭಾಜನರಾಗಿದ್ದರೆ, ಬ್ಯಾಡ್ಮಿಂಟನ್ ಪಟುಗಳಾದ ಚಿರಾಗ್ ಶೆಟ್ಟಿ ಹಾಗೂ ಸಾತ್ವಿಕ್ ಸಾಯಿ ರಾಜ್ ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಬಾರಿಯ ಕ್ರೀಡಾ ಪ್ರಶಸ್ತಿಗೆ ಆಯ್ಕೆಯಾದ ಸಾಧಕರ ಲಿಸ್ಟ್ ಇಲ್ಲಿದೆ.
ನವದೆಹಲಿ(ಡಿ.20) ಕೇಂದ್ರ ಕ್ರೀಡಾ ಸಚಿವಾಲಯ ಪ್ರಸಕ್ತ ವರ್ಷದ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರಕಟಿಸಿದೆ. ಮೇಜನ್ ಧ್ಯಾನ್‌ಚಂದ್ ಖೇಲ್ ರತ್ನಿ ಪ್ರಶ್ತಿಗೆ ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಸಾಧನೆ ಮಾಡಿದ ಚಿರಾಕ್ ಶೆಟ್ಟಿ ಹಾಗೂ ಸಾತ್ವಿಕ್ ಸಾಯಿ ರಾಜ್ ಆಯ್ಕೆಯಾಗಿದ್ದಾರೆ. ಇನ್ನು ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ದಾಳಿ ಸಂಘಟಿಸಿ ದಾಖಲೆ ಬರೆದ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಅರ್ಜು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಶಮಿ ಸೇರಿದಂತೆ 26 ಕ್ರೀಡಾ ಸಾಧಕರು ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಜನವರಿ 9 ರಂದು ರಾಷ್ಟ್ರಪತಿ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಸಾಧಕರಿಗೆ ಪ್ರಶಸ್ತಿ ವಿತರಣೆ ಮಾಡಲಿದ್ದಾರೆ. 2023ರ ಸಾಲಿನ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ.
undefined
ಅರ್ಜುನ್ ಪ್ರಶಸ್ತಿ:
ಒಜಸ್ ಪ್ರವೀಣ್ ಡಿಯೋಟಾಲೆ: ಆರ್ಚರಿ
ಆದಿತಿ ಗೋಪಿಚಂದ್ ಸ್ವಾಮಿ: ಆರ್ಚರಿ
ಶ್ರೀಶಂಕರ್ ಎಂ: ಅಥ್ಲೆಟಿಕ್ಸ್
ಪಾರುಲ್ ಚೌಧರಿ: ಅಥ್ಲೆಟಿಕ್ಸ್
ಮೊಹಮ್ಮದ್ ಹುಸಾಮುದ್ದೀನ್: ಬಾಕ್ಸಿಂಗ್
ಆರ್ ವೈಶಾಲಿ: ಚೆಸ್
ಮೊಹಮ್ಮದ್ ಶಮಿ: ಕ್ರಿಕೆಟ್
ಅನುಷ್ ಅಗರ್ವಾಲ್: ಕುದುರೆ ಸವಾರಿ
ದಿವ್ಯಾಕೃತಿ ಸಿಂಗ್: ಇಕ್ವೆಸ್ಟ್ರಿಯನ್ ಡ್ರೆಸ್ಸೇಜ್
ದೀಕ್ಷಾ ದಾಗರ್: ಗಾಲ್ಫ್
ಕ್ರಿಶನ್ ಬಹದ್ದೂರ್ ಪಾಠಕ್: ಹಾಕಿ
ಪುಖ್ರಂಬಂ ಸುಶೀಲಾ ಚಾನು: ಹಾಕಿ
ಪವನ್ ಕುಮಾರ್: ಕಬಡ್ಡಿ
ರಿತು ನೇಗಿ: ಕಬಡ್ಡಿ
ನಸ್ರೀನ್: ಖೋ-ಖೋ
ಪಿಂಕಿ: ಲಾನ್ ಬೌಲ್ಸ್
ಐಶ್ವರಿ ಪ್ರತಾಪ್ ಸಿಂಗ್ ತೋಮರ್: ಶೂಟಿಂಗ್
ಇಶಾ ಸಿಂಗ್ :ಶೂಟಿಂಗ್
ಹರಿಂದರ್ ಪಾಲ್ ಸಿಂಗ್ ಸಂಧು : ಸ್ಕ್ವಾಷ್
ಅಹಿಕಾ ಮುಖರ್ಜಿ: ಟೇಬಲ್ ಟೆನಿಸ್
ಸುನೀಲ್ ಕುಮಾರ್: ಕುಸ್ತಿ
ಆಂಟಿಮ್: ಕುಸ್ತಿ
ನವೋರೆಮ್ ರೋಶಿಬಿನಾ ದೇವಿ: ವುಶು
ಶೀತಲ್ ದೇವಿ : ಪ್ಯಾರಾ ಆರ್ಚರಿ
ಅಜಯ್ ಕುಮಾರ್ ರೆಡ್ಡಿ : ಅಂಧರ ಕ್ರಿಕೆಟ್
ಪ್ರಾಚಿ ಯಾದವ್ : ಪ್ಯಾರಾ ಕ್ಯಾನೋಯಿಂಗ್
ಬೆಂಗಳೂರು ಬುಲ್ ಭರತ್‌ಗೆ ಪುಟ್ಟ ಬಾಲಕ ಹೇಗೆ ಹುರಿದುಂಬಿಸ್ತಿದ್ದಾನೆ ನೋಡಿ: ವೀಡಿಯೋ ಸಖತ್ ವೈರಲ್
ದ್ರೋಣಾಚಾರ್ಯ ಪ್ರಶಸ್ತಿ( ಸಾಮಾನ್ಯ ವಿಭಾಗ)
ಲಲಿತ್ ಕುಮಾರ್: ಕುಸ್ತಿ
ಆರ್‌ಬಿ ರಮೇಶ್: ಚೆಸ್
ಮಹವೀರ್ ಪ್ರಸಾದ್ ಸೈನಿ: ಪ್ಯಾರಾ ಅಥ್ಲೆಟಿಕ್ಸ್
ಶಿವೇಂದ್ರ ಸಿಂಗ್: ಹಾಕಿ
ಗಣೇಶ್ ಪ್ರಭಾಕರ್ : ಮಲ್ಲಕಂಬ
ದ್ರೋಣಾಚಾರ್ಯ ಪ್ರಶಸ್ತಿ(ಜೀವನಮಾನ ಶ್ರೇಷ್ಠ ಸಾಧನೆ)
ಜಸ್ಕೀಕರತ್ ಸಿಂಗ್ ಗ್ರೆವಾಲ್ : ಗಾಲ್ಫ್
ಭಾಸ್ಕರನ್ ಇ : ಕಬಡ್ಡಿ
ಜಯಂತ್ ಕುಮಾರ್ ಪುಶಿಲಾಲ್ : ಟೇಬಲ್ ಟೆನಿಸ್
ಧ್ಯಾನ್ ಚಂದ್ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ
ಮಂಜೂಷ ಕನ್ವಾರ್ : ಬ್ಯಾಡ್ಮಿಂಟನ್
ವೀನಿತ್ ಕುಮಾರ್ ಶರ್ಮಾ : ಹಾಕಿ
ಕವಿತಾ ಸೆಲ್ವರಾಜ್ : ಕಬಡ್ಡಿ
ಮೂವರು ದಿಗ್ಗಜರಿಗೆ ಕೊನೆಯ ಐಪಿಎಲ್..! ಟ್ರೋಫಿಯೊಂದಿಗೆ ವಿದಾಯ ಹೇಳ್ತಾರಾ ತ್ರಿಮೂರ್ತಿಗಳು..?
ಮೌಲಾನಾ ಅಬುಲ್ ಕಲಾಮ್ ಅಜಾದ್ ಟ್ರೋಫಿ 2023
ಗುರುನಾನಕ್ ದೇವ್ ವಿಶ್ವವಿದ್ಯಾಲಯ, ಅಮೃತಸರ, ಓವರಾಲ್ ವಿನ್ನರ್
ಲವ್ಲಿ ಪ್ರೊಫೆಶನ್ ಯೂನಿವರ್ಸಿಟಿ, ಪಂಜಾಬ್, ಮೊದಲ ರನ್ನರ್ ಅಪ್
ಕುರುಕ್ಷೇತ್ರ ವಿಶ್ವಿವಿದ್ಯಾಲಯ, ಕುರುಕ್ಷೇತ್ರ, 2ನೇ ರನ್ನರ್ ಅಪ್