ಕ್ಯಾಂಡಿಡೇಟ್ಸ್ ಚೆಸ್: ವಿದಿತ್, ಗುಕೇಶ್‌ಗೆ 2ನೇ ಸುತ್ತಲ್ಲಿ ಜಯ

By Kannadaprabha NewsFirst Published Apr 7, 2024, 9:19 AM IST
Highlights

ಇದೇ ವೇಳೆ ಮಹಿಳಾ ವಿಭಾಗದಲ್ಲಿ ಪ್ರಜ್ಞಾನಂದರ ಸಹೋದರಿ, ಆರ್.ವೈಶಾಲಿ ಅವರು ಚೀನಾದ ಟಾನ್ ಝಂಗ್ ವಿರುದ್ಧ ಸೋಲುಂಡರು. ಕೊನೆರು ಹಂಪಿ ರಷ್ಯಾದ ಕ್ಯಾಟೆರಿನಾ ಲಾ ವಿರುದ್ಧ ಡ್ರಾಗೆ ತೃಪ್ತಿಪಟ್ಟುಕೊಂಡರು. 3ನೇ ಸುತ್ತಿನಲ್ಲಿ ವಿದಿತ್‌ಗೆ ಪ್ರಜ್ಞಾನಂದ ಸವಾಲು ಎದುರಾಗಲಿದ್ದು, ಗುಕೇಶ್ ಅವರು ರಷ್ಯಾದ ಇಯಾನ್ ನೆಪೋಮಿಯಾಚ್ಚಿ ವಿರುದ್ಧ ಸೆಣಸಲಿದ್ದಾರೆ.

ಟೊರೊಂಟೊ(ಕೆನಡಾ): ಭಾರತದ ತಾರಾ ಚೆಸ್ ಪಟುಗಳಾದ ವಿದಿತ್ ಗುಜರಾತಿ ಹಾಗೂ ಡಿ.ಗುಕೇಶ್ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯಲ್ಲಿ ಮೊದಲ ಗೆಲುವು ಸಾಧಿಸಿದ್ದಾರೆ. ಪ್ರಜ್ಞಾನಂದ, ಆರ್.ವೈಶಾಲಿ ಸೋಲನುಭವಿಸಿದ್ದಾರೆ.ಆದರೆ ಶುಕ್ರವಾರ ಮಧ್ಯರಾತ್ರಿ ನಡೆದ ಮುಕ್ತ ವಿಭಾಗದ 2ನೇ ಸುತ್ತಿನಲ್ಲಿ 18ರ ಪ್ರಜ್ಞಾನಂದ ವಿರುದ್ಧ ಗುಕೇಶ್ ಜಯಭೇರಿ ಬಾರಿಸಿದರು. ವಿದಿತ್ ಅವರು ವಿಶ್ವ ನಂ.3, ಅಮೆರಿಕದ ಹಿಕರು ನಕಮುರಾ ಅವರನ್ನು ಸೋಲಿಸಿದರು.

ಇದೇ ವೇಳೆ ಮಹಿಳಾ ವಿಭಾಗದಲ್ಲಿ ಪ್ರಜ್ಞಾನಂದರ ಸಹೋದರಿ, ಆರ್.ವೈಶಾಲಿ ಅವರು ಚೀನಾದ ಟಾನ್ ಝಂಗ್ ವಿರುದ್ಧ ಸೋಲುಂಡರು. ಕೊನೆರು ಹಂಪಿ ರಷ್ಯಾದ ಕ್ಯಾಟೆರಿನಾ ಲಾ ವಿರುದ್ಧ ಡ್ರಾಗೆ ತೃಪ್ತಿಪಟ್ಟುಕೊಂಡರು. 3ನೇ ಸುತ್ತಿನಲ್ಲಿ ವಿದಿತ್‌ಗೆ ಪ್ರಜ್ಞಾನಂದ ಸವಾಲು ಎದುರಾಗಲಿದ್ದು, ಗುಕೇಶ್ ಅವರು ರಷ್ಯಾದ ಇಯಾನ್ ನೆಪೋಮಿಯಾಚ್ಚಿ ವಿರುದ್ಧ ಸೆಣಸಲಿದ್ದಾರೆ.

ಕೊಹ್ಲಿ ಸೆಂಚುರಿ ಬಾರಿಸಿದ್ರೂ ಗೆಲ್ಲಲಿಲ್ಲ ಆರ್‌ಸಿಬಿ...! ರಾಯಲ್ಸ್‌ಗೆ 4ನೇ ಜಯ, ಬೆಂಗಳೂರಿಗೆ 4ನೇ ಸೋಲು

ಕೊಡವ ಹಾಕಿ: 17 ತಂಡಗಳಿಗೆ ಗೆಲುವು

ನಾಪೋಕ್ಲು: ಕೊಡವ ಕುಟುಂಬಗಳ ನಡುವಿನ ಹಾಕಿ ಟೂರ್ನಿಯಲ್ಲಿ ಶನಿವಾರ ಕೋಡಿರ ಕುಪ್ಪಂಡ, ಕುಮ್ಮಂಡ, ಚೋಯಮಾಡಂಡ,ಮಲ್ಲಂಗಡ, ಕಾಣತಂಡ, ಅನ್ನಾಡಿಯಂಡ ಸೇರಿ 17 ತಂಡಗಳು ಗೆಲುವು ಸಾಧಿಸಿದವು. 

ಚೆಟ್ರು ಮಾಡತಂಡದ ವಿರುದ್ದ ಕೋಡಿರ ತಂಡ, ಕುಮ್ಮಂಡ ತಂಡವು ನುಚ್ಚುಮಣಿಯಂಡ ತಂಡದ ವಿರುದ್ಧ ಜಯಸಾಧಿಸಿತು. ಕನ್ನಂಬಿರ ವಿರುದ್ಧ ಚೋಯಮಾಡಂಡ ಗೆದ್ದರೆ, ಐಚಂಡ ತಂಡವು ಟೈ ಬ್ರೇಕರ್‌ನಲ್ಲಿ ಭಯವಂಡ ತಂಡದ ವಿರುದ್ಧ ಗೆಲುವು ಸಾಧಿಸಿತು.

ಧೋನಿ, ಕೊಹ್ಲಿ ಹೇರ್‌ಕಟ್‌ ಗೆ ಇಷ್ಟು ರೇಟಾ? ಆಲಿಮ್ ಹಕೀಂ ಹೇಳ್ತಾರೆ ಕೇಳಿ

ಹಾಕಿ: ಆಸೀಸ್ ವಿರುದ್ಧ ಭಾರತಕ್ಕೆ 1-5 ಸೋಲು

ಪರ್ಥ್: ಆಸ್ಟ್ರೇಲಿಯಾ ವಿರುದ್ಧ ಹಾಕಿ ಸರಣಿಯನ್ನು ಭಾರತ ಪುರುಷರ ತಂಡ ಸೋಲಿನೊಂದಿಗೆ ಆರಂಭಿಸಿದೆ. ಪ್ಯಾರಿಸ್ ಒಲಿಂಪಿಕ್ಸ್‌ ಸಿದ್ಧತೆಗಾಗಿ ಆರಂಭಗೊಂಡ ಸರಣಿಯ ಮೊದಲ ಪಂದ್ಯದಲ್ಲಿ ಶನಿವಾರ ಪ್ರವಾಸಿ ತಂಡಕ್ಕೆ 1 -5 ಗೋಲುಗಳ ಹೀನಾಯ ಸೋಲು ಎದುರಾಯಿತು. ಪಂದ್ಯದುದ್ದಕ್ಕೂ ಭಾರತದ ಮೇಲೆ ಸವಾರಿ ಮಾಡಿದ ಆಸೀಸ್, ಸತತ ಗೋಲುಗಳ ಮೂಲಕ ಒತ್ತಡ ಹೇರಿತು. ಭಾರತದ ಪರ ಗುರ್ಜಂತ್ ಸಿಂಗ್ 47ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರೂ ಅದಾಗಲೇ ಭಾರತದ ಸೋಲು ಖಚಿತವಾಗಿತ್ತು.

ಬ್ಯಾಡ್ಮಿಂಟನ್: ಭಾರತದ ತರುಣ್, ಅನುಪಮಾಗೆ ಪ್ರಶಸ್ತಿ

ಅಸ್ತಾನ(ಕಜಕಸ್ತಾನ): ಕಜಕಸ್ತಾನ ಇಂಟರ್‌ನ್ಯಾಷನಲ್ ಚಾಲೆಂಜ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಯುವ ಶಟ್ಲರ್‌ಗಳಾದ ಅನುಪಮಾ, ತರುಣ್ ಚಾಂಪಿಯನ್ ఆగి ಶನಿವಾರಹೊರಹೊಮ್ಮಿದ್ದಾರೆ. 

ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ತರುಣ್ ಮಲೇಷ್ಯಾದ ಸೂಂಗ್ ಜೂ ವೆನ್ ವಿರುದ್ಧ ಜಯಗಳಿಸಿದರು, 19ರ ಅನುಪಮಾ ಪ್ರಶಸ್ತಿ ಸುತ್ತಿನಲ್ಲಿ ಭಾರತ ದವರೇ ಆದ ಇಶಾರಾಣಿ ವಿರುದ್ಧಗೆದ್ದು ಪ್ರಶಸ್ತಿ ತಮ್ಮದಾಗಿಸಿಕೊಂಡರು.

click me!