ಭಾರತದ ಶೂಟರ್‌ಗಳು ಪದಕದ ಭೇಟೆ ಮುಂದುವರೆಸಿದ್ದು, ಭಾರತ ಪದಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ(ಮಾ.22): ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತೀಯ ಶೂಟರ್‌ಗಳು ಪದಕ ಬೇಟೆ ಮುಂದುವರಿಸಿದ್ದಾರೆ. ಭಾನುವಾರ ಭಾರತಕ್ಕೆ 4 ಪದಕ ಒಲಿಯಿತು.
10 ಮೀ. ಏರ್ ಪಿಸ್ತೂಲ್ ತಂಡ ಸ್ಪರ್ಧೆಯಲ್ಲಿ ಪುರುಷಾ, ಮಹಿಳಾ ತಂಡಗಳು ಚಿನ್ನದ ಪದಕ ಜಯಿಸಿದರೆ, 10 ಮೀ. ಏರ್ ರೈಫಲ್ ತಂಡ ಸ್ಪರ್ಧೆಯಲ್ಲಿ ಭಾರತ ಪುರುಷರ ತಂಡ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿತು. ಮಹಿಳೆಯರ ಸ್ಕೀಟ್ ಸ್ಪರ್ಧೆಯಲ್ಲಿ 20 ವರ್ಷದ ಗನೀಮತ್ ಶೆಖೊಂ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಭಾರತ ತಲಾ 3 ಚಿನ್ನ, ಬೆಳ್ಳಿ ಹಾಗೂ ಕಂಚಿನೊಂದಿಗೆ ಒಟ್ಟು 9 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದೆ.
ಶೂಟಿಂಗ್ ವಿಶ್ವಕಪ್: ಭಾರತದ ಮೂವರು ಫೈನಲ್‌ಗೆ
ಪುರುಷರ 10 ಮೀ. ಏರ್ ಪಿಸ್ತೂಲ್ ತಂಡದಲ್ಲಿ ಸೌರಭ್, ಅಭಿಷೇಕ್ ಹಾಗೂ ಶಹಜಾರ್ ಇದ್ದರೆ, ಮಹಿಳೆಯರ 10 ಮೀ. ಏರ್ ಪಿಸ್ತೂಲ್ ತಂಡದಲ್ಲಿ ಯಶಸ್ವಿನಿ, ಮನು ಭಾಕರ್ ಹಾಗೂ ಶ್ರೀ ನಿವೇತಾ ಇದ್ದರು. ಪುರುಷರ 10 ಮೀ. ಏರ್ ರೈಫಲ್ ತಂಡ ಪ್ರತಾಪ್, ದೀಪಕ್ ಹಾಗೂ ಪಂಕಜ್‌ರನ್ನು ಒಳಗೊಂಡಿತ್ತು.