Novak Djokovic: ಆಸ್ಟ್ರೇಲಿಯಾ ಪ್ರವೇಶಿಸಲು ಟೆನಿಸ್ ದಿಗ್ಗಜ ಜೋಕೋವಿಚ್‌ಗಿಲ್ಲ ಅನುಮತಿ..!

Suvarna News   | Asianet News
Published : Jan 06, 2022, 09:16 AM IST
Novak Djokovic: ಆಸ್ಟ್ರೇಲಿಯಾ ಪ್ರವೇಶಿಸಲು ಟೆನಿಸ್ ದಿಗ್ಗಜ ಜೋಕೋವಿಚ್‌ಗಿಲ್ಲ ಅನುಮತಿ..!

ಸಾರಾಂಶ

* ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಭಾಗವಹಿಸಬೇಕಿದ್ದ ನೊವಾಕ್ ಜೋಕೋವಿಚ್‌ಗೆ ಶಾಕ್ * ವೀಸಾ ಸಮಸ್ಯೆಯಿಂದಾಗಿ ಜೋಕೋಗೆ ಏರ್‌ಪೋರ್ಟ್‌ನಲ್ಲೇ ತಡೆ * ಜೋಕೋವಿಚ್‌ ಗ್ರ್ಯಾನ್‌ ಸ್ಲಾಂನಲ್ಲಿ ಆಡುವುದು ಅನುಮಾನ 

ಮೆಲ್ಬರ್ನ್(ಜ.06)‌: ಆಸ್ಪ್ರೇಲಿಯನ್‌ ಓಪನ್‌ನಲ್ಲಿ (Australian Opne) ಪಾಲ್ಗೊಳ್ಳಲು ವೈದ್ಯಕೀಯ ಅನುಮತಿ ಪಡೆದ ಹೊರತಾಗಿಯೂ ವಿಶ್ವ ನಂ.1 ಟೆನಿಸಿಗ, ಸರ್ಬಿಯಾದ ನೋವಾಕ್‌ ಜೋಕೋವಿಚ್‌ಗೆ (Novak Djokovic) ಮತ್ತೆ ಸಂಕಷ್ಟ ಎದುರಾಗಿದೆ. 9 ಬಾರಿಯ ಆಸ್ಪ್ರೇಲಿಯನ್‌ ಓಪನ್‌ ಚಾಂಪಿಯನ್‌ ಜೋಕೋವಿಚ್‌, ಮೆಲ್ಬರ್ನ್‌ಗೆ ಬಂದಿಳಿದರೂ ವೀಸಾ ಸಮಸ್ಯೆಯಿಂದಾಗಿ (VISA Problem) ವಿಮಾನ ನಿಲ್ದಾಣದಲ್ಲಿ ಅವರನ್ನು ಅಧಿಕಾರಿಗಳು ತಡೆ ಹಿಡಿದಿದ್ದಾರೆ ಎಂದು ತಿಳಿದುಬಂದಿದೆ. ಸದ್ಯದ ಮಟ್ಟಿಗೆ ಜೋಕೋವಿಚ್‌ ಗ್ರ್ಯಾನ್‌ ಸ್ಲಾಂನಲ್ಲಿ ಆಡುವುದು ಅನುಮಾನ ಎನಿಸಿದೆ.

ವಿಕ್ಟೋರಿಯಾ ರಾಜ್ಯ ಸರ್ಕಾರ ಆಸ್ಪ್ರೇಲಿಯನ್‌ ಓಪನ್‌ನಲ್ಲಿ ಪಾಲ್ಗೊಳ್ಳಲು ಲಸಿಕೆ ಕಡ್ಡಾಯ ಎಂದು ಸ್ಪಷ್ಟಪಡಿಸಿದೆ. ಅಲ್ಲದೇ, ಆಸ್ಪ್ರೇಲಿಯಾ ಸರ್ಕಾರದ ಗೃಹ ಸಚಿವೆ ಕರೆನ್‌ ಆ್ಯಂಡ್ರೂಸ್‌, ‘ಆಸ್ಪ್ರೇಲಿಯಾದ ಗಡಿ ನಿಯಮಗಳು ಎಲ್ಲರಿಗೂ ಒಂದೇ ಆಗಿದೆ. ಟೆನಿಸ್‌ ತಾರೆಗಳಿಗೂ ನಿಮಯ ಅನ್ವಯಿಸಲಿದೆ ಎಂದಿದ್ದಾರೆ. ಇನ್ನು, ಆಸ್ಪ್ರೇಲಿಯಾ ಪ್ರಧಾನಿ ಸ್ಕಾಟ್‌ ಮೋರಿಸನ್‌, ಜೋಕೋವಿಚ್‌ ವೈದ್ಯಕೀಯ ಅನುಮತಿ ಪಡೆದಿದ್ದಕ್ಕೆ ಸೂಕ್ತ ದಾಖಲೆ ಒದಗಿಸಲು ಕೇಳಿದ್ದು, ದಾಖಲೆ ಒದಗಿಸದಿದ್ದರೆ ಮನೆಗೆ ಮರಳುವಂತೆ ಎಚ್ಚರಿಕೆ ನೀಡಿದ್ದಾರೆ.

ಇದೇ ಜನವರಿ 17ರಿಂದ ಆರಂಭವಾಗಲಿರುವ ಆಸ್ಪ್ರೇಲಿಯನ್‌ ಓಪನ್‌ನಲ್ಲಿ ಹಾಲಿ ಚಾಂಪಿಯನ್‌, ವಿಶ್ವ ನಂ.1 ಟೆನಿಸಿಗ ನೋವಾಕ್‌ ಜೋಕೋವಿಚ್‌ ಪಾಲ್ಗೊಳ್ಳುವುದಾಗಿ ಮಂಗಳವಾರ(ಜ.4)ವಷ್ಟೇ ಖಚಿತಪಡಿಸಿದ್ದರು. ಈ ಬಗ್ಗೆ ಮಂಗಳವಾರ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದರು. ‘ಕೋವಿಡ್‌ ಲಸಿಕೆ (Covid 19 vaccination) ಪಡೆದಿರುವ ಪ್ರಮಾಣ ಪತ್ರ ಸಲ್ಲಿಕೆಯಿಂದ ವಿನಾಯಿತಿ ಸಿಕ್ಕಿದ್ದು, ಹೀಗಾಗಿ ಆಸ್ಪ್ರೇಲಿಯಾ ಓಪನ್‌ನಲ್ಲಿ ಪಾಲ್ಗೊಳ್ಳುತ್ತೇನೆ’ ಎಂದಿದ್ದರು. ಕೋವಿಡ್‌ ಲಸಿಕೆ ಪಡೆದಿರುವ ಬಗ್ಗೆ ಪ್ರಮಾಣ ಪತ್ರ ಸಲ್ಲಿಕೆಯನ್ನು ಕಡ್ಡಾಯಗೊಳಿಸಿದರೆ ಓಪನ್‌ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಜೋಕೋವಿಚ್‌ ಷರತ್ತು ಹಾಕಿದ್ದರು.

ಭಾರತದ 17 ವರ್ಷದ ಅಮನ್‌ಗೂ ಪ್ರವೇಶವಿಲ್ಲ

ಮೆಲ್ಬರ್ನ್‌: ಕೋವಿಡ್‌ ಲಸಿಕೆ ಪಡೆಯದ ಕಾರಣ ಭಾರತದ 17 ವರ್ಷದ ಟೆನಿಸಿಗ ಅಮನ್‌ ಮಲಿಕ್‌ಗೆ ಆಸ್ಪ್ರೇಲಿಯನ್‌ ಓಪನ್‌ಗೆ ಪ್ರವೇಶ ನಿರಾಕರಿಸಲಾಗಿದ್ದು, ಟೀಕೆಗೆ ಗುರಿಯಾಗಿದೆ. ಹರ್ಯಾಣದ ಅಮನ್‌ ಅರ್ಹತಾ ಸುತ್ತಿನಲ್ಲಿ ಆಡಲು ಅವಕಾಶ ಪಡೆದಿದ್ದರೂ ಲಸಿಕೆ ಪಡೆಯದ ಕಾರಣಕ್ಕೆ ಪ್ರವೇಶ ನಿರಾಕರಿಸಲಾಗಿದೆ. 

Australian Open 2022: ನೊವಾಕ್ ಜೋಕೋವಿಚ್ ಸ್ಪರ್ಧೆ ಖಚಿತ..!

ಭಾರತದಲ್ಲಿ ಈಗಷ್ಟೇ 18 ವರ್ಷದೊಳಗಿನವರಿಗೆ ಲಸಿಕೆ ನೀಡಲಾಗುತ್ತಿದೆ. ಹೀಗಿರುವಾಗ 17 ವರ್ಷದ ಅಮನ್‌ ಹೇಗೆ ಲಸಿಕೆ ಪಡೆಯಲು ಸಾಧ್ಯ ಎಂದು ಅವರ ಕೋಚ್‌ ಪ್ರಶ್ನಿಸಿದ್ದಾರೆ. ಅಲ್ಲದೇ ನೋವಾಕ್‌ ಜೋಕೋವಿಚ್‌ಗೆ ವಿನಾಯಿತಿ ನೀಡಲಾಗಿತ್ತು ಎನ್ನುವ ಬಗ್ಗೆಯೂ ಪ್ರತಿಕ್ರಿಯಿಸಿರುವ ಅವರು, ‘ಜೋಕೋಗೊಂದು ನ್ಯಾಯ, ನಮಗೊಂದು ನ್ಯಾಯ ಏಕೆ’ ಎಂದು ಪ್ರಶ್ನಿಸಿದ್ದಾರೆ.

ಅಖಿಲ ಭಾರತ ಅಂತರ್‌ ವಿವಿ ಅಥ್ಲೆಟಿಕ್ಸ್‌: ಮಂಗಳೂರು ವಿವಿ ಮುನ್ನಡೆ

ಮೂಡುಬಿದಿರೆ: ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿರುವ 81ನೇ ಅಖಿಲ ಭಾರತ ಅಂತರ್‌ ವಿಶ್ವ ವಿದ್ಯಾನಿಲಯಗಳ ಪುರುಷ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಎರಡನೇ ದಿನ ಎರಡು ಹೊಸ ಕೂಟ ದಾಖಲೆಗಳು ಮೂಡಿ ಬಂದಿವೆ. 2 ಚಿನ್ನ, 2 ಬೆಳ್ಳಿ, 2 ಕಂಚಿನ ಪದಕಗಳನ್ನು ಗೆದ್ದಿರುವ ಅತಿಥೇಯ ಮಂಗಳೂರು ವಿವಿ ಈ ಕ್ರೀಡಾ ಕೂಟದಲ್ಲಿ ಸ್ಪಷ್ಟಮುನ್ನಡೆ ಸಾಧಿಸಿದೆ. ಈ ವರೆಗೂ ವಿವಿ ಪರ ಪದಕ ವಿಜೇತರೆಲ್ಲರೂ ಆಳ್ವಾಸ್‌ ಕಾಲೇಜಿನ ಕ್ರೀಡಾಪಟುಗಳು.

ಶಾಟ್‌ಪುಟ್‌ನಲ್ಲಿ ವನಮ್‌ ಶರ್ಮ(ಚಿನ್ನ), 20 ಕಿ.ಮೀ. ನಡಿಗೆಯಲ್ಲಿ ಪರಮ್‌ಜೀತ್‌ ಸಿಂಗ್‌ ಹಾಗೂ 400 ಮೀಟರ್‌ ಓಟದಲ್ಲಿ ನಿಹಾಲ್‌ ಜೊಯೆಲ್‌ (ಬೆಳ್ಳಿ), 20 ಕಿ.ಮೀ. ನಡಿಗೆಯಲ್ಲಿ ಹರ್‌ದೀಪ್‌ ಹಾಗೂ 1500 ಮೀಟರ್‌ ಓಟದಲ್ಲಿ ಫರ್ವೇಜ್‌ ಖಾನ್‌ (ಕಂಚು) ಹೀಗೆ ಒಟ್ಟು 5 ಪದಕಗಳನ್ನು ಗೆದ್ದು ಮಂಗಳೂರು ವಿವಿ ಎರಡನೇ ದಿನ ಕೂಟದಲ್ಲಿ ಅಗ್ರಸ್ಥಾನದೊಂದಿಗೆ ಮುನ್ನಡೆಯಲು ಕಾರಣರಾಗಿದ್ದಾರೆ. ಈ ಎಲ್ಲರೂ ಆಳ್ವಾಸ್‌ ವಿದ್ಯಾರ್ಥಿಗಳಾಗಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್; ಟೂರ್ನಿಯ ವೇಳಾಪಟ್ಟಿ ಪ್ರಕಟ, ಟಿಕೆಟ್ ಬುಕಿಂಗ್ ಆರಂಭ
ಸತತ ಎರಡನೇ ಬಾರಿಗೆ ಭಾರತ ಮಹಿಳೆಯರಿಗೆ ಒಲಿದ ಕಬಡ್ಡಿ ವಿಶ್ವಕಪ್ ಚಾಂಪಿಯನ್ ಪಟ್ಟ!