Pro Kabaddi League : ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್ ಗೆ ಮತ್ತೆ ಮುಖಭಂಗ!

By Suvarna News  |  First Published Dec 29, 2021, 11:10 PM IST

2019ರ ಪಿಕೆಎಲ್ ಫೈನಲ್ ಸೋಲಿಗೆ ಸೇಡು ತೀರಿಸಿಕೊಂಡ ದಬಾಂಗ್ ದೆಹಲಿ
ದಬಾಗ್ ದೆಹಲಿ ಗೆಲುವಿನಲ್ಲಿ ಮಿಂಚಿದ ನವೀನ್ ಕುಮಾರ್
ಗುಜರಾತ್ ಜೈಂಟ್ಸ್ ಹಾಗೂ ಯುಪಿ ಯೋಧಾ ನಡುವಿನ ಕಾಳಗ ಟೈ
 


ಬೆಂಗಳೂರು (ಡಿ.29): ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ನ (Pro Kabaddi League) ಇಂದಿನ ಪಂದ್ಯಗಳು ವಿಶೇಷ ಕಾರಣಗಳಿಂದಾಗಿ ಮಹತ್ವ ಪಡೆದಿದ್ದವು. 2019ರ ಪಿಕೆಎಲ್ ನ ಫೈನಲಿಸ್ಟ್ ತಂಡಗಳಾದ ದಬಾಂಗ್ ದೆಹಲಿ (Dabang Delhi) ಹಾಗೂ ಬೆಂಗಾಲ್ ವಾರಿಯರ್ಸ್ (Bengal Warriors) ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಿದ್ದರೆ, ತಮ್ಮ ಬಲಿಷ್ಠ ಆಟದಿಂದಾಗಿ ಗಮನಸೆಳೆದಿರುವ ಯುಪಿ ಯೋಧಾ (UP Yoddha)ಹಾಗೂ ಗುಜರಾತ್ ಜೈಂಟ್ಸ್ ಗಳು ( Gujarat Giants ) 2ನೇ ಪಂದ್ಯದಲ್ಲಿ ಕಾದಾಟ ನಡೆಸಿದ್ದವು. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್ ವಿರುದ್ಧ ದಬಾಂಗ್ ದೆಹಲಿ ಭರ್ಜರಿಯಾಗಿ ಸೇಡು ತೀರಿಸಿಕೊಂಡರೆ, ಗುಜರಾತ್ ಜೈಂಟ್ಸ್ ಹಾಗೂ ಯುಪಿ ಯೋಧಾ ತಂಡಗಳ ನಡುವಿನ ಪಂದ್ಯ ನಿರೀಕ್ಷೆಯಂತೆಯೇ ಟೈ ಫಲಿತಾಂಶ ಕಂಡಿತು.

ಪ್ರೇಕ್ಷಕರಿಲ್ಲದೆ ಬೆಂಗಳೂರಿನಲ್ಲಿ ನಡೆಯುತ್ತಿರುವ 8ನೇ ಆವೃತ್ತಿಯ ಪಿಕೆಎಲ್ ನ ಬುಧವಾರದ ಮೊದಲ ಪಂದ್ಯದಲ್ಲಿ ದಬಾಂಗ್ ದೆಹಲಿ ತಂಡ 52-35 ಅಂಕಗಳಿಂದ  ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್ ವಿರುದ್ಧ ವಿಜಯ ಕಂಡಿತು. ಗುಜರಾತ್ ಜೈಂಟ್ಸ್ ಹಾಗೂ ಯುಪಿ ಯೋಧಾ ತಂಡಗಳ ಮುಖಾಮುಖಿ ತಲಾ 32 ಅಂಕಗಳೊಂದಿಗೆ ಟೈ ಫಲಿತಾಂಶ ಕಂಡಿತು. ಬೆಂಗಾಲ್ ವಾರಿಯರ್ಸ್ ತಂಡಕ್ಕೆ ಲೀಗ್ ನಲ್ಲಿ ಇದು ಸತತ 2ನೇ ಸೋಲು ಎನಿಸಿದೆ.

ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್ ವಿರುದ್ಧ ಮೊದಲ ನಿಮಿಷದಿಂದಲೇ ಜಿದ್ದಿಗೆ ಬಿದ್ದಂತೆ ಹೋರಾಟ ನಡೆಸಿದ ದಬಾಂಗ್ ದೆಹಲಿ ಬರೋಬ್ಬರಿ 17 ಅಂಕಗಳ ಅಂತರದ ಗೆಲುವು ಕಂಡಿತು. ಪಂದ್ಯದಲ್ಲಿ ಒಟ್ಟು 24 ಅಂಕಗಳ ಸಾಧನೆ ಮಾಡಿದ ನವೀನ್ ಕುಮಾರ್ (Naveen Kumar), ಹಾಲಿ ಆವೃತ್ತಿಯಲ್ಲಿ 50  ರೈಡ್ ಪಾಯಿಂಟ್ ಗಳ ಗುರಿ ಮುಟ್ಟಿದರು. ಇವರಿಗೆ ಉತ್ತಮ ಸಾಥ್ ನೀಡಿದ ವಿಜಯ್ ಆಕರ್ಷಕ ಸೂಪರ್ 10 ಸಾಹಸ ಮಾಡಿದರು. ಇನ್ನು ಬೆಂಗಾಲ್ ತಂಡದ ಪರವಾಗಿ ರೈಡರ್ ಗಳಾದ ಮಣಿಂದರ್ ಸಿಂಗ್ ಹಾಗೂ ಕರ್ನಾಟಕ ಸುಖೇಶ್ ಹೆಗ್ಡೆ (Sukesh Hegde) 25 ಅಂಕ ಸಂಪಾದಿಸಿ ಗಮನ ಸೆಳೆದರು. ಬೆಂಗಾಲ್ ತಂಡದ ಡಿಫೆನ್ಸ್ ವಿಭಾಗಕ್ಕಿಂತ ದೆಹಲಿ ತಂಡದ ಡಿಫೆನ್ಸ್ ವಿಭಾಗ ಮಿಂಚಿನ ನಿರ್ವಹಣೆ ತೋರಿದ ಕಾರಣ ಗೆಲುವು ಕಂಡಿತು. ಪಂದ್ಯದಲ್ಲಿ ದಬಾಂಗ್ ದೆಹಲಿ ತಂಡ ಒಟ್ಟು ಎಂಟು ಬಾರಿ ಯಶಸ್ವಿ ಟ್ಯಾಕಲ್ ಗಳನ್ನು ಮಾಡಿದರೆ, ಬೆಂಗಾಲ್ ತಂಡದ ಡಿಫೆನ್ಸ್ ವಿಭಾಗ ಕೇವಲ ನಾಲ್ಕು ಟ್ಯಾಕಲ್ ಗಳನ್ನು ಮಾಡಿದವು. ಯುಪಿ ಯೋಧಾ ಹಾಗೂ ಗುಜರಾತ್ ಜೈಂಟ್ಸ್ ನಡುವಿನ ಥ್ರಿಲ್ಲಿಂಗ್ ಪಂದ್ಯ ಟೈ ನಲ್ಲಿ ಅಂತ್ಯ ಕಂಡಿತು. ಮೊದಲ ಅವಧಿಯ ಆಟದಲ್ಲಿ ಗುಜರಾತ್ ಪಾರಮ್ಯ ಸಾಧಿಸಿದರೆ, 2ನೇ ಅವಧಿಯ ಆಟದಲ್ಲಿ ಯುಪಿ ಯೋಧಾ ವೇಗವಾಗಿ ಅಂಕಗಳನ್ನು ಕಲೆಹಾಕುವ ಮೂಲಕ ತಿರುಗೇಟು ನಿಡಿತು. ಯೋಧಾ ತಂಡದ ಹೆಚ್ಚಿನ ಅಂಕಗಳು 2ನೇ ಅವಧಿಯ ಆಟದಲ್ಲಿ ಬಂದಿದ್ದರಿಂದ ಪಂದ್ಯ 32-32ರಲ್ಲಿ ಕೊನೆಗೊಂಡಿತು.

MR Poovamma-Jithin Paul Marriage ದಾಂಪತ್ಯ ಜೀವನಕ್ಕೆ ಕಾಲಿರಿಸಿದ ರಾಜ್ಯದ ಅಥ್ಲೀಟ್ ಎಂ ಆರ್ ಪೂವಮ್ಮ
ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರು ಗೆಲುವು ಹಾಗೂ 1 ಟೈ ಫಲಿತಾಂಶದೊಂದಿಗೆ ದಬಾಂಗ್ ದೆಹಲಿ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, 4 ಪಂದ್ಯಗಳಿಂದ 2 ಸೋಲು 2 ಗೆಲುವು ಕಂಡಿರುವ ಬೆಂಗಾಲ್ ವಾರಿಯರ್ಸ್ 11 ಅಂಕದೊಂದಿಗೆ 5ನೇ ಸ್ಥಾನದಲ್ಲಿದೆ.  ಇನ್ನೊಂದೆಡೆ ಗುಜರಾತ್ ಜೈಂಟ್ಸ್ ತಂಡ 4 ಪಂದ್ಯಗಳಲ್ಲಿ 1 ಗೆಲುವು1 ಸೋಲು ಹಾಗೂ 2 ಟೈ ಫಲಿತಾಂಶದೊಂದಿಗೆ 12 ಅಂಕ ಸಂಪಾದಿಸಿ 2ನೇ ಸ್ಥಾನದಲ್ಲಿದ್ದರೆ. 2 ಪಂದ್ಯಗಳಲ್ಲಿ 1 ಗೆಲುವು, 2 ಸೋಲು ಹಾಗೂ 1 ಟೈ ಫಲಿತಾಂಶ ಕಂಡಿರುವ ಯುಪಿ ಯೋಧಾ 7ನೇ ಸ್ಥಾನದಲ್ಲಿದೆ.

click me!