ಲಿಯಾಂಡರ್‌ ಪೇಸ್ ಜತೆ ಬಾಲಿವುಡ್‌ ನಟಿ ಕಿಮ್‌ ಶರ್ಮಾ ಬ್ರೇಕಪ್‌..? 2 ವರ್ಷದ ಸಂಬಂಧಕ್ಕೆ ವಿದಾಯ

By Kannadaprabha News  |  First Published Apr 5, 2023, 10:12 AM IST

ಕಿಮ್ ಮತ್ತು ಲಿಯಾಂಡರ್ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಆಗಸ್ಟ್ 2021 ರಲ್ಲಿ ಗೋವಾದಲ್ಲಿ ಅವರ ಫೋಟೋಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಾಗ ಹೊರಬಂದವು. ಆದರೆ, ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಓಪನ್‌ ಆಗಿದ್ದರು ಮತ್ತು ಆಗಾಗ್ಗೆ ಇನ್ಸ್ಟಾಗ್ರಾಮ್‌ನಲ್ಲಿ ಪರಸ್ಪರ ಚಿತ್ರಗಳನ್ನು ಪೋಸ್ಟ್ ಮಾಡುತ್ತಿದ್ದರು. 


ಹೊಸದೆಹಲಿ (ಏಪ್ರಿಲ್‌ 5, 2023): ಭಾರತೀಯ ಖ್ಯಾತ ಟೆನ್ನಿಸ್‌ ನಟ ಲಿಯಾಂಡರ್ ಪೇಸ್ ಮತ್ತು ಬಾಲಿವುಡ್ ತಾರೆ ಕಿಮ್ ಶರ್ಮಾ ಅವರಿಬ್ಬರೂ ಕಳೆದ 2 ವರ್ಷಗಳಿಂದ ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದರು ಎಂಬ ವರದಿಗಳು ಕೇಳಿಬಂದಿದ್ದವು. ಆದರೆ, ಅವರ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಬಾಲಿವುಡ್‌ ನಟಿ ಕಿಮ್ ಶರ್ಮಾ ಟೆನ್ನಿಸ್‌ ಆಟಗಾರನ ಜತೆಗೆ ಬ್ರೇಕಪ್‌ ಮಾಡಿಕೊಂಡಿದ್ದಾರೆ ಎಂದು ವದಂತಿಗಳು ಹೇಳುತ್ತಿವೆ. 

ಇತ್ತೀಚೆಗೆ, ನಟಿ ಕಿಮ್ ಶರ್ಮಾ ಮತ್ತು ಲಿಯಾಂಡರ್‌ ಪೇಸ್‌ ಈವೆಂಟ್‌ಗಳು ಮತ್ತು ಪಾರ್ಟಿಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಅಲ್ಲದೆ, ಲಿಯಾಂಡರ್‌ ಪೇಸ್‌ ಜೊತೆಗಿನ ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಿಂದ ಕಿಮ್‌ ಶರ್ಮಾ ಡಿಲೀಟ್‌ ಮಾಡಿದ್ದಾರೆ. ಕಿಮ್ ಶರ್ಮಾ ಇತ್ತೀಚೆಗೆ ಅಲನ್ನಾ ಪಾಂಡೆ ಅವರ ವಿವಾಹ ಸಮಾರಂಭದಲ್ಲಿ ಏಕಾಂಗಿಯಾಗಿ ಭಾಗವಹಿಸಿದ್ದರು ಎಂಬುದು ಬೆಂಕಿಗೆ ಇನ್ನಷ್ಟು ತುಪ್ಪ ಸುರಿಯುವ ಅಂಶವಾಗಿದೆ.

Tap to resize

Latest Videos

ಇದನ್ನು ಓದಿ: ಯುವರಾಜ್ ಸಿಂಗ್ - ಲಿಯಾಂಡರ್ ಪೇಸ್: ಕಿಮ್‌ ಶರ್ಮಾ ಲವ್‌ ಲೈಫ್‌!

2022 ರ ದೀಪಾವಳಿಯಲ್ಲಿ, ಲಿಯಾಂಡರ್ ಪೇಸ್‌ ಅವರು ಪೂಜೆ ಮಾಡಿರುವ ಚಿತ್ರವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದರು. ಈ ವೇಳೆ, ಟೆನ್ನಿಸ್‌ ಆಟಗಾರನ ಜತೆಗೆ ಕಿಮ್‌ ಶರ್ಮಾ ಸಹ ಕಾಣಿಸಿಕೊಂಡಿದ್ದರು. ಇದಕ್ಕೂ ಮುನ್ನ ಅವರು ತಮ್ಮ ವಾರ್ಷಿಕೋತ್ಸವವನ್ನು ಒಟ್ಟಿಗೆ ಆಚರಿಸುವ ಕೆಲವು ಚಿತ್ರಗಳನ್ನು ಸಹ ಪೋಸ್ಟ್‌ ಮಾಡಿಕೊಂಡಿದ್ದರು. "ವಾರ್ಷಿಕೋತ್ಸವದ ಶುಭಾಶಯಗಳು ಮಿಚ್. 365 ದಿನಗಳ ನೆನಪುಗಳಿಗಾಗಿ ಮತ್ತು ಜೀವನದ ಒಲವನ್ನು ಪ್ರತಿದಿನ ಒಟ್ಟಿಗೆ ಸವಾರಿ ಮಾಡಿದ್ದಕ್ಕಾಗಿ ಧನ್ಯವಾದಗಳು. ಹಲೋದಲ್ಲಿ ನೀವು ನನ್ನನ್ನು ಹೊಂದಿದ್ದೀರಿ @kimsharmaofficial." ಎಂದು ಟೆನ್ನಿಸ್‌ ಆಟಗಾರ ಲಿಯಾಂಡರ್‌ ಪೇಸ್‌ ಬರೆದಿದ್ದರು.

 
 
 
 
 
 
 
 
 
 
 
 
 
 
 

A post shared by Leander Paes (@leanderpaes)

ಕಿಮ್ ಶರ್ಮಾ-ಲಿಯಾಂಡರ್ ಪೇಸ್ ಪ್ರೇಮ ಸಂಬಂಧ
ಕಿಮ್ ಮತ್ತು ಲಿಯಾಂಡರ್ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಆಗಸ್ಟ್ 2021 ರಲ್ಲಿ ಗೋವಾದಲ್ಲಿ ಅವರ ಫೋಟೋಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಾಗ ಹೊರಬಂದವು. ಆದರೆ, ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಓಪನ್‌ ಆಗಿದ್ದರು ಮತ್ತು ಆಗಾಗ್ಗೆ ಇನ್ಸ್ಟಾಗ್ರಾಮ್‌ನಲ್ಲಿ ಪರಸ್ಪರ ಚಿತ್ರಗಳನ್ನು ಪೋಸ್ಟ್ ಮಾಡುತ್ತಿದ್ದರು. 

ಇದನ್ನೂ ಓದಿ: ಕಿಮ್‌ ಶರ್ಮಾ ಜೊತೆ ಲಿಯಾಂಡರ್‌ ಪೇಸ್‌ ಡೇಟಿಂಗ್‌? ಫೋಟೋ ವೈರಲ್‌!

ಇನ್ನು, ಲಿಯಾಂಡರ್‌ ಪೇಸ್‌ಗಿಂತ ಮೊದಲು, ಕಿಮ್ ಹಸೀನ್ ದಿಲ್ರುಬಾ ನಟ ಹರ್ಷವರ್ಧನ್ ರಾಣೆಯೊಂದಿಗೆ ಡೇಟಿಂಗ್ ಮಾಡುತ್ತಿದ್ದರು. ಹಾಗೆ, ಭಾರತೀಯ ಮಾಜಿ ಕ್ರಿಕೆಟಿಗ ಯುವರಾಜ್‌ ಸಿಂಗ್ ಅವರೊಂದಿಗೂ ರಿಲೇಷನ್‌ಶಿಪ್‌ನಲ್ಲಿದ್ದರು. ಇನ್ನು, ಟೆನ್ನಿಸ್‌ ಆಟಗಾರ ಲಿಯಾಂಡರ್‌ ಪೇಸ್‌ ಮೊದಲಿಗೆ ಮಹಿಮಾ ಚೌಧರಿಯನ್ನು ಮದುವೆಯಾಗಿದ್ದರು. ಬಳಿಕ ಅವರಿಗೆ ವಿಚ್ಛೇದನ ನೀಡಿ ನಟ ಸಂಜಯ್‌ದತ್‌ರ ಮಾಜಿ ಪತ್ನಿ ರಿಯಾ ಪಿಳ್ಳೈ ಜೊತೆ ಹಲವು ವರ್ಷ ಜೀವನ ನಡೆಸಿದ್ದರು. 2014ರಲ್ಲಿ ರಿಯಾರಿಂದಲೂ ದೂರವಾಗಿದ್ದ ಪೇಸ್‌ 2021ರಲ್ಲಿ ಕಿಮ್‌ ಜೊತೆ ಕಾಣಿಸಿಕೊಂಡಿದ್ದರು. ಅಂದಿನಿಂದಲೂ ಇಬ್ಬರು ಲಿವ್‌ಇನ್‌ ಸಂಬಂಧದಲ್ಲಿ ಇದ್ದರು ಎನ್ನಲಾಗಿದೆ.

ಕಿಮ್ ಶರ್ಮಾ ಬೆಳ್ಳಿತೆರೆಯಿಂದ ಸದ್ಯ ವಿರಾಮ ತೆಗೆದುಕೊಂಡಿದ್ದು ಮತ್ತು ನಾವು ಅವರನ್ನು 70 ಎಂಎಂ ಪರದೆಯ ಮೇಲೆ ನೋಡಿ ಬಹಳ ಸಮಯವಾಗಿದೆ. ಯಶ್ ರಾಜ್ ಫಿಲಂಸ್‌ನ 'ಮೊಹಬ್ಬತೇನ್' ಚಿತ್ರದಲ್ಲಿ ತನ್ನ ಮುಗ್ಧ ಮುಖದ ಮೂಲಕ ನಟಿ ಹಲವರ ಹೃದಯಗಳನ್ನು ಗೆದ್ದರು. ಈ ಚಲನಚಿತ್ರವು ಆಕೆಯನ್ನು ರಾತ್ರೋರಾತ್ರಿ ಸ್ಟಾರ್‌ ಅನ್ನಾಗಿ ಮಾಡಿತು ಮತ್ತು ಶೀಘ್ರದಲ್ಲೇ ಹೆಚ್ಚು ಜನಪ್ರಿಯಳಾದಳು. ನಂತರ ಅವರು ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡರು ಮತ್ತು ಕೊನೆಯದಾಗಿ 'ಮಗಧೀರ' ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

click me!