
ತುಮಕೂರು(ಅ.08): ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹಮದ್ ಖಾನ್ ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಅವರಿಗೆ ಓಪನ್ ಚಾಲೆಂಜ್ ಹಾಕಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಸ್ಲಿಂ ಅಂದರೆ ಏನೆಂದು ತಿಳಿದುಕೊಂಡಿದ್ದೀರಾ’ ‘ಮುಸ್ಲಿಂ ಅಂದರೆ ಸುಮ್ಮನೆ ಅಲ್ಲ’ ‘ದೇವೇಗೌಡರ ಹೊರತಾಗಿ ಬೇರೆ ಯಾರಾದರೂ ನನ್ನ ವಿರುದ್ದ ಹೇಳಿಕೆ ಕೊಟ್ಟರೆ ಬಂಡವಾಳ ಕಳಚುತ್ತೇನೆ’. ‘ಜಮೀರ್ ಅಹಮದ್ ಖಾನ್ ಅಂತ ನನ್ನ ಹೆಸರು’ ‘ರೇವಣ್ಣನಿಗೆ ತಾಕತ್ತಿದ್ರೆ ಮುಂದಿನ ಚುನಾವಣೆಯಲ್ಲಿ ನನ್ನ ವಿರುದ್ದ ಸ್ಪರ್ಧಿಸಲಿ’ಎಂದು ಏಕವಚನದಲ್ಲೇ ಸವಾಲು ಹಾಕಿದರು.
‘ದೇವೇಗೌಡರು ನನ್ನ ರಾಜಕೀಯ ಗುರುಗಳು’. ‘ದೇವರಾಜುಗೆ ನಾನು ಟೋಪಿ ಹಾಕಿರೋದಾಗಿ ಎಚ್.ಡಿ.ರೇವಣ್ಣ ಹೇಳಿದ್ದಾರೆ’
‘ಆದರೆ ನಾನು ಯಾರಿಗೂ ಟೋಪಿ ಹಾಕಿಲ್ಲ’. ‘ಎಚ್.ಡಿ. ರೇವಣ್ಣ ಸ್ವತಃ ಕುಮಾರಸ್ವಾಮಿ ಅವರಿಗೇ ಟೋಪಿ ಹಾಕಿದ್ದಾರೆ’. ‘ಎಚ್ ಡಿ ರೇವಣ್ಣ ಸ್ವತಃ ಕುಮಾರಸ್ವಾಮಿ ಅವರಿಗೇ ಟೋಪಿ ಹಾಕಿದ್ದಾರೆ’. ‘ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರ ರಚಿಸಲು ಅಡ್ಡಗಾಲು ಹಾಕಿದರು’. ‘ಎಚ್ಡಿಕೆ ಮುಖ್ಯಮಂತ್ರಿಯಾದರೆ ದೇವೇಗೌಡರು ವಿಷ ಕುಡಿದು ಸಾಯ್ತಾರೆ ಎಂದಿದ್ರು’. ‘ಸರ್ಕಾರ ರಚನೆ ಆದ ನಂತರ ದೇವೇಗೌಡರಿಗೆ ಟೋಪಿ ಹಾಕಿದ್ರು' ಎಂದು ರೇವಣ್ಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಮೀರ್ ಎಂದೂ ಭಯ ಬೀಳೋನಲ್ಲ’
‘ರೇವಣ್ಣ ಅವರು ನಾಲಿಗೆ ಬಿಗಿ ಹಿಡಿದು ಮಾತನಾಡಲಿ’. ನನ್ನ ವಿರುದ್ಧ ಮಾತನಾಡಿದರೆ ಬಂಡವಾಳ ಬಿಚ್ತೀನಿ. ‘ಜಮೀರ್ ಎಂದೂ ಭಯ ಬೀಳೋನಲ್ಲ’. ಆಕ್ರೋಶ ಭರಿತವಾಗಿ ಎದೆತಟ್ಟಿ ಹೇಳಿದರು ಜಮೀರ್. ಜೆಡಿಎಸ್ ಒಂದು ಕೆರೆ, ಕಾಂಗ್ರೆಸ್ ಒಂದು ಸಮುದ್ರ ಎಂದು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್'ನಿಂದ ಸ್ಪರ್ಧಿಸುವುದಾಗಿ ಪರೋಕ್ಷವಾಗಿ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.