ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೀರಾಬಾಯಿ ಚಾನು

By Kannadaprabha News  |  First Published Apr 2, 2024, 12:25 PM IST

ಇಲ್ಲಿ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಸೋಮವಾರ ಮಹಿಳೆಯರ 49 ಕೆ.ಜಿ. ವಿಭಾಗದ ‘ಬಿ’ ಗುಂಪಿನಲ್ಲಿ ಚಾನು 3ನೇ ಸ್ಥಾನ ಪಡೆದರು. ಸ್ನ್ಯಾಚ್‌ನಲ್ಲಿ 81 ಕೆ.ಜಿ., ಕ್ಲೀನ್‌ ಅಂಡ್‌ ಜರ್ಕ್‌ನಲ್ಲಿ 103 ಕೆ.ಜಿ. ಸೇರಿ ಒಟ್ಟು 184 ಕೆ.ಜಿ. ಭಾರ ಎತ್ತಿದರು.


ಫುಕೆಟ್‌ (ಥಾಯ್ಲೆಂಡ್‌): ಭಾರತದ ತಾರಾ ವೇಟ್‌ಲಿಫ್ಟರ್‌ ಮೀರಾಬಾಯಿ ಚಾನು 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಇಲ್ಲಿ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಸೋಮವಾರ ಮಹಿಳೆಯರ 49 ಕೆ.ಜಿ. ವಿಭಾಗದ ‘ಬಿ’ ಗುಂಪಿನಲ್ಲಿ ಚಾನು 3ನೇ ಸ್ಥಾನ ಪಡೆದರು. ಸ್ನ್ಯಾಚ್‌ನಲ್ಲಿ 81 ಕೆ.ಜಿ., ಕ್ಲೀನ್‌ ಅಂಡ್‌ ಜರ್ಕ್‌ನಲ್ಲಿ 103 ಕೆ.ಜಿ. ಸೇರಿ ಒಟ್ಟು 184 ಕೆ.ಜಿ. ಭಾರ ಎತ್ತಿದರು. ಒಲಿಂಪಿಕ್ಸ್‌ ಅರ್ಹತೆಗೆ ಚಾನು ಈ ವಿಶ್ವಕಪ್‌ನಲ್ಲಿ ಸ್ಪರ್ಧಿಸಿದರೆ ಸಾಕಾಗಿತ್ತು.

ಜೀವನಶ್ರೇಷ್ಠ 95ನೇ ಸ್ಥಾನಕ್ಕೇರಿದ ನಗಾಲ್‌

Latest Videos

undefined

ಲಂಡನ್‌: ಭಾರತದ ತಾರಾ ಟೆನಿಸಿಗ ಸುಮಿತ್‌ ನಗಾಲ್‌ ಎಟಿಪಿ ಟೆನಿಸ್‌ ವಿಶ್ವ ರ್‍ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ 95ನೇ ಸ್ಥಾನಕ್ಕೇರಿದ್ದಾರೆ. ಜನವರಿಯಲ್ಲಿ ಆಸ್ಟ್ರೇಲಿಯನ್ ಓಪನ್‌ ಗ್ರ್ಯಾನ್‌ಸ್ಲಾಂ ಟೂರ್ನಿ ಪ್ರಧಾನ ಸುತ್ತಿಗೇರಿ ಗಮನ ಸೆಳೆದಿದ್ದ ನಗಾಲ್‌, ಫೆಬ್ರವರಿಯಲ್ಲಿ ಅಗ್ರ-100ರೊಗಳಗೆ ಸ್ಥಾನ ಗಿಟ್ಟಿಸಿಕೊಂಡಿದ್ದರು. ಇತ್ತೀಚೆಗಷ್ಟೇ ಅವರು 97ನೇ ಸ್ಥಾನ ಪಡೆದಿದ್ದರು. ಮಂಗಳವಾರ ಪ್ರಕಟಗೊಂಡ ರ್‍ಯಾಂಕಿಂಗ್‌ ಪಟ್ಟಿಯಲ್ಲಿ 2 ಸ್ಥಾನ ಪ್ರಗತಿ ಸಾಧಿಸಿದ್ದಾರೆ.

IPL ಮೆಗಾ ಹರಾಜಿಗೂ ಮುನ್ನ 8 ಆಟಗಾರರನ್ನು ಉಳಿಸಿಕೊಳ್ಳಲು ಕೆಲ ಫ್ರಾಂಚೈಸಿ ಡಿಮ್ಯಾಂಡ್..!

ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿ: ನಾಳಿಯಂಡ, ಬಾದುಮಂಡಕ್ಕೆ ಜಯ

- ದುಗ್ಗಳ ಸದಾನಂದ, ಕನ್ನಡಪ್ರಭ

ನಾಪೋಕ್ಲು: ಕೊಡವ ಕುಟುಂಬಗಳ ನಡುವಿನ ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿಯ ಸೋಮವಾರದ ಪಂದ್ಯಗಳಲ್ಲಿ ನಾಳಿಯಂಡ, ಬಾದುಮಂಡ, ಕೋಣಿಯಂಡ, ಕೋಲು ಮಾದಂಡ, ಐಚುಡ, ಪಾಲಂಗಡ ಸೇರಿದಂತೆ ವಿವಿಧ ತಂಡಗಳು ಮುನ್ನಡೆ ಸಾಧಿಸಿದವು.

ಮೈದಾನ ಒಂದರಲ್ಲಿ ಪೂಲಂಡ ತಂಡದ ವಿರುದ್ಧ ನಾಳಿಯಂಡ ತಂಡ ಭರ್ಜರಿ ಗೆಲವು ಸಾಧಿಸಿತು. ನಾಳಿಯಂಡ ತಂಡ 5- 0 ಅಂತರದಿಂದ ಗೆಲವು ಸಾಧಿಸಿದರೆ ಬಾದುಮಂಡ ತಂಡವು ಚನ್ನಪಂಡ ತಂಡದ ವಿರುದ್ಧ 4-0 ಅಂತರದ ಜಯ ಗಳಿಸಿತು.

ಹಾರ್ದಿಕ್‌ ಪಾಂಡ್ಯರನ್ನು ಕಿಚಾಯಿಸಿದ ಫ್ಯಾನ್ಸ್‌ಗೆ ಸಂಜಯ್‌ ಮಂಜ್ರೇಕರ್ ಕಿವಿಮಾತು..!

ಕೋಣಿಯಂಡ ತಂಡವು ಮಂಡಿರ ತಂಡದ ವಿರುದ್ಧ 1-0 ಅಂತರದ ಗೆಲವು ಸಾಧಿಸಿದರೆ ಕೋಲು ಮಾಡಂಡ ತಂಡವು ಅಕ್ಕಪಂಡ ತಂಡದ ವಿರುದ್ಧ 1-0 ಅಂತರದ ಗೆಲವು ಸಾಧಿಸಿತು. ಕೋಲು ಮಾದಂಡ ತಂಡದ ಆಟಗಾರ ನಾಚಪ್ಪ ಒಂದು ಗೋಲು ಗಳಿಸಿದರು.

ಮೈದಾನ ಎರಡರಲ್ಲಿ ನಡೆದ ಮೊದಲ ಪಂದ್ಯದಲ್ಲಿ ಐಚುಡ ತಂಡ ಮುಕ್ಕಾಟಿರ (ಬೇತ್ರಿ) ತಂಡದ ವಿರುದ್ಧ 4-1 ಅಂತರದ ಗೆಲವು ಸಾಧಿಸಿತು. ಗಂಡಂಗಡ ಮತ್ತು ಮಚ್ಚುರ ತಂಡಗಳ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ಸಮಬಲ ಸಾಧಿಸಿದವು.

ಪೆನಾಲ್ಟಿ ಶೂಟೌಟ್ ನಲ್ಲಿ ಮಚ್ಚುರ ತಂಡ 3 ಗೋಲು ಗಳಿಸಿದರೆ ಗಂಡಂಗಡ ತಂಡ 4 ಗೋಲು ಗಳಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿತು. ಪಾಲೇಕಡ ತಂಡ ಮೇದುರ ತಂಡದ ವಿರುದ್ಧ 1-0 ಅಂತರದ ಜಯ ಸಾಧಿಸಿದರೆ ಮೂಕಚಂಡ ತೆನ್ನಿರ ವಿರುದ್ಧ 3- 0 ಅಂತರದಿಂದ ಜಯ ಗಳಿಸಿತು.

ಪಾಕ್ ತಂಡಕ್ಕೆ ಮತ್ತೆ ಬಾಬರ್ ಅಜಂ ನಾಯಕ: ಕೇವಲ ಒಂದು ಸರಣಿ ಸೋಲಿನ ಬೆನ್ನಲ್ಲೇ ಕ್ಯಾಪ್ಟನ್ಸಿ ಕಳೆದುಕೊಂಡ ಅಫ್ರಿದಿ

ಮೈದಾನ ಮೂರರಲ್ಲಿ ತಾಪಂಡ ಮತ್ತು ಚೋಕಿರ ತಂಡಗಳು ಸಮಬಲ ಸಾಧಿಸಿದವು. ಪೆನಾಲ್ಟಿ ಸ್ಟ್ರೋಕ್ ನಲ್ಲಿ ಚೋಕಿರ 3 ಗೋಲು ಗಳಿಸಿದರೆ, ತಾಪಂಡ ಎರಡು ಗೋಲು ಗಳಿಸಿತು. ಚೋಕಿರ ಮುಂದಿನ ಸುತ್ತು ಪ್ರವೇಶಿಸಿತು. ಮಾದೆಯಂಡ ವಿರುದ್ಧ ಕಾಳಿ ಮಾಡಬೊಟ್ಟಂಗಡ ತಂಡವು ಎರಡು ಗೋಲುಗಳಿಂದ ಗೆಲವು ಸಾಧಿಸಿತು. 3- 0 ಅಂತರದಿಂದ ಅಣ್ಣೀರ ತಂಡವನ್ನು ಮಣಿಸಿ ಮುಂದಿನ ಸುತ್ತು ಪ್ರವೇಶಿಸಿತು. ಮಾಣಿರ ಕುಯಿಮಂಡ ವಿರುದ್ಧ ಒಂದು ಗೋಲು ಗಳಿಸಿ ಮುಂದಿನ ಸುತ್ತು ಪ್ರವೇಶಿಸಿತು.
 

click me!