* ಸಂಕಷ್ಟದಲ್ಲಿದ್ದ ಮಹಿಳಾ ಕಬಡ್ಡಿ ಅಟಗಾರ್ತಿಯ ನೆರವಿಗೆ ಬಂದ ಕೇಂದ್ರ ಸರ್ಕಾರ
* 2 ಬಾರಿ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ, ಕರ್ನಾಟಕದ ತೇಜಸ್ವಿನಿ ಬಾಯಿ ಅವರಿಗೆ ಕೇಂದ್ರ ಸರ್ಕಾರ 2 ಲಕ್ಷ ರುಪಾಯಿ
* ಕೆಲವೇ ದಿನಗಳ ಹಿಂದಷ್ಟೇ ತೇಜಸ್ವಿನಿ ಕೋವಿಡ್‌ನಿಂದ ತಮ್ಮ ಪತಿಯನ್ನು ಕಳೆದುಕೊಂಡಿದ್ದರು,
ನವದೆಹಲಿ(ಮೇ.22): ಭಾರತ ಕಬಡ್ಡಿ ತಂಡದ ಮಾಜಿ ನಾಯಕಿ, 2 ಬಾರಿ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ, ಕರ್ನಾಟಕದ ತೇಜಸ್ವಿನಿ ಬಾಯಿ ಅವರಿಗೆ ಕೇಂದ್ರ ಸರ್ಕಾರ 2 ಲಕ್ಷ ರುಪಾಯಿ ನೆರವು ನೀಡಿದೆ. ಇತ್ತೀಚೆಗಷ್ಟೇ ತೇಜಸ್ವಿನಿ ಕೊರೋನಾದಿಂದಾಗಿ ತಮ್ಮ ಪತಿಯನ್ನು ಕಳೆದುಕೊಂಡಿದ್ದರು.
ಮಾಜಿ ಅಥ್ಲೀಟ್‌ಗಳು ಹಾಗೂ ಕೋಚ್‌ಗಳಿಗೆ ಕೊರೋನಾ ಸಂಕಷ್ಟದಲ್ಲಿ ನೆರವಾಗಲು ಭಾರತೀಯ ಒಲಿಂಪಿಕ್ ಸಂಸ್ಥೆ ಹಾಗೂ ಕ್ರೀಡಾ ಸಚಿವಾಲಯ ಜಂಟಿಯಾಗಿ ಯೋಜನೆಯೊಂದನ್ನು ಆರಂಭಿಸಿದ್ದು, ಇದರ ಅಡಿಯಲ್ಲಿ ತೇಜಸ್ವಿನಿಗೆ ನೆರವು ನೀಡಲಾಗಿದೆ.
undefined
ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗೆ ಆನ್‌ಲೈನ್‌ನಿಂದಲೇ ಅರ್ಜಿ ಆಹ್ವಾನ
ತೇಜಸ್ವಿನಿ ಹಾಗೂ ಅವರ ಪತಿ ನವೀನ್‌ಗೆ ಮೇ 1ರಂದು ಕೊರೋನಾ ಸೋಂಕು ತಗುಲಿತ್ತು. ನವೀನ್ ಮೇ 11ರಂದು ನಿಧನ ಹೊಂದಿದ್ದರು. ‘ಅವರಿಗೆ ಕೇವಲ 30 ವರ್ಷ. ತಂದೆ ನಿಧನದ ಬಳಿಕ ಬಹಳ ಆತಂಕಗೊಂಡಿದ್ದರು. ಭಯ ಹಾಗೂ ಒತ್ತಡ ಅವರನ್ನು ಬಲಿ ಪಡೆಯಿತು’ ಎಂದಿರುವ ತೇಜಸ್ವಿನಿ, ‘ಕ್ರೀಡಾ ಸಚಿವಾಲಯದಿಂದ ನೆರವನ್ನು ನಿರೀಕ್ಷಿಸಿರಲಿಲ್ಲ. ಸಾಯ್ ಹಾಗೂ ಐಒಎ ಪ್ರಾಮಾಣಿಕವಾಗಿ ನಿರ್ಧಾರ ಕೈಗೊಂಡಿದೆ’ ಎಂದಿದ್ದಾರೆ.
ಕರ್ನಾಟಕದ ತೇಜಸ್ವಿನಿಗೆ 2011ರಲ್ಲಿ ಅರ್ಜುನ ಪ್ರಶಸ್ತಿ ನೀಡಿ ಕೇಂದ್ರ ಸರ್ಕಾರ ಗೌರವಿಸಿತ್ತು. 2010, 2014ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಭಾರತ ತಂಡದ ಸದಸ್ಯೆಯಾಗಿದ್ದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona