ಭಾರತದ ಮಹಿಳಾ ಸಿಂಗಲ್ಸ್ ನಂ.1 ಶ್ರೇಯಾಂಕಿತ ಟೆನಿಸ್ ಆಟಗಾರ್ತಿ ಫ್ರೆಂಚ್ ಓಪನ್ ಅರ್ಹತಾ ಸುತ್ತಿನಲ್ಲಿ ಎರಡನೇ ಹಂತ ಪ್ರವೇಶಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಪ್ಯಾರಿಸ್(ಸೆ.23): ಕೊರೋನಾ ಭೀತಿ ನಡುವೆಯೇ ಆರಂಭವಾಗಿರುವ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಭಾರತದ ಅಂಕಿತಾ ರೈನಾ ಶುಭಾರಂಭ ಮಾಡಿದ್ದು, 2ನೇ ಸುತ್ತು ಪ್ರವೇಶಿಸಿದ್ದಾರೆ. ಮತ್ತೊಂದೆಡೆ ಪುರುಷರ ಸಿಂಗಲ್ಸ್‌ನಲ್ಲಿ ರಾಮ್‌ಕುಮಾರ್ ರಾಮನಾಥನ್ ಮೊದಲ ಸುತ್ತಲ್ಲಿ ನಿರ್ಗಮಿಸಿದ್ದಾರೆ.
ಮಹಿಳಾ ಸಿಂಗಲ್ಸ್‌ನ ಮೊದಲ ಅರ್ಹತಾ ಸುತ್ತಲ್ಲಿ ಅಂಕಿತಾ ರೈನಾ, ಸರ್ಬಿಯಾದ ಜೋವಾನ ಜೊವಿಕ್ ವಿರುದ್ಧ 6-4, 4-6, 6-4 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಗುರುವಾರ ನಡೆಯಲಿರುವ 2ನೇ ಅರ್ಹತಾ ಸುತ್ತಿನಲ್ಲಿ ಅಂಕಿತಾ, ಜಪಾನ್‌ನ ಕುರುಮಿ ನಾರಾ ಎದುರು ಸೆಣಸಲಿದ್ದಾರೆ.
ಫ್ರೆಂಚ್ ಓಪನ್: ನಗಾಲ್‌ಗೆ ಶಾಕ್, 2ನೇ ಸುತ್ತಿಗೆ ಪ್ರಜ್ಞೇಶ್
Ramkumar Ramanathan bows out of French Open qualifiers; In the women’s singles qualifiers, Ankita Raina to clash with Serbian player Jovana Jovic
— DD India (@DDIndialive)ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಅರ್ಹತಾ ಸುತ್ತಲ್ಲಿ ರಾಮ್‌ಕುಮಾರ್, ಫ್ರಾನ್ಸ್‌ನ ಟ್ರಿಸ್ಟನ್ ಲಮ್ಸಿನೆ ವಿರುದ್ಧ 5-7, 2-6 ಸೆಟ್‌ಗಳಲ್ಲಿ ಪರಾಭವಗೊಂಡರು. ಇದರೊಂದಿಗೆ ರಾಮ್‌ಕುಮಾರ್ ಟೂರ್ನಿಯಿಂದ ಹೊರಬಿದ್ದರು. ಸುಮಿತ್ ನಗಾಲ್ ಕೂಡಾ ಮೊದಲ ಸುತ್ತಲ್ಲಿ ಸೋಲುಂಡು ನಿರ್ಗಮಿಸಿದ್ದರು. ಮತ್ತೊಬ್ಬ ಟೆನಿಸಿಗ ಪ್ರಜ್ನೇಶ್ ಗುಣೇಶ್ವರನ್ ಮೊದಲ ಸುತ್ತಲ್ಲಿ ಗೆದ್ದಿದ್ದು, 2ನೇ ಅರ್ಹತಾ ಸುತ್ತು ಪ್ರವೇಶಿಸಿದ್ದಾರೆ.