Big Breaking: ವಿನೇಶ್ ಫೋಗಟ್‌ಗೆ ಬೆಳ್ಳಿ ಪದಕ ಗೆಲ್ಲುವ ಕನಸು ಇನ್ನೂ ಕೊಂಚ ತಡ..! ಇಲ್ಲಿದೆ ಹೊಸ ಅಪ್‌ಡೇಟ್

By Naveen Kodase  |  First Published Aug 10, 2024, 9:47 PM IST

ವಿನೇಶ್ ಫೋಗಟ್ ಅವರ ಅನರ್ಹತೆ ಪ್ರಕರಣದ ಕುರಿತಂತೆ ಕ್ರೀಡಾ ನ್ಯಾಯ ಮಂಡಳಿ ಇದೀಗ ಮಹತ್ವದ ಅಪ್‌ಡೇಟ್ ನೀಡಿದ್ದು, ವಿನೇಶ್ ಕಾಯುವಿಕೆ ಮುಂದುವರೆದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ


ಪ್ಯಾರಿಸ್‌: ಭಾರತದ ತಾರಾ ಕುಸ್ತಿಪಟು ವಿನೇಶ್ ಫೋಗಟ್ ಅವರ ಒಲಿಂಪಿಕ್ಸ್ ಪದಕ ಗೆಲ್ಲುವ ಕನಸು ಇನ್ನೂ ಮೂರು ದಿನ ಮುಂದೂಡಲ್ಪಟ್ಟಿದೆ. ಈ ಮೊದಲು ಇಂದು ಭಾರತೀಯ ಕಾಲಮಾನ ರಾತ್ರಿ 9.30 ಕ್ಕೆ ತೀರ್ಮಾನ ನೀಡಲಾಗುವುದು ಎಂದು ವರದಿಯಾಗಿತ್ತು. ವಾದ-ಪ್ರತಿವಾದ ಆಲಿಸಿದ್ದ ನ್ಯಾಯಪೀಠ ಇದೀಗ ಇನ್ನೊಂದು ದಿನ ಅಂದರೆ ಆಗಸ್ಟ್‌ 13ರಂದು ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ಘೋಷಿಸಿದೆ. ನ್ಯಾಯಮೂರ್ತಿ ಡಾ. ಅನಾಬೆಲ್ ಬೆನೆಟ್ ಈ ಮಹತ್ವದ ಘೋಷಣೆ ಮಾಡಿದೆ. ಇಂದು ಬೆಳ್ಳಿ ಪದಕ ಮುಡಿಗೇರಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದ ಫೋಗಟ್, ಅವರ ಕಾಯುವಿಕೆ ಇನ್ನೂ ಮೂರು ದಿನ ಮುಂದೂಡಲ್ಪಟ್ಟಿದೆ.

ಪ್ಯಾರಿಸ್ ಒಲಿಂಪಿಕ್ಸ್‌ ಕ್ರೀಡಾಕೂಟದ ಮಹಿಳೆಯರ 50 ಕೆ.ಜಿ ವಿಭಾಗದ ಪ್ರಿಸ್ಟೈಲ್ ಕುಸ್ತಿ ಪಂದ್ಯದಲ್ಲಿ ವಿನೇಶ್ ಫೋಗಟ್ ಫೈನಲ್ ಪ್ರವೇಶಿಸಿದ್ದರು. ಆದರೆ ಫೈನಲ್ ಪಂದ್ಯಕ್ಕೂ ಮುನ್ನ 100 ಗ್ರಾಮ್ ಹೆಚ್ಚು ತೂಕ ಹೊಂದಿದ್ದರಿಂದ ವಿಶ್ವ ಕುಸ್ತಿ ಸಂಸ್ಥೆ, ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಿತ್ತು.

The ad hoc division of CAS has extended time till 6:00 p.m. on August 11, 2024, for the Sole Arbitrator Hon. Dr Annabelle Bennett in the Vinesh Phogat vs. United World Wrestling & the International Olympic Committee to issue a decision. The reasoned order will be issued at a…

— ANI (@ANI)

Tap to resize

Latest Videos

undefined

ಇನ್ನು ತಮ್ಮನ್ನು ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ವಿನೇಶ್ ಫೋಗಟ್, ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾಲಯದ ಹಂಗಾಮಿ ಪೀಠದ ಮೆಟ್ಟಿಲೇರಿದ್ದರು. ಶುಕ್ರವಾರ ಈ ಸಂಬಂಧ ಕ್ರೀಡಾ ನ್ಯಾಯ ಮಂಡಳಿ ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಡಾ. ಅನಾಬೆಲ್ ಬೆನೆಟ್ ಇದೀಗ ಮತ್ತೆ ಹೆಚ್ಚುವರಿ ಸಾಕ್ಷ್ಯಾಧಾರ ಒದಗಿಸಲು ಇನ್ನೂ ಒಂದು ದಿನ  ಕಾಲಾವಕಾಶ ನೀಡಿದೆ.

ಭಾನುವಾರ ಭಾರತೀಯ ಕಾಲಮಾನ ರಾತ್ರಿ 9.30ರ ವರೆಗೆ ಹೆಚ್ಚುವರಿ ಸಾಕ್ಷ್ಯಾಧಾರ ಒದಗಿಸಲು ಅವಕಾಶ ಕಲ್ಪಿಸಲಾಗಿದ್ದು, ಆಗಸ್ಟ್ 13ರಂದು ವಿನೇಶ್ ಫೋಗಟ್ ಅನರ್ಹ ಸಂಬಂಧ ಅಂತಿಮ ತೀರ್ಮಾನ ಪ್ರಕಟವಾಗಲಿದೆ. .

ವಿನೇಶ್ ಪೋಗಟ್ ಕ್ರೀಡಾ ನ್ಯಾಯ ಮಂಡಳಿಯಲ್ಲಿ ತಮ್ಮನ್ನು ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು. ಅದರಲ್ಲಿ ಫೈನಲ್‌ನಲ್ಲಿ ಯಾರೇ ಬೆಳ್ಳಿ ಪದಕ ವಿಜೇತರಾದರೂ ಅವರ ಜೊತೆಗೆ ತಮ್ಮನ್ನೂ ಜಂಟಿ ಬೆಳ್ಳಿ ಪದಕ ವಿಜೇತರೆಂದು ಘೋಷಿಸಬೇಕು ಎಂದು ಮನವಿ ಮಾಡಿದ್ದರು. ಈ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ್ದ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾ ಲಯ (ಕ್ರೀಡೆ) ವಾದ- ಪ್ರತಿವಾದ ಆಲಿಸಿತ್ತು. ವಿನೇಶ್ ಪೋಗಟ್ ಪರವಾಗಿ ಹಿರಿಯ ವಕೀಲ ಹರೀಶ್ ಸಾಳ್ವೆ ವಾದ ಮಂಡಿಸಿದ್ದರು. 

click me!