ನಾನು ನಿವೃತ್ತಿಯಾಗುತ್ತಿದ್ದೇನೆ, ಸುಂಟರಗಾಳಿ ಎಬ್ಬಿಸಿದ ಪಿವಿ ಸಿಂಧೂ ಟ್ವೀಟ್!

By Suvarna News  |  First Published Nov 2, 2020, 3:52 PM IST

ಭಾರತೀಯ ಕ್ರೀಡಾಭಿಮಾನಿಗಳಿಗೆ ದಿಢೀರ್ ಆಘಾತ, ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಪಿವಿ ಸಿಂಧೂ ಟ್ವಿಟರ್ ಮೂಲಕ ನಾನು ನಿವತ್ತಿಯಾಗುತ್ತಿದ್ದೇನೆ ಎಂಬ ಪೋಸ್ಟ್ ಭಾರಿ ಸಂಚಲನದ ಜೊತೆಗೆ ಅಷ್ಟೇ ಗೊಂದಲ ಸೃಷ್ಟಿಸಿದೆ. ಸಿಂಧೂ ನಿಜಕ್ಕೂ ನಿವೃತ್ತಿಯಾಗುತ್ತಿದ್ದಾರಾ? ಇಲ್ಲಿದೆ ವಿವರ.


ಹೈದರಾಬಾದ್(ನ.02): ಭಾರತದಲ್ಲಿ ಕೊರೋನಾ ಕಾರಣದಿಂದ ಸ್ಥಗಿತಗೊಂಡಿದ್ದ ಕ್ರೀಡಾ ಚಟುವಟಿಕೆಗಳು ನಿಧಾನವಾಗಿ ಆರಂಭಗೊಳ್ಳುತ್ತಿದೆ.  ನೆಚ್ಚಿನ ಕ್ರೀಡಾತಾರೆಯನ್ನು ಕ್ರೀಡಾಂಗಣದಲ್ಲಿ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಇದರ ನಡುವೆ ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧೂ ಸಾಮಾಜಿಕ ಜಾಲತಾಣದಲ್ಲಿ ನಾನು ನಿವೃತ್ತಿಯಾಗುತ್ತಿದ್ದೇನೆ ಎಂಬ ಪೋಸ್ಟ್ ಅಭಿಮಾನಿಗಳಿಗೆ ಆಘಾತ ನೀಡಿತ್ತು. ಪಿವಿ ಸಿಂಧೂ ನಿವೃತ್ತಿಯಾಗುತ್ತಿದ್ದೇನೆ ಎಂದಿರುವುದು ನಿಜ. ಆದರೆ ಕ್ರೀಡೆಯಿಂದಲ್ಲ, ಬದಲಾಗಿ ಜಗತ್ತಿನ ಅಶಾಂತಿಯಿಂದ, ಕೆಟ್ಟ ಪರಿಸ್ಥಿತಿಯಿಂದ, ಭಯದಿಂದ ನಿವೃತ್ತಿಯಾಗುತ್ತಿದ್ದೇನೆ ಎಂದು ಪಿವಿ ಸಿಂಧೂ ಹೇಳಿದ್ದಾರೆ.

ಕೊರೋನಾ ಯುದ್ಧ ಗೆಲ್ಲಲು ಕ್ರೀಡೆ ಸಹಕಾರಿ: ಪಿ.ವಿ. ಸಿಂಧು.

Tap to resize

Latest Videos

ಟ್ವಿಟರ್ ಮೂಲಕ ನಾವು ನಿವೃತ್ತಿಯಾಗುತ್ತಿದ್ದೇನೆ ಎಂದು ಪಿವಿ ಸಿಂಧೂ ಪೋಸ್ಟ್ ಅಭಿಮಾನಿಗಳಿಗೆ ಆಘಾತ ತಂದಿತ್ತು. ಇಷ್ಟೇ ಅಲ್ಲ, ಫಿಟ್ನೆಸ್, ಇಂಜುರಿ ಕಾರಣಗಳನ್ನು ಮುಂದಿಟ್ಟ ಸಿಂದೂ ಬ್ಯಾಡ್ಮಿಂಟನ್‌ನಿಂದ ನಿವೃತ್ತಿಯಾಗುತ್ತಿರುವಂತೆ ಬರೆದುಕೊಂಡಿದ್ದಾರೆ. ಡೆನ್ಮಾರ್ಕ್ ಒಪನ್ ನನ್ನ ಕೊನೆಯ ಪ್ರವಾಸ ಎಂದು ಆರಂಭಿಸಿದ ಸಿಂಧೂ, ನನ್ನ ದೊಡ್ಡ ಬರಹವನ್ನು ಸಂಪೂರ್ಣ ಒದಿದಾಗ ನಿಮಗೆ ಅಚ್ಚರಿಯಾಗಬಹುದು. ಈ ಲಾಕ್‌ಡೌನ್ ಹಲವು ಪಾಠಗಳನ್ನು ಕಲಿಸಿದೆ. ಹಲವು ದಿನಗಳಿಂದ ಮನೆಯಲ್ಲೇ ಇದ್ದೇನೆ. ಡೆನ್ಮಾರ್ಕ್ ಒಪನ್‌ನೊಂದಿಗೆ ವಿದಾಯ ಹೇಳುತ್ತಿದ್ದೇನೆ ಎಂಬ ಅರ್ಧದಲ್ಲಿ ಬರೆದುಕೊಂಡಿದ್ದಾರೆ. ಆದರೆ ಅಂತ್ಯದಲ್ಲಿ ಪಿವಿ ಸಿಂಧೂ ಹೇಳ ಹೊರಟಿರುವ ಅಸಲಿ ವಿಚಾರವನ್ನು ಹೇಳಿದ್ದಾರೆ.

 

🙏 pic.twitter.com/W7uw2IvF4S

— Pvsindhu (@Pvsindhu1)

ಬರಹದ ಅಂತ್ಯದಲ್ಲಿ ನಾನು ವೈರಸ್ ಕುರಿತಿರುವ ಅಸಡ್ಡೆ, ಶುಚಿತ್ವದೆಡೆಗಿರುವ ನಿರ್ಲಕ್ಷ್ಯತನದಿಂದ ನಿವೃತ್ತಿಯಾಗಬಲು ಬಯಸುತ್ತೇನೆ, ನಾನು ಅಶಾಂತಿಯಿಂದ ಕೂಡಿದ ಈ ಜಗತ್ತಿನ ಮನಸ್ಥಿತಿಯಿಂದ ನಿವೃತ್ತಿಯಾಗಬಲು ಬಯಸುತ್ತೇನೆ, ಋಣಾತ್ಮಕ ಅಂಶಗಳಿಂದ, ಕೆಟ್ಟ ಆಲೋಚನೆಗಳಿಂದ ನಿವೃತ್ತಿಯಾಗುತ್ತಿದ್ದೇನೆ ಎಂದು ಪಿವಿ ಸಿಂಧೂ ಸ್ಪಷ್ಟವಾಗಿ ಹೇಳಿದ್ದಾರೆ. ಈ ಮೂಲಕ ತಾನೂ ಕ್ರೀಡೆಯಿಂದ ನಿವೃತ್ತಿಯಾಗುತ್ತಿಲ್ಲ, ಬದಲಾಗಿ ಮತ್ತಷ್ಟು ಬಲಿಷ್ಠವಾಗಿ ಮುಂದಿನ ಟೂರ್ನಿ ಎದುರುನೋಡುತ್ತಿದ್ದೇನೆ ಎಂದಿದ್ದಾರೆ.

ಪಿವಿ ಸಿಂಧೂ ಟ್ವೀಟ್ ಅಭಿಮಾನಿಗಳಲ್ಲಿ ಸಾಕಷ್ಟು ಗೊಂದಲ ಸೃಷ್ಟಿಸಿದೆ. ಹಲವರು ಸಿಂಧೂ ನಿವೃತ್ತಿಯಾಗಿದ್ದಾರೆ. ಅವರ ಮುಂದಿನ ವಿಶ್ರಾಂತಿ ಜೀವನಕ್ಕೆ ಶುಭವಾಗಲಿ ಎಂದು ಹಾರೈಸಿದ್ದಾರೆ. ಇನ್ನೂ ಹಲವರು ಇಷ್ಟು ಬೇಗ ನಿವೃತ್ತಿಯಾಗಬಾರದು, ನಿರ್ಧಾರದಿಂದ ಹಿಂದೆ ಸರಿಯಿರಿ ಎಂದು ಮನವಿ ಮಾಡಿದ್ದಾರೆ. ಆದರೆ ಅಸಲಿಗೆ ಸಿಂಧೂ ವಿದಾಯ ಹೇಳಿಲ್ಲ. ಸಿಂಧೂ ಟ್ವೀಟ್ ಗೊಂದಲ ಸೃಷ್ಟಿಸಿದ್ದು ಮಾತ್ರ ಸುಳ್ಳಲ್ಲ.

click me!