ಬೆಂಗಳೂರಿನ 17 ವರ್ಷದ ಯಶ್ ಆರಾಧ್ಯ ಇದೀಗ ಭಾರತದ ಮೋಟಾರ್ ಸ್ಪೋರ್ಟ್‌ನಲ್ಲಿ ಹೊಸ ಇತಿಹಾಸ ರಚಿಸಿದ್ದಾರೆ. ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪಡೆದ ಮೊದಲ ಪಟು ಅನ್ನೋ ಹೆಗ್ಗಳಿಕೆಗೆ ಯಶ್ ಪಾತ್ರರಾಗಿದ್ದಾರೆ. ಯಶ್ ಆರಾಧ್ಯ ಸಾಧನೆಯ ಹಾದಿ ವಿವರ ಇಲ್ಲಿದೆ.
ದೆಹಲಿ(ಜ.22): ಬೆಂಗಳೂರಿನ ಯಶ್ ಆರಾಧ್ಯ ಪ್ರತಿಷ್ಠಿತ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಗೆ ಪಾತ್ರರಾದ ಭಾರತದ ಮೊದಲ ಮೋಟಾರ್ ಸ್ಪೋರ್ಟ್ಸ್ ಪಟು ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಶ್ರೀ.ರಾಮ್‌ನಾಥ್ ಕೋವಿಂದ್, ಯಶ್‌ಗೆ ಪ್ರಶಸ್ತಿ ನೀಡಿ ಗೌರವಿಸಿದರು.
ಇದನ್ನೂ ಓದಿ: 5ನೇ ಬಾರಿ INRC ಚಾಂಪಿಯನ್ಸ್ ಪಟ್ಟ ಗೆದ್ದ ಗೌರವ್ ಗಿಲ್!
9ನೇ ವಯಸ್ಸಿನಿಂದಲೇ ರೇಸಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಯಶ್ ತಮ್ಮ ಸಾಧನೆಯ ಹಾದಿಯಲ್ಲಿ 13 ಚಾಂಪಿಯನ್‌ಶಿಪ್ ಗೆದ್ದಿದ್ದಾರೆ. 17 ವರ್ಷದ ರೇಸರ್ ಈ ವರೆಗೂ 65 ಬಾರಿ ಪೋಡಿಯಂ ಫಿನಿಶ್ ಮಾಡಿದ್ದು, 12 ಪ್ರಶಸ್ತಿಗಳನ್ನು ತಮ್ಮ ಹೆಸರಿಗೆ ಸೇರ್ಪಡೆಗೊಳಿಸಿಕೊಂಡಿದ್ದಾರೆ.
ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ, 18 ವಯಸ್ಸಿನೊಳಗಿನ ಅಸಾಧಾರಾಣ ವಿದ್ಯಾರ್ಥಿಗಳು ವಿವಿ‘ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ನೀಡುವ ಭಾರತದ ಅತ್ಯುನ್ನತ ಪ್ರಶಸ್ತಿಯಾಗಿದೆ. ಯಶ್ ಸೇರಿದಂತೆ 49 ಪ್ರತಿಭಾವಂತರನ್ನು ಈ ಪ್ರಶಸ್ತಿಗೆ, ಕೇಂದ್ರ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಆಯ್ಕೆ ಮಾಡಿತ್ತು. ಈ ಪ್ರತಿಭಾವಂತ ವಿದ್ಯಾರ್ಥಿಗಳು ಜನವರಿ 26ರಂದು ಗಣರಾಜ್ಯೋತ್ಸವದ ಪರೇಡ್‌ಗೂ ಮುನ್ನ ಪ್ರಧಾನ ಮಂತ್ರಿಯವರನ್ನು ಸಹ ಭೇಟಿ ಮಾಡಲಿದ್ದಾರೆ.
ಇದನ್ನೂ ಓದಿ: ಬೈಕ್ ರೈಡರ್‌ಗಳಿಗೆ ಬಂದಿದೆ ರೆಕಿ ಆ್ಯಪ್; ವಿಶ್ವದಲ್ಲೇ ಮೊದಲು!
‘ನನ್ನನ್ನು ಈ ಪ್ರಶಸ್ತಿಗೆ ಪರಿಗಣಿಸಿದ್ದಕ್ಕೆ ಭಾರತ ಸರ್ಕಾರಕ್ಕೆ ‘ನ್ಯವಾದ ಹೇಳಲು ಇಚ್ಛಿಸುತ್ತೇನೆ ಹಾಗೂ ವಿನಮ್ರತೆಯಿಂದ ಸ್ವೀಕರಿಸುತ್ತೇನೆ. ಗೌರವಾನ್ವಿತ ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿದ್ದು ಹಾಗೂ ಪ್ರಧಾನಿಯನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದ್ದು ದೊಡ್ಡ ಗೌರವ. ನನ್ನ ವೃತ್ತಿಬದುಕಿನಲ್ಲಿ ಸಾಕಷ್ಟು ಪರಿಶ್ರಮ ವಹಿಸಿದ್ದೇನೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಣನೀಯ ಯಶಸ್ಸು ಸಾಧಿಸಿದ ನಂತರ ಈ ಗೌರವ ಸಿಗುತ್ತಿರುವುದು ಸಂತಸ ನೀಡಿದೆ’ ಎಂದು ಯಶ್ ಪ್ರಶಸ್ತಿ ಸ್ವೀಕರಿಸಿದ ಬಳಿಕ ಹೇಳಿದರು.
ಇದನ್ನೂ ಓದಿ:ಬೆಂಗ್ಳೂರಿನ ಬೈಕ್ ರೇಸರ್‌ಗೆ ವಿಶ್ವ ಕಿರೀಟ!.
‘ಈ ಪ್ರಶಸ್ತಿ ಬಹಳ ವಿಶೇಷವಾಗಿ ಉಳಿಯಲಿದೆ. ಇದು ಕೇವಲ ನನ್ನೊಬ್ಬನ ಸಾಧನೆಗೆ ಸಿಕ್ಕಿರುವುದಲ್ಲ, ಇಡೀ ತಂಡಕ್ಕೆ ಸಿಕ್ಕಿರುವುದಾಗಿದೆ. ಈ ಪ್ರಶಸ್ತಿ ಯುವ ರೇಸ್ಗಳಿಗೆ ಸಾ‘ನೆಗೈಯಲು ಸ್ಫೂರ್ತಿ ನೀಡಲಿದೆ. ಅವರು ಇನ್ನಷ್ಟು ಪರಿಶ್ರಮದೊಂದಿಗೆ ಮುನ್ನುಗ್ಗುತ್ತಾರೆ, ಏಕೆಂದರೆ ಅವರ ಪರಿಶ್ರಮಕ್ಕೆ ಲ ಸಿಗಲಿದೆ ಎಂದು ಗೊತ್ತಿರಲಿದೆ’ ಎಂದರು.
ಸಾಧಾರಣ ಹಿನ್ನೆಲೆ ಹಾಗೂ ರೇಸಿಂಗ್ ಕ್ಷೇತ್ರದಲ್ಲಿ ಯಾವುದೇ ಕುಟುಂಬಸ್ಥರು ಇಲ್ಲದಿದ್ದರೂ, ಯಶ್ ತಮ್ಮ ಸ್ವಂತ ಶ್ರಮದಿಂದ ಈ ಮಟ್ಟಕ್ಕೆ ತಲುಪಿದ್ದಾರೆ. 8 ವರ್ಷಗಳ ಹಿಂದೆ ಜೆಕೆ ಟೈಯರ್ ರಾಷ್ಟ್ರೀಯ ಗೋ ಕಾರ್ಟಿಂಗ್ ಚಾಂಪಿಯನ್ಶಿಪ್ನಿಂದ ವೃತ್ತಿಬದುಕು ಆರಂಭಿಸಿದ ಯಶ್, ಅಕ್ಬರ್ ಇಬ್ರಾಹಿಂ ಅವರ ಮೀಕೋ ಮೋಟಾರ್ಸ್ಪೋರ್ಟ್ಸ್ ತಂಡವನ್ನು ಪ್ರತಿನಿಧಿಸಿದ್ದರು. ನಿರಂತರವಾಗಿ ಮೆಟ್ಟಿಲುಗಳನ್ನು ಏರುತ್ತಾ, ಫಾರ್ಮುಲಾ ರೇಸಿಂಗ್ ವರೆಗೂ ತಲುಪಿದ್ದಾರೆ.
ಯಶ್, 2015ರಲ್ಲಿ ಸ್ಪೇನ್, ಬೆಲ್ಜಿಯಂ ಹಾಗೂ ಫ್ರಾನ್ಸ್ನಲ್ಲಿ ನಡೆದ ಸಿಐಕೆ ಎ್ಐಎ ಅಕಾಡೆಮಿ ಟ್ರೋಫಿ ಸೇರಿದಂತೆ ಅಂತಾರಾಷ್ಟ್ರೀಯ ಚಾಂಪಿಯನ್ಶಿಪ್ಗಳಲ್ಲೂ ಪಾಲ್ಗೊಂಡಿದ್ದಾರೆ. 2017ರಲ್ಲಿ ಪೋರ್ಚುಗಲ್ನಲ್ಲಿ ನಡೆದ ರೋಟಾಕ್ಸ್ ವಿಶ್ವ ಫೈನಲ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಎಎಂಎಸ್ಸಿಐನಿಂದ ನಾಮನಿರ್ದೇಶನಗೊಂಡಿದ್ದರು. 2019ರಲ್ಲಿ ರೋಮ್ನಲ್ಲಿ ನಡೆದ ಎಫ್ಐಎ ಮೋಟಾರ್ಸ್ಪೋರ್ಟ್ಸ್ ಗೇಮ್ಸ್‌ನಲ್ಲೂ ಅವರು ಸ್ಪರ್ಧಿಸಿದ್ದರು.
2019ರ ಋತುವಿನಲ್ಲಿ ಯಶ್ ಫಾರ್ಮುಲಾ-4 ಆಗ್ನೇಯ ಏಷ್ಯಾ ಚಾಂಪಿಯನ್ಶಿಪ್‌ಗೆ ಪಾದಾರ್ಪಣೆ ಮಾಡಿ, 2 ಬಾರಿ ಪೋಡಿಯಂ ಫಿನಿಶ್ ಮಾಡುವ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸಿದ್ದರು.
‘ಭಾರತೀಯ ಮೋಟಾರ್ ಸ್ಪೋರ್ಟ್ಸ್ ಯಶಸ್ಸಿನ ಉತ್ತುಂಗಕ್ಕೇರುತ್ತಿದೆ. ಮೊದಲು, ಗೌರವ್ ಗಿಲ್ ನಮ್ಮ ಕ್ಷೇತ್ರದಿಂದ ಅರ್ಜುನ ಪ್ರಶಸ್ತಿ ಸ್ವೀಕರಿಸಿದ ಮೊದಲಿಗ ಎನಿಸಿಕೊಂಡರು. ಈಗ ಯಶ್ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪಡೆದಿದ್ದಾರೆ. ಭಾರತೀಯ ಮೋಟಾರ್ ಸ್ಪೋರ್ಟ್‌ನಲ್ಲಿ ಇದು ಅತ್ಯುನ್ನತ ಸಾಧನೆಯಾಗಿದ್ದು, ನಮ್ಮೆಲ್ಲರಿಗೂ ಹೆಮ್ಮೆಯ ಕ್ಷಣವಾಗಿದೆ. ವರ್ಷಗಳ ಬಳಿಕ ನಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಲ ಸಿಗುತ್ತಿರುವುದನ್ನು ನೋಡಲು ಸಂತಸವಾಗುತ್ತದೆ. ಯಶ್ ಒಬ್ಬ ಪ್ರತಿಭಾವಂತ ಚಾಲಕ, ಈ ಪ್ರಶಸ್ತಿ ಅವರಲ್ಲಿ ಮತ್ತಷ್ಟು ಪ್ರೋತ್ಸಾಹ ತುಂಬಲಿದ್ದು, ಇನ್ನಷ್ಟು ಸಾಧನೆಗಳನ್ನು ಮಾಡಲು ಸಹಕಾರಿಯಾಗಲಿದೆ’ ಎಂದು ಜೆಕೆ ಟೈಯರ್ ಮೋಟಾರ್ ಸ್ಪೋರ್ಟ್ಸ್ ಮುಖ್ಯಸ್ಥ ಸಂಜಯ್ ಶರ್ಮಾ ಹೇಳಿದರು.
‘ಯಶ್ ಸಾಧನೆ ನಮ್ಮೆಲ್ಲರಿಗೂ ಖುಷಿ ನೀಡಿದೆ. ನಾವು ಅರ್ಹರಿದ್ದರೂ ನಮ್ಮನ್ನು ಪರಿಗಣಿಸಲು ಹೆಚ್ಚಿನ ಸಮಯವಾಗಿದೆ. ಆದರೆ ಈಗ ಗೌರವ್ ಗಿಲ್ ಹಾಗೂ ಯಶ್‌ಗೆ ಸಿಕ್ಕಿರುವ ಗೌರವದಿಂದ ನಮಗೆ ಮತ್ತಷ್ಟು ಪ್ರಶಸ್ತಿ, ಪುರಸ್ಕಾರಗಳು ಸಿಗಲಿದೆ ಎನ್ನುವ ವಿಶ್ವಾಸ ಮೂಡಿಸಿದೆ. ಜನ ನಮ್ಮ ಕ್ರೀಡೆಯನ್ನು ಗಂಭೀರವಾಗಿ ಪರಿಗಣಿಸಲಿದ್ದಾರೆ’ ಎಂದು ಎ್ಎಂಎಸ್ಸಿಐನ ಅಧ್ಯಕ್ಷ ಜೆ.ಪೃಥ್ವಿರಾಜ್ ಹೇಳಿದರು.
‘ಪುಸ್ತಕವನ್ನು ಅದರ ಮುಖಪುಟ ನೋಡಿ ನಿರ್ಣಯಿಸಬಾರದು ಎನ್ನುವುದು ಹಳೆ ಮಾತು. ಯಶ್ ಆರಾಧ್ಯಯ ವಿಚಾರದಲ್ಲಿ ಈ ಮಾತು ಸೂಕ್ತವೆನಿಸುತ್ತದೆ. ಅವರು ಮೊದಲು ಗೋ ಕಾರ್ಟಿಂಗ್ಗೆ ಕಾಲಿಟ್ಟಾಗ ಯಾರೂ ಈ ಹುಡುಗ ಇಷ್ಟು ದೂರ ಬಂದು ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರನಾಗುತ್ತಾನೆ ಎಂದುಕೊಂಡಿರಲಿಲ್ಲ. ಆದರೆ ಆತನಲ್ಲಿರುವ ಉತ್ಸಾಹ, ಕ್ರೀಡೆಯ ಬಗ್ಗೆ ಇರುವ ಪ್ರೀತಿ, ಛಲವನ್ನು ಗಮನಿಸಿದ್ದರೆ ಮೋಟಾರ್ ಸ್ಪೋರ್ಟ್‌ನಲ್ಲಿ ಎತ್ತರಕ್ಕೆ ಬೆಳೆಯುತ್ತಾನೆ ಎಂದು ಅನಿಸದೆ ಇರಲು ಸಾಧ್ಯವಿಲ್ಲ. ಪ್ರತಿ ಹಂತದಲ್ಲೂ ಕುಟುಂಬದ ಪ್ರೋತ್ಸಾಹ, ಯಾವುದು ಅಸಾಧ್ಯಯವಲ್ಲ ಎನ್ನುವ ಅವರ ತಂದೆಯ ಹಠದಿಂದ ಯಶ್ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿದ್ದಾನೆ. ಇದು ಕೇವಲ ಆರಂಭವಷ್ಟೇ, ಆತನಲ್ಲಿರುವ ಬಲವಾದ ನಂಬಿಕೆ ಹಾಗೂ ಅವನ ಸುತ್ತಲಿರುವವರ ಪ್ರೋತ್ಸಾಹದಿಂದ ಯಶ್ ಅಂತಾರಾಷ್ಟ್ರೀಯ ವೃತ್ತಿಪರ ರೇಸಿಂಗ್‌ನಲ್ಲಿ ತನ್ನದೇ ಛಾಪು ಮೂಡಿಸಲಿದ್ದಾನೆ’ ಎಂದು ಮೀಕೋ ಸ್ಪೋರ್ಟ್ಸ್ನ ಮುಖ್ಯಸ್ಥ ಹಾಗೂ ಯಶ್ನ ಮಾರ್ಗದರ್ಶಕ ಅಕ್ಬರ್ ಇಬ್ರಾಹಿಂ ಹೇಳಿದರು.