ಮಿನಿ ಒಲಿಂಪಿಕ್ಸ್‌ ಈಜು: ವಿದಿತ್‌ಗೆ ಡಬಲ್‌ ಚಿನ್ನ

By Suvarna News  |  First Published Feb 6, 2020, 10:41 AM IST

ಬಸವನಗುಡಿ ಸ್ವಿಮ್ಮಿಂಗ್ ಸೆಂಟರ್‌ನಲ್ಲಿ ನಡೆದ ಮಿನಿ ಒಲಿಂಪಿಕ್ಸ್ ಕೂಟದಲ್ಲಿ ಕರ್ನಾಟಕ ವಿದಿತ್ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಮಿನಿ ಒಲಿಂಪಿಕ್ಸ್ ಕೂಟದಲ್ಲಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ಬೆಂಗಳೂರು ಹಾಗೂ ಬೆಳಗಾವಿ ಫೈನಲ್ ಪ್ರವೇಶಿಸಿದೆ. 


ಬೆಂಗಳೂರು(ಫೆ.06):  ಮಿನಿ ಒಲಿಂಪಿಕ್ಸ್‌ ಕ್ರೀಡಾಕೂಟದ 3ನೇ ದಿನವಾದ ಬುಧವಾರ ಈಜು ಸ್ಪರ್ಧೆಯಲ್ಲಿ ಬೆಂಗಳೂರಿನ ಡಾಲ್ಫಿನ್‌ ಆಕ್ವಾಟಿಕ್ಸ್‌ ಕೇಂದ್ರದ ವಿದಿತ್‌ 2 ಚಿನ್ನ ಜಯಿಸಿದರು. ಬಾಲಕರ 200 ಮೀ. ಬ್ರೆಸ್ಟ್‌ ಸ್ಟ್ರೋಕ್ಸ್, 50 ಮೀ. ಬಟರ್‌ಫ್ಲೈನಲ್ಲಿ ಅವರು ಸ್ವರ್ಣಕ್ಕೆ ಮುತ್ತಿಟ್ಟರು. 

ಬಾಲಕಿಯರ 200 ಮೀ., 50 ಮೀ. ಬಟರ್‌ಫ್ಲೈನಲ್ಲಿ ರಿಷಿಕಾ, 50 ಮೀ. ಫ್ರೀಸ್ಟೈಲ್‌, 50 ಮೀ. ಬ್ಯಾಕ್‌ಸ್ಟೊ್ರೕಕ್‌ನಲ್ಲಿ ರಿಧಿಮಾ ಚಿನ್ನ ಜಯಿಸಿದರು. ಬಾಲಕರ ವಿಭಾಗದ ಫುಟ್ಬಾಲ್‌ನಲ್ಲಿ ಬೆಂಗಳೂರು ಹಾಗೂ ಬೆಳಗಾವಿ ತಂಡಗಳು ಫೈನಲ್‌ಗೇರಿದರೆ, ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ, ಬೆಂಗಳೂರು ತಂಡಗಳು ಪ್ರಶಸ್ತಿಗೆ ಸೆಣಸಲಿವೆ. 

Tap to resize

Latest Videos

ವಾಲಿಬಾಲ್‌ ಬಾಲಕರ ವಿಭಾಗದಲ್ಲಿ ಬೆಂಗಳೂರು, ಬಾಲಕಿಯರ ವಿಭಾಗದಲ್ಲಿ ಕೊಪ್ಪಳ ತಂಡಗಳು ಪ್ರಶಸ್ತಿ ಗೆದ್ದವು. ನೆಟ್‌ಬಾಲ್‌ ಬಾಲಕರ ವಿಭಾಗದಲ್ಲಿ ಚಿತ್ರದುರ್ಗ, ಬಾಲಕಿಯರ ವಿಭಾಗದಲ್ಲಿ ಎಸ್‌ಎವಿಎಂ ಬೆಂಗಳೂರು ತಂಡಗಳು ಚಿನ್ನ ಗೆದ್ದವು.

click me!