ಚಿನ್ನಕ್ಕೆ ಶೂಟ್‌ ಮಾಡಿದ ಭಾರತದ ರಾಹಿ ಸರ್ನೋಬಾತ್‌

By Kannadaprabha News  |  First Published Jun 29, 2021, 10:07 AM IST

* ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌ನಲ್ಲಿ ದೇಶಕ್ಕೆ ಮೊದಲ ಚಿನ್ನ ಗೆದ್ದ ರಾಹಿ ಸರ್ನೋಬಾತ್‌ 

* ಕ್ರೊವೇಷಿಯಾದಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌

* 25 ಮೀ. ಪಿಸ್ತೂಲ್‌ ವಿಭಾಗದಲ್ಲಿ ಚಿನ್ನ ರಾಹಿ ಸರ್ನೋಬಾತ್‌ 


ಒಸಿಯಾಕ್(ಜೂ.29)‌: ಒಲಿಂಪಿಕ್ಸ್‌ನಲ್ಲಿ ಪದಕದ ಬೇಟೆಯಾಡುವ ಹುಮ್ಮಸ್ಸಿನಲ್ಲಿರುವ ಭಾರತದ ರಾಹಿ ಸರ್ನೋಬಾತ್‌ ಕ್ರೊವೇಷಿಯಾದಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌ನ 25 ಮೀ. ಪಿಸ್ತೂಲ್‌ ವಿಭಾಗದಲ್ಲಿ ಚಿನ್ನ ಹೊಡೆದಿದ್ದಾರೆ.

ಈ ವಿಶ್ವಕಪ್‌ನಲ್ಲಿ ಇಲ್ಲಿಯವರೆಗೆ ಒಂದು ಬೆಳ್ಳಿ, ಎರಡು ಕಂಚಿನ ಪದಕ ಗೆದ್ದಿರುವ ಭಾರತಕ್ಕಿದು ಮೊದಲ ಚಿನ್ನ. ಇದೇ ಸ್ಪರ್ಧೆಯಲ್ಲಿ ಯುವ ಶೂಟರ್‌ ಮನು ಭಾಕರ್‌ 7ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

shooting: India’s Rahi Sarnobat wins gold🥇in women’s 25 metres pistol event in Osijek, Croatia. pic.twitter.com/LnLodH8Ysp

— All India Radio News (@airnewsalerts)

Tap to resize

Latest Videos

ದೀಪಿಕಾ ಕುಮಾರಿ ಈಗ ವಿಶ್ವದ ನಂ.1 ರ‍್ಯಾಂಕಿಂಗ್‌ ಬಿಲ್ಗಾರ್ತಿ

ಪ್ಯಾರಿಸ್‌: ಮೊನ್ನೆಯಷ್ಟೇ ಮುಗಿದ ವಿಶ್ವಕಪ್‌ ಸ್ಟೇಜ್‌-3 ಬಿಲ್ಗಾರಿಕೆಯಲ್ಲಿ ಹ್ಯಾಟ್ರಿಕ್‌ ಚಿನ್ನದ ಪದಕಗಳನ್ನು ಕಬಳಿಸಿದ ಭಾರತದ ತಾರಾ ಬಿಲ್ಗಾರ್ತಿ ದೀಪಿಕಾ ಕುಮಾರಿ ವಿಶ್ವ ರ‍್ಯಾಂಕಿಂಗ್‌ನಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ. 

ಆರ್ಚರಿ ವಿಶ್ವಕಪ್‌: 3 ಚಿನ್ನ ಗೆದ್ದ ದೀಪಿಕಾ ಕುಮಾರಿ!

2012ರಲ್ಲಿ ಮೊತ್ತಮೊದಲ ಬಾರಿಗೆ ವಿಶ್ವದ ನಂ.1 ಬಿಲ್ಗಾರ್ತಿ ಎನಿಸಿಕೊಂಡಿದ್ದ 27 ವರ್ಷದ ದೀಪಿಕಾ, ವಿಶ್ವಕಪ್‌ನ 3 ರಿಕರ್ವ್ ವಿಭಾಗದಲ್ಲಿ ಮಹಿಳಾ ವೈಯಕ್ತಿಕ, ತಂಡ ಹಾಗೂ ಮಿಶ್ರ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು.

click me!