ಡೇವಿಸ್‌ ಕಪ್‌: ಇಂದಿನಿಂದ ಭಾರತ-ಕ್ರೊವೇಷಿಯಾ ಸೆಣಸು

By Suvarna News  |  First Published Mar 6, 2020, 10:54 AM IST

ಟೆನಿಸ್ ಕ್ಷೇತ್ರದಲ್ಲಿ ಭಾರತ ಬಲಿಷ್ಠವಾಗಿ ರೂಪುಗೊಳ್ಳುತ್ತಿದೆ. ಸುಮಿತ್ ನಗಾಲ್ ಹಾಗೂ ಪ್ರಜ್ನೇಶ್ ಹೊಸ ಭರವಸೆಗಳಾಗಿದ್ದಾರೆ. ಇದೀಗ ಡೇವಿಸ್ ಕಪ್ ಟೂರ್ನಿಯಲ್ಲಿ ಭಾರತ ಗೆಲುವಿನ ವಿಶ್ವಾಸದಲ್ಲಿದೆ 


ಜಾಗ್ರೆಬ್‌(ಮಾ.06): ಭಾರತ ಹಾಗೂ ಕ್ರೊವೇಷಿಯಾ ನಡುವಿನ ಡೇವಿಸ್‌ ಕಪ್‌ ಅರ್ಹತಾ ಸುತ್ತಿನ ಪಂದ್ಯ ಶುಕ್ರವಾರದಿಂದ ಇಲ್ಲಿ ಆರಂಭಗೊಳ್ಳಲಿದೆ. ಭಾರತ ತಂಡವನ್ನು ಸುಮಿತ್‌ ನಗಾಲ್‌ ಹಾಗೂ ಪ್ರಜ್ನೇಶ್‌ ಗುಣೇಶ್ವರನ್‌ ಮುನ್ನಡೆಸಲಿದ್ದು, ಬಲಿಷ್ಠ ಕ್ರೊವೇಷಿಯಾ ವಿರುದ್ಧ ಭಾರತ ಗೆಲುವಿನ ವಿಶ್ವಾಸದಲ್ಲಿದೆ. 

ಇದನ್ನೂ ಓದಿ: ಟೆನಿಸ್ ಲೋಕದ ಸುಂದರಿ ಶರಪೋವಾ; ದಿಢೀರ್ ನಿವೃತ್ತಿ ಹಿಂದಿದೆ ಕಹಿ ಅಧ್ಯಾಯ!

Tap to resize

Latest Videos

ಆತಿಥೇಯ ತಂಡವನ್ನು ವಿಶ್ವ ನಂ.37, 2014ರ ಯುಎಸ್‌ ಓಪನ್‌ ಚಾಂಪಿಯನ್‌ ಮರಿನ್‌ ಸಿಲಿಚ್‌ ಮುನ್ನಡೆಸಲಿದ್ದಾರೆ.  ವಿಶ್ವ ನಂ.33 ಬೊರ್ನಾ ಕೊರಿಚ್‌ ಅನುಪಸ್ಥಿತಿ ಕ್ರೊವೇಷಿಯಾಗೆ ಹಿನ್ನಡೆ ಉಂಟು ಮಾಡಲಿದೆ. ಸಿಂಗಲ್ಸ್‌ ವಿಭಾಗದಲ್ಲಿ 2ನೇ ಆಟಗಾರ ಬೊರ್ನಾ ಗೊಜೊ ವಿರುದ್ಧ ಗೆಲುವು ಸಾಧಿಸಲು ಭಾರತದ ಸಿಂಗಲ್ಸ್‌ ಅಟಗಾರರಾದ ಪ್ರಜ್ನೇಶ್‌ ಹಾಗೂ ಸುಮಿತ್‌ ಎದುರು ನೋಡುತ್ತಿದ್ದಾರೆ. 

ಇದನ್ನೂ ಓದಿ: ಡೇವಿಸ್‌ ಕಪ್‌: ಭಾರತ ತಂಡದಲ್ಲಿ ಲಿಯಾಂಡರ್ ಪೇಸ್‌ಗೆ ಸ್ಥಾನ

ಗೊಜೊ ಇದೇ ಮೊದಲ ಬಾರಿಗೆ ಡೇವಿಸ್‌ ಕಪ್‌ನಲ್ಲಿ ಆಡಲಿದ್ದಾರೆ. ಡಬಲ್ಸ್‌ನಲ್ಲಿ ಲಿಯಾಂಡರ್‌ ಪೇಸ್‌ ಹಾಗೂ ರೋಹನ್‌ ಬೋಪಣ್ಣ ಕಣಕ್ಕಿಳಿಯಲಿದ್ದಾರೆ. ಡಬಲ್ಸ್‌ ಫಲಿತಾಂಶ, ನಿರ್ಣಾಯಕವಾಗುವ ಸಾಧ್ಯತೆ ಇದೆ. ಈ ವರ್ಷ ನಿವೃತ್ತಿ ಪಡೆಯಲಿರುವ ಭಾರತದ ದಿಗ್ಗಜ ಟೆನಿಸಿಗ ಲಿಯಾಂಡರ್‌ ಪೇಸ್‌ಗೆ ಇದು ಕೊನೆ ಡೇವಿಸ್‌ ಕಪ್‌ ಪಂದ್ಯವಾಗಲಿದೆ.

ಈ ಮುಖಾಮುಖಿಯಲ್ಲಿ ಗೆಲ್ಲುವ ತಂಡ, ನವೆಂಬರ್‌ನಲ್ಲಿ ಮ್ಯಾಡ್ರಿಡ್‌ನಲ್ಲಿ ನಡೆಯಲಿರುವ ಡೇವಿಸ್‌ ಕಪ್‌ ಫೈನಲ್ಸ್‌ ಪಂದ್ಯಾವಳಿಯಲ್ಲಿ ಆಡಲು ಅರ್ಹತೆ ಪಡೆಯಲಿದೆ.

click me!