ವಿವಾದಿತ ಧರ್ಮಪ್ರಚಾರಕ ಝಾಕಿರ್ ನಾಯ್ಕ್'ಗೆ ಸೌದಿ ಪೌರತ್ವ

By Suvarna Web DeskFirst Published May 20, 2017, 5:43 PM IST
Highlights

ಬಂಧನದ ಭೀತಿಯಿಂದಾಗಿ 51 ವರ್ಷದ ಝಾಕಿರ್ ನಾಯ್ಕ್ ಕಳೆದ ವರ್ಷವೇ ಭಾರತವನ್ನು ತೊರೆದಿದ್ದಾನೆ.

ನವದೆಹಲಿ(ಮೇ.20): ವಿವಾದಿತ ಇಸ್ಲಾಂ ಧರ್ಮ ಪ್ರಚಾರಕ ಝಾಕಿರ್‌ ನಾಯ್ಕ್'ಗೆ ಸೌದಿ ಅರೇಬಿಯಾ ತನ್ನ ದೇಶದ ಪೌರತ್ವ ನೀಡಿದೆ.

ಭಯೋತ್ಪಾದಕ ಕೃತ್ಯಗಳಿಗೆ ಸಂಬಂಧಿಸಿದಂತೆ ಇಂಟರ್‌'ಪೋಲ್‌ ಝಾಕಿರ್‌ ನಾಯ್ಕನನ್ನು ಬಂಧಿಸುವುದರಿಂದ ತಪ್ಪಿಸಲು ಸೌದಿ ಅರೇಬಿಯಾ ಮಧ್ಯಪ್ರವೇಶ ಮಾಡಿದೆ ಎಂದು ವರದಿಗಳು ತಿಳಿಸಿವೆ.

ಭಯೋತ್ಪಾದಕ ಕೃತ್ಯ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ಕೋರ್ಟ್‌ಗಳು ಜಾಕಿರ್‌ ನಾಯ್ಕ್'ಗೆ ಕಳೆದ ತಿಂಗಳು ಎರಡನೇ ಬಾರಿಗೆ ಅರೆಸ್ಟ್‌ ವಾರೆಂಟ್‌ ಜಾರಿ ಮಾಡಿದ್ದವು. 
ಬಂಧನದ ಭೀತಿಯಿಂದಾಗಿ 51 ವರ್ಷದ ಝಾಕಿರ್ ನಾಯ್ಕ್ ಕಳೆದ ವರ್ಷವೇ    ಭಾರತವನ್ನು ತೊರೆದಿದ್ದಾನೆ. ಭಾರತಕ್ಕೆ ಬರಲು ನಿರಾಕರಿಸಿದ್ದ ಝಾಕಿರ್‌ ನಾಯ್ಕ್ ಮಲೇಷ್ಯಾದಲ್ಲಿ ಉಳಿದುಕೊಂಡಿದ್ದ.

 

ಐದು ವರ್ಷಗಳ ಹಿಂದೆ ಮಲೇಷ್ಯಾ ಸರ್ಕಾರ ಆತನಿಗೆ ಶಾಶ್ವತ ನಿವಾಸದ ಸ್ಥಾನಮಾನ ಕಲ್ಪಿಸಿತ್ತು. 

 

click me!