ಪ್ಯಾರಿಸ್‌ನಲ್ಲಿ ಭಾರತಕ್ಕೆ ಸಿಕ್ಕಷ್ಟೇ ಪದಕ ಗೆದ್ದ ಚೀನಾದ ಈಜು ತಾರೆ ಝಾಂಗ್‌ ಯುಫೈ!

By Kannadaprabha News  |  First Published Aug 12, 2024, 12:10 PM IST

ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ದೇಶವೊಂದು ಗೆದ್ದಷ್ಟು ಪದಕವನ್ನು ಚೀನಾದ ಒಬ್ಬ ಮಹಿಳಾ ಈಜುಪಟು ತಮ್ಮದಾಗಿಸಿಕೊಂಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ


ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತ 6 ಪದಕ ಗೆದ್ದಿದೆ. ಇಷ್ಟೇ ಸಂಖ್ಯೆಯ ಪದಕ ಚೀನಾದ ಈಜುಪಟು ಝಾಂಗ್‌ ಯುಫೈ ಗೆದ್ದಿದ್ದಾರೆ. ಅವರು 1 ಬೆಳ್ಳಿ, 5 ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 4*100 ಮಿಶ್ರ ಮೆಡ್ಲೆ ರಿಲೇ ಸ್ಪರ್ಧೆಯಲ್ಲಿ ಬೆಳ್ಳಿ, 100 ಮೀ. ಬಟರ್‌ಫ್ಲೈ, 200 ಮೀ. ಬಟರ್‌ಫ್ಲೈ, 50 ಮೀ. ಫ್ರೀಸ್ಟೈಲ್‌, ಮಹಿಳೆಯರ 4*100 ಮೀ. ಫ್ರೀಸ್ಟೈಲ್‌ ರಿಲೇ ತಂಡ, ಮಹಿಳೆಯರ 4*100 ಮೀ. ಮೆಡ್ಲೆ ರಿಲೇ ತಂಡ ವಿಭಾಗದಲ್ಲಿ ಝಾಂಗ್‌ ಕಂಚಿನ ಪದಕಗಳನ್ನು ಜಯಿಸಿದ್ದಾರೆ. 

ಇನ್ನು, ಫ್ರಾನ್ಸ್‌ನ ಈಜುಪಟು ಲಿಯಾನ್ ಮಾರ್ಚಂಡ್‌ 5 ಚಿನ್ನ, 1 ಕಂಚು, ಅಮೆರಿಕದ ಈಜುಪಟು ಲಾರಿ ಹಸ್ಕಿ 3 ಚಿನ್ನ, 2 ಬೆಳ್ಳಿ, ಆಸ್ಟ್ರೇಲಿಯಾದ ಈಜುಪಟು ಓ‘ಕ್ಯಾಲಾಗನ್‌ 3 ಚಿನ್ನ, 1 ಬೆಳ್ಳಿ ಹಾಗೂ 1 ಕಂಚು, ಅಮೆರಿಕದ ರೀಗನ್‌ ಸ್ಮಿತ್‌ 2 ಚಿನ್ನ, 3 ಬೆಳ್ಳಿ, ಆಸ್ಟ್ರೇಲಿಯಾದ ಮೆಕ್‌ಕೀವೊನ್‌ 2 ಚಿನ್ನ, 2 ಕಂಚು ಹಾಗೂ 1 ಬೆಳ್ಳಿ ಜಯಿಸಿದ್ದಾರೆ.

Tap to resize

Latest Videos

undefined

ಪದಕ ಪಟ್ಟಿಯಲ್ಲಿ ಭಾರತ ನಂ.71: 24 ವರ್ಷಗಳಲ್ಲೇ ಕಳಪೆ

ಪ್ಯಾರಿಸ್ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತ ಈ ಬಾರಿ ಕೇವಲ 6 ಪದಕ ಗೆದ್ದಿದ್ದು, ಪದಕ ಪಟ್ಟಿಯಲ್ಲಿ 71ನೇ ಸ್ಥಾನ ಪಡೆದುಕೊಂಡಿದೆ. ಇದು ಕಳೆದ 24 ವರ್ಷಗಳಲ್ಲೇ ಕಳಪೆ ಸಾಧನೆ. 1996 ಹಾಗೂ 2000ನೇ ಇಸವಿಯಲ್ಲಿ 71ನೇ ಸ್ಥಾನಿಯಾಗಿದ್ದ ಭಾರತ, 2004ರಲ್ಲಿ 65ನೇ, 2008ರಲ್ಲಿ 50ನೇ ಹಾಗೂ 2012ರಲ್ಲಿ 55ನೇ ಸ್ಥಾನ ಪಡೆದಿತ್ತು. ಇನ್ನು 2016ರಲ್ಲಿ 67ನೇ ಹಾಗೂ ಮತ್ತು 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ 48ನೇ ಸ್ಥಾನ ಪಡೆದಿತ್ತು.

40 ಚಿನ್ನ, ಒಟ್ಟು 126 ಮೆಡಲ್: ಪಟ್ಟಿಯಲ್ಲಿ ಅಮೆರಿಕ ನಂಬರ್ ಒನ್‌..! 40 ಚಿನ್ನ ಗೆದ್ದರೂ ಚೀನಾ ನಂ.2..!

10000 ಮೀ.ನಲ್ಲಿ ಪದಕ ಗೆದ್ದ 37 ಗಂಟೆ ಬಳಿಕ ಮ್ಯಾರಥಾನ್‌ ಚಿನ್ನ ಗೆದ್ದ ಡಚ್‌ನ ಸಿಫಾನ್‌!

ಪ್ಯಾರಿಸ್‌: ನೆದರ್‌ಲೆಂಡ್ಸ್‌ನ ಸಿಫಾನ್‌ ಹಸ್ಸಾನ್‌ ಪ್ಯಾರಿಸ್‌ ಗೇಮ್ಸ್‌ನ ಮಹಿಳೆಯರ ಮ್ಯಾರಥಾನ್‌ ಓಟದಲ್ಲಿ ಒಲಿಂಪಿಕ್ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಿದ್ದಾರೆ. ಭಾನುವಾರ ನಡೆದ ಸ್ಪರ್ಧೆಯಲ್ಲಿ 2 ಗಂಟೆ 22 ನಿಮಿಷ 55 ಸೆಕೆಂಡ್‌ಗಳಲ್ಲಿ ಓಟ ಪೂರ್ತಿಗೊಳಿಸಿ, 2012ರಲ್ಲಿ ಇಥಿಯೋಪಿಯಾದ ಟಿಕಿ ಗೆಲಾನಾ (2 ಗಂಟೆ 23.07 ನಿಮಿಷ) ಬರೆದಿದ್ದ ದಾಖಲೆಯನ್ನು ಮುರಿದರು. ಸಿಫಾನ್‌ಗೆ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಇದು 3ನೇ ಪದಕ.

ಮ್ಯಾರಥಾನ್‌ಗೂ ಮುನ್ನ ಕೇವಲ 37 ಗಂಟೆಗಳ ಹಿಂದೆ 10,000 ಮೀ. ಓಟದಲ್ಲಿ ಕಂಚು ಗೆದ್ದಿದ್ದ ಸಿಫಾನ್‌, 5,000 ಮೀ. ಓಟದಲ್ಲೂ ಕಂಚಿಗೆ ಮುತ್ತಿಕ್ಕಿದರು. 2020ರ ಟೋಕಿಯೋ ಗೇಮ್ಸ್‌ನ 5000 ಮೀ, 10,000 ಮೀ.ನಲ್ಲಿ ಚಿನ್ನ ಗೆದ್ದಿದ್ದ ಸಿಫಾನ್‌, 1,500 ಮೀ. ಓಟದಲ್ಲಿ ಕಂಚು ಪಡೆದಿದ್ದರು.

ಒಲವಿನ ನಗರಿ ಪ್ಯಾರಿಸ್‌ನ 17 ದಿನಗಳ ಕ್ರೀಡಾ ಕುಂಭಮೇಳಕ್ಕೆ ತೆರೆ: ಆರಂಭದಿಂದ ಕೊನೆವರೆಗೂ ವಿವಾದಗಳದ್ದೇ ಕಾರುಬಾರು..!

ಆ.28ರಿಂದ ಪ್ಯಾರಿಸ್‌ನಲ್ಲಿ ಪ್ಯಾರಾಲಿಂಪಿಕ್ಸ್‌ ಶುರು

ಒಲಿಂಪಿಕ್ಸ್‌ ಕೊನೆಗೊಂಡ ಬಳಿಕ ಪ್ಯಾರಾ ಅಥ್ಲೀಟ್‌ಗಳಿಗಾಗಿ ಪ್ಯಾರಾಲಿಂಪಿಕ್ಸ್‌ ನಡೆಯುತ್ತದೆ. ಈ ಬಾರಿ ಪ್ಯಾರಾಲಿಂಪಿಕ್ಸ್‌ ಪ್ಯಾರಿಸ್‌ನಲ್ಲಿ ಆ.28ರಿಂದ ಆರಂಭಗೊಳ್ಳಲಿದೆ. ಸೆ.8ರಂದು ಮುಕ್ತಾಯಗೊಳ್ಳಲಿದೆ. ಭಾರತ ಸೇರಿದಂತೆ 150ಕ್ಕೂ ಹೆಚ್ಚು ದೇಶಗಳ 4,400ಕ್ಕೂ ಅಧಿಕ ಅಥ್ಲೀಟ್‌ಗಳು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.
 

click me!