ಲಂಡನ್(ಜೂ.27) ಕೋವಿಡ್ ಲಸಿಕೆ ಇದೀಗ ಎಲ್ಲಾ ಕಡೆ ಕಡ್ಡಾಯವಾಗಿದೆ. ಆದರೆ ಟೆನಿಸ್ ದಿಗ್ಗಜ ನೋವಾಕ್ ಜೊಕೋವಿಚ್ ಕೋವಿಡ್ ಲಸಿಕೆ ಹಾಕಿಸಿಕೊಂಡಿಲ್ಲ. ತಾನು ಗ್ರ್ಯಾಂಡ್ ಸ್ಲಾಮ್ ಬೇಕಾದರೂ ಮಿಸ್ ಮಾಡಿಕೊಳ್ಳುತ್ತೇನೆ. ಆದರೆ ಲಸಿಕೆ ಹಾಕಿಕೊಳ್ಳುವುದಿಲ್ಲ ಎಂದು ನೋವಾಕ್ ಹೇಳಿದ್ದಾರೆ. ಈ ನಿರ್ಧಾರದಿಂದ ಜೊಕೋವಿಚ್ ಯುಎಸ್ ಓಪನ್ ಟೂರ್ನಿಯಿಂದ ಹೊರಗುಳಿಸುವ ಸಾಧ್ಯತೆ ದಟ್ಟವಾಗಿದೆ.
ಕೋವಿಡ್ ಲಸಿಕೆ ಹಾಕದ ಕಾರಣ ನೋವಾಕ್ ಜೊಕೋವಿಚ್ ಈಗಾಗಲೇ ಆಸ್ಟ್ರೇಲಿಯಾ ಗ್ರ್ಯಾಂಡ್ ಸ್ಲಾಮ್ ಟೂರ್ನಿ ಮಿಸ್ ಮಾಡಿಕೊಂಡಿದ್ದಾರೆ. ಲಸಿಕೆ ಹಾಕದೇ ಟೂರ್ನಿಗೆ ಹಾಜರಾದ ನೋವಾಕ್‌ಗೆ ಆಸ್ಟ್ರೇಲಿಯಾ ಗ್ರ್ಯಾಂಡ್ ಸ್ಲಾಮ್ ಅವಕಾಶ ನೀಡದೆ ವಾಪಸ್ ಕಳುಹಿಸಿತ್ತು. ಇದೀಗ ಮುಂಬರುವ ಯುಎಸ್ ಓಪನ್ ಟೂರ್ನಿಯನ್ನು ಮಿಸ್ ಮಾಡಿಕೊಳ್ಳಲಿದ್ದಾರೆ.
undefined
ಸೋಮವಾರದಿಂದ ಜೊಕೋವಿಚ್ ವಿಂಬಲ್ಡನ್ ಟೂರ್ನಿ ಆಡಲಿದ್ದಾರೆ. ಈ ಟೂರ್ನಿಯಲ್ಲಿ ಲಸಿಕೆ ಕಡ್ಡಾಯವಲ್ಲ. ಹೀಗಾಗಿ ಜೋಕೋವಿಚ್ ಹಾಲಿ ವಿಂಬಲ್ಡನ್ ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲು ಅಭ್ಯಾಸ ನಡೆಸಿದ್ದಾರೆ. ಕೆಲ ಟೆನಿಸ್ ಟೂರ್ನಿಗಳಲ್ಲಿ ಲಸಿಕೆ ಕಡ್ಡಾಯವಲ್ಲ.
Wimbledon 2022: ಇಂದಿನಿಂದ ವಿಂಬಲ್ಡನ್ ಗ್ರ್ಯಾನ್‌ಸ್ಲಾಂ ಟೆನಿಸ್ ಕದನ
20 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ವಿಜೇತ ನೋವಾಕ್ ಜೊಕೋವಿಚ್ ಈ ವರ್ಷದ ಆರಂಭದಲ್ಲೇ ಲಸಿಕೆ ಕಾರಣದಿಂದ ಆಸ್ಟ್ರೇಲಿಯಾ ಟೂರ್ನಿಯಿಂದ ಹೊರಗುಳಿದಿದ್ದರು. ಆದರೆ ಕಳೆದ ತಿಂಗಳು ಆಯೋಜನೆಗೊಂಡಿದ್ದ ಫ್ರೆಂಚ್ ಓಪನ್ ಟೂರ್ನಿ ಆಡಲು ನೋವಾಕ್ ಜೊಕೋವಿಚ್‌ಗೆ ಅವಕಾಶ ನೀಡಲಾಗಿತ್ತು. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರಾಫೆಲ್ ನಡಾಲ್ ವಿರುದ್ದ ಮುಗ್ಗರಿಸಿದ ನೋವಾಕ್ ಟೂರ್ನಿಯಿಂದ ಹೊರಬಿದ್ದಿದ್ದರು.
ಕೋವಿಡ್ ಮಾರ್ಗಸೂಚಿ ಕಾರಣ ಅಮೆರಿಕ ಪ್ರವೇಶಿಸಲು ನನಗೆ ಅವಕಾಶವಿಲ್ಲ. ಈ ಕುರಿತು ನನಗೆ ಅರಿವಿದೆ. ಆದರೆ ನಾನು ಈ ಮಾರ್ಗಸೂಚಿಯಲ್ಲಿ ಬದಲಾಣೆ ಆಗಬಹುದೆಂಬ ನಿರೀಕ್ಷೆಯಲ್ಲಿದ್ದೇನೆ. ಲಸಿಕೆ ಪಡೆಯದ ವಿದೇಶಿಗರನ್ನು ಅರಮೆರಿಕ ಪ್ರವೇಶಿಸಲು ಅವಕಾಶವಿಲ್ಲ. ಆದರೆ ಈ ನಿರ್ಧಾರದಲ್ಲಿ ಬದಲಾವಣೆಯಾಗಬಹುದೆಂಬ ನಿರೀಕ್ಷೆಯಲ್ಲಿದೆ ಎಂದು ಜೊಕೋವಿಚ್ ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಲಸಿಕೆ ಪಡೆಯುವ ಕುರಿತು ಯಾವುದಾದರೂ ಆಲೋಚನೆ ಇದೆಯಾ ಎಂಬ ಪ್ರಶ್ನೆಗೆ ಜೊಕೋವಿಚ್ ಸ್ಪಷ್ಟವಾಗಿ ಇಲ್ಲ ಎಂದಿದ್ದಾರೆ.
Wimbledon ಟೆನಿಸ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಜೋಕೋವಿಚ್‌ಗೆ ಅನುಮತಿ
ವಿಂಬಲ್ಡನ್ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿ ಸೋಮವಾರದಿಂದ ಆರಂಭವಾಗಲಿದ್ದು, ವಿಶ್ವ ಶ್ರೇಷ್ಠ ಟೆನಿಸಿಗರ ನಡುವೆ ಮತ್ತೊಮ್ಮೆ ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಾಗಿ ಹೋರಾಟ ನಡೆಯಲಿದೆ. ಈ ಬಾರಿ ವಿಂಬಲ್ಡನ್ ಹಲವು ಕಾರಣಗಳಿಗೆ ಸುದ್ದಿಯಾಗುತ್ತಿದೆ. ಉಕ್ರೇನ್ ಮೇಲೆ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ರಷ್ಯಾದ ಆಟಗಾರರಿಗೆ ಈ ಬಾರಿ ವಿಂಬಲ್ಡನ್‌ನಲ್ಲಿ ಆಡುವ ಅವಕಾಶವಿಲ್ಲ. ಹೀಗಾಗಿ ವಿಶ್ವ ನಂ.1 ಟೆನಿಸಿಗ ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇನ್ನು, ಟೆನಿಸ್ ಇತಿಹಾಸದಲ್ಲೇ ಅತೀ ಹೆಚ್ಚು(23) ಗ್ರ್ಯಾನ್‌ಸ್ಲಾಂ ಗೆದ್ದಿರುವ ಅಮೆರಿಕದ ಮಾಜಿ ವಿಶ್ವ ನಂ.1 ಸೆರೆನಾ ವಿಲಿಯಮ್ಸ್ ವರ್ಷಗಳ ಬಳಿಕ ಟೆನಿಸ್ ಅಂಗಳದಲ್ಲಿ ಕಾಣಿಸಿಕೊಳ್ಳುತ್ತಿದ್ದು, 24ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ಹಾಲಿ ವಿಂಬಲ್ಡನ್ ಚಾಂಪಿಯನ್, ಆಸ್ಪ್ರೇಲಿಯಾದ ಆ್ಯಶ್ಲೆ ಬಾರ್ಟಿ ಈಗಾಗಲೇ ನಿವೃತ್ತಿಯಾಗಿದ್ದು, ಈ ಬಾರಿ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿಲ್ಲ. ಇವರನ್ನು ಹೊರತುಪಡಿಸಿದ ಈ ಬಾರಿ ಫ್ರೆಂಚ್ ಓಪನ್ ಗೆದ್ದಿರುವ ಪೋಲೆಂಡ್‌ನ ಇಗಾ ಸ್ವಿಯಾಟೆಕ್, 2021 ಯುಸ್ ಓಪನ್ ಚಾಂಪಿಯನ್ ಬ್ರಿಟನ್‌ನ ಎಮ್ಮಾ ರಾಡುಕಾನು, ಸ್ಪೇನ್‌ನ ಪಾಲಾ ಬಡೋಸಾ, ಕಳೆದ ಬಾರಿ ವಿಂಬಲ್ಡನ್ ರನ್ನರ್-ಅಪ್ ಚೆಕ್ ಗಣರಾಜ್ಯದ ಕರೋಲಿನಾ ಪಿಸ್ಕೋವಾ, ಅಮೆರಿಕದ ಜೆಸ್ಸಿಗಾ ಪೆಗುಲಾ ಕೂಡಾ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.