ಬನ್ನೇರುಘಟ್ಟದಲ್ಲಿ ಝೀಬ್ರಾ ಸಾವು

By Suvarna Web deskFirst Published Jul 25, 2017, 7:48 PM IST
Highlights

ಡಿಎಪ್ಓ ಮರ ನೆಡಲು ಗುಂಡಿ ತೆಗಿಸಿ ಮುಚ್ಚದೇ ಇರಿಸಿದ್ದರಿಂದ ಕಳೆದ ರಾತ್ರಿ ಗುಂಡಿಗೆ ಹಿಮ್ಮುಖವಾಗಿ ಬಿದ್ದು ಈ ಅವಗಢ ಸಂಭವಿಸಿದೆ

ಬೆಂಗಳೂರು(ಜು.25): ಅಧಿಕಾರಿಗಳ ನಿರ್ಲಕ್ಷ್ಯ'ದಿಂದಾಗಿ ಇಸ್ರೇಲ್'ನಿಂದ ತರಿಸಿದ್ದ ಹೆಣ್ಣು ಝೀಬ್ರಾ ಮೃತಪಟ್ಟಿರುವ  ಘಟನೆ ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ ನಲ್ಲಿ ನಡೆದಿದೆ.

2015 ನವೆಂಬರ್ ನಲ್ಲಿ ಇಸ್ರೇಲ್ ನಿಂದ ಝೀಬ್ರಾ'ವನ್ನು ತರಿಸಲಾಗಿತ್ತು.ಆರು ತಿಂಗಳ ಕಾಲ ಪ್ರತ್ಯೇಕವಾಗಿರಿಸಿ ನಂತರ ಪ್ರವಾಸಿಗರಿಗೆ ಪ್ರದರ್ಶನಕ್ಕೀಡಲಾಗಿತ್ತು. ಡಿಎಪ್ಓ ಮರ ನೆಡಲು ಗುಂಡಿ ತೆಗಿಸಿ ಮುಚ್ಚದೇ ಇರಿಸಿದ್ದರಿಂದ ಕಳೆದ ರಾತ್ರಿ ಗುಂಡಿಗೆ ಹಿಮ್ಮುಖವಾಗಿ ಬಿದ್ದು ಈ ಅವಗಢ ಸಂಭವಿಸಿದೆ. ಎರಡು ಗಂಡು ಮತ್ತು ಎರಡು ಹೆಣ್ಣು ಜಿಬ್ರಾಗಳನ್ನು ತರಿಸಲಾಗಿತ್ತು. ಈ ಝೀಬ್ರಾ ಗರ್ಭ ಧರಿಸಿತ್ತೇಂದು ಪಾರ್ಕ್‌ನ ಮೂಲಗಳಿಂದ ತಿಳಿದು ಬಂದಿದ್ದು, ಇದೀಗ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೃತಪಟ್ಟಿರುವುದು ಪ್ರಾಣಿ ಪ್ರಿಯರಲ್ಲಿ ಬೇಸರ ಮೂಡಿಸಿದೆ.

click me!