* ಫ್ರೆಂಚ್ ಓಪನ್ ಸೆಮಿಫೈನಲ್‌ನಲ್ಲಿ ನಡಾಲ್-ಜೋಕೋವಿಚ್ ಮುಖಾಮುಖಿ
* ಫ್ರೆಂಚ್ ಓಪನ್ ಸೆಮಿಫೈನಲ್‌ನಲ್ಲಿ 8ನೇ ಬಾರಿ ಮುಖಾಮುಖಿಯಾಗುತ್ತಿರುವ ನಡಾಲ್-ಜೋಕೋ
* ರಷ್ಯಾದ ಅನಸ್ತೇಸಿಯಾ ಪಾವ್ಲುಚೆಂಕೋವಾ ಫ್ರೆಂಚ್ ಓಪನ್ ಮಹಿಳೆಯರ ಸಿಂಗಲ್ಸ್ ಫೈನಲ್‌ಗೆ ಲಗ್ಗೆ
ಪ್ಯಾರಿಸ್(ಜೂ.11): ವಿಶ್ವದ ನಂ.1 ಟೆನಿಸ್ ಆಟಗಾರ ನೊವಾಕ್ ಜೋಕೊವಿಚ್ ಹಾಗೂ 13 ಬಾರಿ ಫ್ರೆಂಚ್ ಒಪನ್ ಗೆದ್ದಿರುವ ರಾಫೆಲ್ ನಡಾಲ್ ಫ್ರೆಂಚ್ ಓಪನ್ ಸೆಮಿಫೈನಲ್ ಪ್ರವೇಶಿಸಿದ್ದು, ಇಬ್ಬರೂ ಸೆಮಿಫೈನಲ್‌ನಲ್ಲೇ ಮುಖಾಮುಖಿಯಾಗಲಿದ್ದಾರೆ. ಹೀಗಾಗಿ ಹೈವೋಲ್ಟೇಜ್ ಕದನಕ್ಕೆ ಶುಕ್ರವಾರದ ಓಪನ್ ಸೆಮಿಫೈನಲ್ ಸಾಕ್ಷಿಯಾಗಲಿದೆ.
ಇಬ್ಬರೂ ಫ್ರೆಂಚ್ ಓಪನ್ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿರುವುದು ಇದು 8ನೇ ಬಾರಿ ಆಗಿದೆ. ಜೋಕೊವಿಚ್ ಇಟಲಿಯ ಮ್ಯಾಥ್ಯೂ ಬೆರೆಟಿನ ವಿರುದ್ಧ 6-3,6-2,6-7(5), 7-5ರಿಂದ ಗೆದ್ದರೆ, ನಡಾಲ್ ಅರ್ಜೆಂಟೀನಾದ ಡೀಗೋ ಸ್ವಾಜ್‌ರ್‍ಮ್ಯಾನ್ ವಿರುದ್ಧ 6-3,4-6,6-4,6-0 ರಿಂದ ಗೆದ್ದರು.
"This match had it all: falls, crowd, break. It was a lot of intensity"
Catch up on Djokovic's thrilling win that earned him the right to play Nadal in the semi-finals 👇
ಫ್ರೆಂಚ್ ಓಪನ್: ಹಾಲಿ ಚಾಂಪಿಯನ್ ಇಗಾ ಸ್ವಿಯಾಟೆಕ್ ಔಟ್
ಫ್ರೆಂಚ್ ಓಪನ್: ಚೊಚ್ಚಲ ಫೈನಲ್‌ಗೆ ಅನಸ್ತೇಸಿಯಾ
ಪ್ಯಾರಿಸ್: ರಷ್ಯಾದ ಅನಸ್ತೇಸಿಯಾ ಪಾವ್ಲುಚೆಂಕೋವಾ ಫ್ರೆಂಚ್ ಓಪನ್ ಮಹಿಳೆಯರ ಸಿಂಗಲ್ಸ್ ಫೈನಲ್ ಪ್ರವೇಶಿಸಿದ್ದಾರೆ. ಗುರುವಾರದ ಸೆಮಿಫೈನಲ್‌ನಲ್ಲಿ ಸ್ಲೊವೇನಿಯಾದ ತಮಾರಾ ಜಿದಾನ್ಸೆಕ್ ವಿರುದ್ಧ 7-5, 6-3 ನೇರ ಸೆಟ್ ಗಳಿಸಿದ ಪಾವ್ಲುಚೆಂಕೋವಾ, 2015ರಲ್ಲಿ ಮರಿಯಾ ಶರಪೋವಾ ಬಳಿಕ ಫ್ರೆಂಚ್ ಓಪನ್ ಮಹಿಳೆಯರ ಸಿಂಗಲ್ಸ್ ಫೈನಲ್ ತಲುಪಿದ ಮೊದಲ ರಷ್ಯಾ ಆಟಗಾರ್ತಿ ಎನಿಸಿಕೊಂಡಿದ್ದಾರೆ.