ಕರ್ನಾಟಕ ಪಿಕಲ್‌ಬಾಲ್ ಪ್ರೀಮಿಯರ್ ಲೀಗ್ ಘೋಷಣೆ, ಸೆಪ್ಟೆಂಬರ್‌ನಿಂದ 6 ತಂಡಗಳ ಹೋರಾಟ

Published : Jul 03, 2026, 10:46 PM IST
Karnataka Pickleball Premier League

ಸಾರಾಂಶ

ದೇಶದ ಮೊದಲ ರಾಜ್ಯ ಮಟ್ಟದ ಪಿಕಲ್‌ಬಾಲ್ ಪ್ರೀಮಿಯರ್ ಲೀಗ್ ಘೋಷಣೆಯಾಗಿದೆ. ಸೆಪ್ಟೆಂಬರ್‌ನಲ್ಲಿ ಟೂರ್ನಿ ಆರಂಭಗೊಳ್ಳಲಿದೆ. ರಾಜ್ಯ ಪಿಕಲ್‌ಬಾಲ್ ಸಂಸ್ಥೆ ಸಹಯೋಗದೊಂದಿಗೆ ಅದ್ಧೂರಿಯಾಗಿ ಟೂರ್ನಿ ಆರಂಭಗೊಳ್ಳಲಿದೆ. 

ಬೆಂಗಳೂರು (ಜು.03) : ಪ್ರೀಮಿಯರ್ ಲೀಗ್ ಟೂರ್ನಿಗಳಿಂದ ಹಲವು ಕ್ರೀಡೆಗಳು ಇದೀಗ ಅಂತಾರಾಷ್ಟ್ರೀಯ ಗಮನ ಸೆಳೆಯುತ್ತಿದೆ. ಇದೀಗ ಕರ್ನಾಟಕದಲ್ಲಿ ಮೊದಲ ಆವೃತ್ತಿಯ ಪಿಕಲ್‌ಬಾಲ್ ಪ್ರೀಮಿಯರ್ ಲೀಗ್ ಟೂರ್ನಿ ಘೋಷಣೆಯಾಗಿದೆ. ಈ ಮೂಲಕ ಪಿಕಲ್‌ಬಾಲ್ ಪ್ರತಿಭೆಗಳಿಗೆ ಅತೀ ದೊಡ್ಡ ವೇದಿಕೆ ಸಿಗುತ್ತಿದೆ. ಕರ್ನಾಟಕ ರಾಜ್ಯ ಪಿಕಲ್‌ಬಾಲ್ ಸಂಸ್ಥೆ (ಕೆಎಸ್‌ಪಿಎ) ನೇತೃತ್ವದಲ್ಲಿ ಹಾಗೂ ಎಂಟ್ರೋಪಿ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಸಹಯೋಗದೊಂದಿಗೆ ಪ್ರಥಮ ಆವೃತ್ತಿಯ `ಕರ್ನಾಟಕ ಪಿಕಲ್‌ಬಾಲ್ ಪ್ರೀಮಿಯರ್ ಲೀಗ್' (ಕೆಪಿಪಿಎಲ್) ಅಧಿಕೃತವಾಗಿ ಘೋಷಣೆಯಾಗಿದೆ.

ಸೆಪ್ಟೆಂಬರ್‌ನಲ್ಲಿ ಆರಂಭಗೊಳ್ಳಲಿದೆ ಟೂರ್ನಿ

ಅಖಿಲ ಭಾರತ ಪಿಕಲ್‌ಬಾಲ್ ಸಂಸ್ಥೆಯ ಮಾನ್ಯತೆ ಪಡೆದಿರುವ ಈ ಮಹತ್ವಾಕಾಂಕ್ಷಿ ಫ್ರಾಂಚೈಸಿ ಆಧಾರಿತ ಲೀಗ್‌ ಟೂರ್ನಿ ಇದಾಗಿದೆ. ಕಸರ್ನಾಟಕ ಪ್ರಮುಖ ನಗರಗಳಿಂದ 6 ತಂಡಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದೆ. ಮೊದಲ ಆವೃತ್ತಿಯಲ್ಲಿ 6 ತಂಡಗಳು ಕಣಕ್ಕಿಳಿದರೆ, ಪ್ರತಿ ಸೀಸನ್‌ನಲ್ಲಿ ತಂಡಗಳ ಸಂಖ್ಯೆ ಹಾಗೂ ಟೂರ್ನಿ ವಿಸ್ತರಣೆಗೊಳ್ಳಲಿದೆ. ಸೀಸನ್ 2ರಲ್ಲಿ 8 ತಂಡಗಳು ಹಾಗೂ ಸೀಸನ್ 3ರಲ್ಲಿ 10 ತಂಡಗಳು ಲೀಗ್ ಸೇರಿಕೊಳ್ಳಲಿದೆ.

ಕೆಪಿಪಿಎಲ್ ಕೇವಲ ಒಂದು ಟೂರ್ನಮೆಂಟ್ ಅಲ್ಲ, ಇದು ರಾಜ್ಯದಲ್ಲಿ ಪಿಕಲ್‌ಬಾಲ್ ಕ್ರೀಡೆಯ ಸಮಗ್ರ ಬೆಳವಣಿಗೆಗೆ ಮತ್ತು ಉದಯೋನ್ಮುಖ ಪ್ರತಿಭೆಗಳಿಗೆ ವೃತ್ತಿಪರ ಅವಕಾಶಗಳನ್ನು ಸೃಷ್ಟಿಸುವ ಭದ್ರ ಬುನಾದಿಯಾಗಿದೆ ಎಂದು ಕೆಎಸ್‌ಪಿಎ ಅಧ್ಯಕ್ಷರಾದ ಎ.ಜಿ. ಶಿವಕುಮಾರ್ ತಿಳಿಸಿದ್ದಾರೆ. ಈ ಲೀಗ್ ಯುವ ಆಟಗಾರರ ಅಭಿವೃದ್ಧಿ ಹಾಗೂ ಕ್ರೀಡಾ ಪ್ರೇಮಿಗಳಲ್ಲಿ ಹೊಸ ಉತ್ಸಾಹ ಮೂಡಿಸುವ ಗುರಿ ಹೊಂದಿದೆ. ಹಾಗಾಗಿ, ಫ್ರಾಂಚೈಸಿ ಮಾಲೀಕರಿಗೂ ಆಹ್ವಾನಿಸಲಾಗಿದೆ ಎಂದು ತಿಳಿಸಲಾಗಿದೆ.

ಶೀಘ್ರದಲ್ಲೇ ವೇಳಾಪಟ್ಟಿ, ಟೂರ್ನಿ ಆಯೋಜನೆ, ಕೋರ್ಟ್, ಚಾಂಪಿಯನ್ ತಂಡಕ್ಕೆ ಪ್ರಶಸ್ತಿ ಮೊತ್ತ ಸೇರಿದಂತೆ ಎಲ್ಲಾ ಮಾಹಿತಿಗಳು ಬಹಿರಂಗವಾಗಲಿದೆ. ಇಷ್ಟೇ ಅಲ್ಲ ಪಿಕೆಲ್‌ಬಾಲ್ ಆಟಗಾರರ ಹರಾಜು ಪ್ರಕ್ರಿಯೆಯೂ ನಡೆಯಲಿದೆ. 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಂಗಳೂರು ಟಿಸಿಎಸ್ 10ಕೆ ಮ್ಯಾರಥಾನ್ ಯಶಸ್ಸಿನ ಹಿಂದಿರುವ ಶ್ರಮಿಕರು, ಸಾಧಕರಿಗೆ ಗೌರವ
ಸವಾಲಿಗೆ ನಮ್ಮ ತಂಡ ಸಿದ್ಧ: ಮಹಿಳಾ ಟೀಂ ಕೋಚ್ ಮರೀನೆ , SWABನಿಂದ ವಿಶ್ವ ಕ್ರೀಡಾ ಪತ್ರಕರ್ತರ ದಿನ ಆಚರಣೆ