* ಜೂನಿಯರ್ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಸೆಮೀಸ್‌ಗೇರಿದ ದೀಪಕ್ ಪೂನಿಯಾ
* ಭಾರತದ ದೀಪಕ್ ಪೂನಿಯಾ ಹಾಗೂ ಗೌರವ್ ಬಲಿಯನ್ ಸೆಮಿಫೈನಲ್‌ಗೆ ಲಗ್ಗೆ
* ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ವಿಫಲವಾಗಿದ್ದ ದೀಪಕ್
ರಷ್ಯಾ(ಆ.17): ಕಿರಿಯರ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ತಾರಾ ಕುಸ್ತಿಪಟು ದೀಪಕ್ ಪೂನಿಯಾ ಹಾಗೂ ಗೌರವ್ ಬಲಿಯನ್ ಸೆಮಿಫೈನಲ್ ತಲುಪಿದ್ದಾರೆ.
79 ಕೆ.ಜಿ.ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ರಷ್ಯಾದ ಅಲಿಕ್ ಬಡ್ತೀವ್‌ರನ್ನು 5-2 ಅಂತರದಿಂದ ಮಣಿಸಿ ಗೌರವ್ ಸೆಮೀಸ್‌ಗೇರಿದರೆ, 97 ಕೆ.ಜಿ. ವಿಭಾಗದಲ್ಲಿ ದೀಪಕ್ ಜಾರ್ಜಿಯಾದ ಲುಕಾ ಕುಚುವಾ ವಿರುದ್ಧ 9-4 ಅಂತರದಲ್ಲಿ ಗೆಲುವು ಸಾಧಿಸಿ ಅಂತಿಮ 4ರ ಘಟಕ್ಕೇರಿದರು. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕದ ನಿರೀಕ್ಷೆ ಹುಟ್ಟಿಸಿದ್ದ ದೀಪಕ್ ಪೂನಿಯಾ ದಿಟ್ಟ ಹೋರಾಟದ ನಡುವೆಯೂ ಪದಕ ಗೆಲ್ಲುವಲ್ಲಿ ವಿಫಲರಾಗಿದ್ದರು. ಶುಭಮ್(57ಕೆ.ಜಿ.), ಜೈದೀಪ್(70 ಕೆ.ಜಿ.) ರೋಹಿತ್ (65 ಕೆ.ಜಿ) ಕ್ವಾರ್ಟರ್‌ನಲ್ಲಿ ಸೋಲುಂಡರು.
ಕುಸ್ತಿ ಫೆಡರೇಷನ್ ಕ್ಷಮೆ ಕೋರಿದ ತಾರಾ ಕುಸ್ತಿಪಟು ವಿನೇಶ್ ಫೋಗಾಟ್
ಟಿಷ್ ಓಪನ್‌ಗೆ ಅರ್ಹತೆ ಪಡೆದ ಅದಿತಿ ಅಶೋಕ್
ಕಾರ್ನೌಸ್ಟೀ: ಒಲಿಂಪಿಕ್ಸ್‌ನಲ್ಲಿ ಅಚ್ಚರಿಯ ಪ್ರದರ್ಶನ ನೀಡಿ ಗಮನ ಸೆಳೆದಿದ್ದ ಕರ್ನಾಟಕದ ಗಾಲ್‌್ಫ ತಾರೆ ಅದಿತಿ ಅಶೋಕ್ ವುಮೆನ್ಸ್ ಬ್ರಿಟಿಷ್ ಓಪನ್‌ಗೆ ಅರ್ಹತೆ ಪಡೆದಿದ್ದಾರೆ. 18 ಹೋಲ್‌ಗಳ ಅರ್ಹತಾ ಸುತ್ತಿನಲ್ಲಿ ಅದಿತಿ ಎರಡನೇ ಸ್ಥಾನ ಪಡೆದು ಮುಂದಿನ ಹಂತಕ್ಕೆ ಪ್ರವೇಶಿಸಿದರು. ಬ್ರಿಟಿಷ್ ಓಪನ್ ಆ.9ರಿಂದ 22ರವರೆಗೆ ನಡೆಯಲಿದೆ.