ಯುಎಸ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಜಪಾನಿನ ನವೊಮಿ ಒಸಾಕ ಫೈನಲ್ ಪ್ರವೇಶಿಸಿದ್ದಾರೆ. ಅಂದಹಾಗೆ ನವೊಮಿ ಮೂರನೇ ಗ್ರ್ಯಾನ್‌ಸ್ಲಾಂ ಗೆಲ್ಲುವ ಲೆಕ್ಕಾಚಾರದಲ್ಲಿದ್ದಾರೆ.
ನ್ಯೂಯಾರ್ಕ್(ಸೆ.11): ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಜಪಾನ್‌ನ ನವೊಮಿ ಒಸಾಕ ಅನಾಯಾಸವಾಗಿ ಫೈನಲ್ ಪ್ರವೇಶಿಸಿದ್ದಾರೆ. ಅಮೆರಿಕದ ಜೆನಿಫರ್ ಬ್ರಾಡಿ ವಿರುದ್ಧ ಸುಲಭ ಜಯ ಸಾಧಿಸುವ ಮೂಲಕ ಎರಡನೇ ಬಾರಿಗೆ ನವೊಮಿ ಒಸಾಕ ಯುಎಸ್ ಓಪನ್ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.
2 ಬಾರಿ ಗ್ರ್ಯಾನ್ ಸ್ಲಾಂ ಪ್ರಶಸ್ತಿ ವಿಜೇತೆ ನವೊಮಿ 7-6(1), 3-6 ಹಾಗೂ 6-3 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿ ಫೈನಲ್ ಪ್ರವೇಶಿಸಿದ್ದಾರೆ.
Naomi Osaka has done it again 🔥
She beats Brady, 7-6(1), 3-6, 6-3, to reach her second final in three years. pic.twitter.com/EEw6cab6Li
Naomi Osaka overcomes a tough test from Jennifer Brady to reach another final in New York.
Read more ➡️ https://t.co/zpACBODSgX pic.twitter.com/UiKDthWzP4
ಇನ್ನು ಗುರುವಾರ ನಡೆದ ಪಂದ್ಯದಲ್ಲಿ ದಾಖಲೆಯ 24ನೇ ಗ್ರ್ಯಾನ್ ಸ್ಲಾಂ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಅಮೆರಿಕದ ಸೆರೆನಾ ವಿಲಿಯಮ್ಸ್, ಯುಎಸ್ ಓಪನ್ ಮಹಿಳಾ ಸಿಂಗಲ್ಸ್‌ನ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಲ್ಗೇರಿಯಾದ ಪಿರೊನ್ಕೋವಾ ವಿರುದ್ಧ 4-6, 6-3, 6-2 ಸೆಟ್‌ಗಳಲ್ಲಿ ಜಯಗಳಿಸಿ ಸೆಮೀಸ್ಗೇರಿದರು. ಪುರುಷರ ಹಾಗೂ ಮಹಿಳಾ ಸಿಂಗಲ್ಸ್ ಎರಡೂ ವಿಭಾಗಗಳಲ್ಲಿ ಸೆಮಿಫೈನಲ್ ಮುಖಾಮುಖಿ ಅಂತಿಮಗೊಂಡಿದೆ.
ಯುಎಸ್ ಓಪನ್: ಒಸಾಕ, ಜ್ವರೆವಾ ಸೆಮಿಫೈನಲ್‌ಗೆ ಲಗ್ಗೆ
ಪುರುಷರ ಸಿಂಗಲ್ಸ್‌ನಲ್ಲಿ ಡೊಮಿನಿಕ್ ಥೀಮ್‌ಗೆ ರಷ್ಯಾದ ಡೆನಿಲ್ ಮೆಡ್ವೆಡೆವ್ ಎದುರಾಳಿಯಾದರೆ, ಸ್ಪೇನ್‌ನ ಕರ್ರೆನೊ ಬುಸ್ಟಾ ವಿರುದ್ಧ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಸೆಣಸಲಿದ್ದಾರೆ. ಮಹಿಳಾ ಸಿಂಗಲ್ಸ್ ಸೆಮೀಸ್‌ನಲ್ಲಿ ಸೆರೆನಾಗೆ ಬೆಲಾರುಸ್ನ ವಿಕ್ಟೋರಿಯಾ ಅಜರೆಂಕಾ ಎದುರಿಸಲಿದ್ದಾರೆ.