
ಮೆಲ್ಬರ್ನ್(ಜ.28): ಆಸ್ಪ್ರೇಲಿಯನ್ ಓಪನ್ ಗೆದ್ದು ರೋಜರ್ ಫೆಡರರ್‌ರ 20 ಗ್ರ್ಯಾಂಡ್‌ಸ್ಲಾಂ ದಾಖಲೆ ಸರಿಗಟ್ಟುವತ್ತ ವಿಶ್ವ ನಂ.1 ಆಟಗಾರ ರಾಫೆಲ್ ನಡಾಲ್ ದಿಟ್ಟಹೆಜ್ಜೆ ಇರಿಸಿದ್ದಾರೆ. 19 ಗ್ರ್ಯಾಂಡ್‌ಸ್ಲಾಂಗಳ ಒಡೆಯ ಸ್ಪೇನ್‌ನ ನಡಾಲ್, ಸೋಮವಾರ ನಡೆದ 4ನೇ ಸುತ್ತಿನ ಪಂದ್ಯದಲ್ಲಿ ಆಸ್ಪ್ರೇಲಿಯಾದ ನಿಕ್ ಕಿರಿಯೋಸ್ ವಿರುದ್ಧ 6-3, 3-6, 7-6, 7-6 ಸೆಟ್‌ಗಳಲ್ಲಿ ಗೆದ್ದು ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ನಡಾಲ್ ಅಂತಿಮ 8ರ ಸುತ್ತಿನಲ್ಲಿ 5ನೇ ಶ್ರೇಯಾಂಕಿತ ಆಟಗಾರ, ಆಸ್ಟ್ರಿಯಾದ ಡೊಮಿನಿಕ್ ಥೀಮ್‌ರನ್ನು ಎದುರಿಸಲಿದ್ದಾರೆ. 4ನೇ ಶ್ರೇಯಾಂಕಿತ ರಷ್ಯಾದ ಡ್ಯಾನಿಲ್ ಮೆಡ್ವೆಡೆವ್‌ರನ್ನು 6-2, 2-6, 4-6, 7-6, 6-2 ಸೆಟ್‌ಗಳಲ್ಲಿ ಮಣಿಸಿದ ಸ್ವಿಜರ್‌ಲೆಂಡ್‌ನ ಸ್ಟ್ಯಾನಿಸ್ಲಾಸ್ ವಾವ್ರಿಂಕಾ, ರಷ್ಯಾದ ರುಬ್ಲೆವ್ ವಿರುದ್ಧ 6-4, 6-4, 6-4ರಲ್ಲಿ ಗೆದ್ದ 7ನೇ ಶ್ರೇಯಾಂಕಿತ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಸಹ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ಆಸ್ಪ್ರೇಲಿಯನ್ ಓಪನ್ ಕ್ವಾರ್ಟರ್‌ಗೆ ಲಗ್ಗೆಯಿಟ್ಟ ಫೆಡರರ್
ಥೀಮ್ ತಮ್ಮ 4ನೇ ಸುತ್ತಿನ ಪಂದ್ಯದಲ್ಲಿ ಫ್ರಾನ್ಸ್‌ನ ಗೇಲ್ ಮಾನ್ಫಿಲ್ಸ್ ವಿರುದ್ಧ 6-2, 6-4, 6-4 ಸೆಟ್‌ಗಳಲ್ಲಿ ಜಯಗಳಿಸಿದರು. ಮಂಗಳವಾರ ನಡೆಯಲಿರುವ ಮೊದಲೆರಡು ಕ್ವಾರ್ಟರ್ ಫೈನಲ್‌ಗಳಲ್ಲಿ ನೋವಾಕ್ ಜೋಕೋವಿಚ್-ಮಿಲೋಸ್ ರವೊನಿಚ್, ರೋಜರ್ ಫೆಡರರ್-ಸ್ಯಾಂಡ್‌ಗ್ರೆನ್ ಎದುರಾಗಲಿದ್ದಾರೆ.
ಹಾಲೆಪ್‌ಗೆ ಸುಲಭ ಜಯ: 4ನೇ ಶ್ರೇಯಾಂಕಿತೆ ರೊಮೇನಿಯಾದ ಸಿಮೋನಾ ಹಾಲೆಪ್, 4ನೇ ಸುತ್ತಿನ ಪಂದ್ಯದಲ್ಲಿ ಬೆಲ್ಜಿಯಂನ ಎಲೈಸ್ ಮರ್ಟಿನ್ಸ್ ವಿರುದ್ಧ 6-4, 6-4 ಸೆಟ್‌ಗಳಲ್ಲಿ ಸುಲಭ ಜಯ ಪಡೆದು ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಈ ಜಯದೊಂದಿಗೆ ಹಾಲೆಪ್ ವಿಶ್ವ ರಾರಯಂಕಿಂಗ್‌ನಲ್ಲಿ 2ನೇ ಸುತ್ತಿಗೇರಿದರು. ಹಾಲೆಪ್ ಅಂತಿಮ 8ರ ಸುತ್ತಿನಲ್ಲಿ ಎಸ್ಟೋನಿಯಾದ ಕೊಂಟಾವಿಟ್‌ರನ್ನು ಎದುರಿಸಲಿದ್ದಾರೆ. ನದೆರ್‌ಲೆಂಡ್ಸ್‌ನ ಕೀಕೀ ಬರ್ಟೆನ್ಸ್ ವಿರುದ್ಧ 6-3, 6-3 ಸೆಟ್‌ಗಳಲ್ಲಿ ಗೆದ್ದ ಮಾಜಿ ನಂ.1 ಸ್ಪೇನ್‌ನ ಗಾರ್ಬೈನ್ ಮುಗುರುಜಾ ಸಹ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ಮಂಗಳವಾರ ನಡೆಯಲಿರುವ ಮೊದಲೆರಡು ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಅಮೆರಿಕದ ಸೋಫಿಯಾ ಕೆನಿನ್‌ಗೆ ಟ್ಯುನೀಶಿಯಾದ ಒನ್ಸ್ ಜಬೆಯುರ್ ಎದುರಾದರೆ, ವಿಶ್ವ ನಂ.1 ಆಸ್ಪ್ರೇಲಿಯಾದ ಆಶ್ಲೆ ಬಾರ್ಟಿ ಹಾಗೂ 7ನೇ ಶ್ರೇಯಾಂಕಿತೆ ಚೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ ಸೆಣಸಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.