ಜಾಕಿರ್ ನಾಯ್ಕ್‌ನನ್ನು ಭಾರತಕ್ಕೆ ಕಳಸಲ್ವಂತೆ ಮಲೇಷ್ಯಾ ಪ್ರಧಾನಿ!

First Published Jul 6, 2018, 5:34 PM IST
Highlights

ಜಾಕಿರ್ ನಾಯ್ಕ್ ಗಡಿಪಾರಿಗೆ ಮಲೇಷ್ಯಾ ಪ್ರಧಾನಿ ನಕಾರ

ಜಾಕಿರ್‌ನನ್ನು ಭಾರತಕ್ಕೆ ಕಳುಹಿಸಲ್ಲ ಎಂದ ಮಹತಿರ್

ಭಾರತದ ಮನವಿಗೆ ಸ್ಪಂದಿಸದ ಮಲೇಷ್ಯಾ ಪ್ರಧಾನಿ

ನವದೆಹಲಿ(ಜು.6): ವಿವಾದಿತ ಇಸ್ಲಾಂ ಧರ್ಮ ಪ್ರಚಾರಕ ಜಾಕಿರ್ ನಾಯ್ಕ್‌ನನ್ನು ಭಾರತಕ್ಕೆ ಕಳಿಸುವುದಿಲ್ಲ ಎಂದು ಮಲೇಷ್ಯಾ ಪ್ರಧಾನಿ ಮಹತಿರ್ ಮೊಹಮ್ಮದ್ ಹೇಳಿದ್ದಾರೆ. 

ಜಾಕಿರ್ ನಾಯ್ಕ್‌ನನ್ನು ಮಲೇಷ್ಯಾದಿಂದ ಭಾರತಕ್ಕೆ ಗಡಿ ಪಾರು ಮಾಡಲಾಗಿದೆ ಎಂಬ ವರದಿಗಳು ಪ್ರಕಟವಾದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಮಲೇಷ್ಯಾ ಪ್ರಧಾನಿ ಮಹತಿರ್ ಮೊಹಮ್ಮದ್, ಯಾವುದೇ ಕಾರಣಕ್ಕೂ ಜಾಕಿರ್ ನಾಯ್ಕ್‌ನನ್ನು ಭಾರತಕ್ಕೆ ಕಳಿಸುವುದಿಲ್ಲ ಎಂದಿದ್ದಾರೆ.

ಇದಕ್ಕೂ ಮೊದಲು ಜಾಕಿರ್ ನಾಯ್ಕ್ ಭಾರತಕ್ಕೆ ಬರುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ತಮ್ಮ ವಿರುದ್ಧ ದಾಖಲಾಗಿರುವ ಸುಳ್ಳು ಮೊಕದ್ದಮೆಗಳು ರದ್ದುಗೊಂಡು ತಾನು ಸೇಫ್ ಎನಿಸುವವರೆಗೂ ಭಾರತಕ್ಕೆ ಬರುವುದಿಲ್ಲ ಎಂದು ಹೇಳಿದ್ದರು. ಜಾಕಿರ್ ನಾಯ್ಕ್ ವಿರುದ್ಧ ಅಕ್ರಮ ಹಣ ವರ್ಗಾವಣೆ, ದ್ವೇಷ ಭಾಷಣ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದ್ದು ಬಂಧನದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಮಲೇಷ್ಯಾಕ್ಕೆ ತೆರಳಿದ್ದಾರೆ.

click me!