
ಬೆಂಗಳೂರು : ಚಾಮರಾಜಪೇಟೆಯಿಂದ ಕಾಂಗ್ರೆಸ್ ಪರ ನಾಮಪತ್ರ ಸಲ್ಲಿಸಿದ ಜಮೀರ್ ಅಹ್ಮದ್‌ಖಾನ್ ಈ ಬಾರಿಯೂ ಗೆಲ್ಲುತ್ತೇನೆ ಎಂದು ಎಚ್.ಡಿ. ದೇವೇಗೌಡರಿಗೆ ಸವಾಲು ಹಾಕಿದರು. ದೇವೇಗೌಡರು ನನ್ನ ವಿರುದ್ದ ಮುಸ್ಲೀಂ ಅಭ್ಯರ್ಥಿಯನ್ನೇ ಹಾಕಬೇಕು ಎಂದು ತೀರ್ಮಾನ ಮಾಡಿದ್ದಾರೆ.
ಹೀಗಾಗಿ ಅಲ್ತಾಫ್‌ಗೆ ಜೆಡಿಎಸ್ ಟಿಕೆಟ್ ನೀಡಿದ್ದಾರೆ. ಅಲ್ತಾಫ್ ಅಲ್ಲ. ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಅವರನ್ನೇ ಕರೆತಂದು ನಿಲ್ಲಿಸಿದರೂ ನನ್ನನ್ನು ಸೋಲಿಸಲು ಸಾಧ್ಯವೇ ಇಲ್ಲ ಎಂದರು. ಕೆ.ಆರ್. ಮಾರುಕಟ್ಟೆ ಬಳಿ ಇರುವ ಜಲಕಂಟೇಶ್ವರ ದೇವಸ್ಥಾನದಲ್ಲಿ ಜಮೀರ್ ಅಹ್ಮದ್‌ಖಾನ್ ಪೂಜೆ ಸಲ್ಲಿಸಿ ಮಾತನಾಡಿ, ಒಂದು ವೇಳೆ ಸೋತರೆ ನನ್ನ ತಲೆ ಕತ್ತರಿಸಿ ಮಾಧ್ಯಮದವರ ಕೈಗೆ ಕೊಡ್ತೀನಿ ದೇವೇಗೌಡರಿಗೆ ಬಹಿರಂಗ ಸವಾಲು ಹಾಕಿದರು.
ನೂರಕ್ಕೆ ನೂರು ನಾನೇ ಗೆಲ್ಲುತ್ತೇನೆ. ಅಲ್ತಾಫ್ ಈ ಹಿಂದೆಯೂ ನನ್ನ ವಿರುದ್ದ ಸ್ಪರ್ಧೆ ಮಾಡಿದ್ದರು. ಆಗ ಕೇವಲ 59 ಮತಗಳನ್ನು ಪಡೆದಿದ್ದರು ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.