ಯುವರಾಜ್ ಸಿಂಗ್ ಹೊಸ ಇನ್ನಿಂಗ್ಸ್: ಯುವಿ ವೆಡ್ಸ್ ಹೇಜಲ್ ಕೀಚ್

Published : Nov 30, 2016, 03:17 AM ISTUpdated : Apr 11, 2018, 12:50 PM IST
ಯುವರಾಜ್ ಸಿಂಗ್ ಹೊಸ ಇನ್ನಿಂಗ್ಸ್: ಯುವಿ ವೆಡ್ಸ್ ಹೇಜಲ್ ಕೀಚ್

ಸಾರಾಂಶ

ಭಾರತದ ಸ್ಫೋಟಕ ಬ್ಯಾಟ್ಸ್​​​​ಮನ್​​​​​ ಯುವರಾಜ್​​​ ಸಿಂಗ್​​​​ ಬಾಲಿವುಡ್​​​​​ನ ಹೇಜಲ್​​ ಕೀಚ್​​​​​​​ರೊಂದಿಗೆ ಇಂದು ಹಸೆಮಣೆ ಏರುತ್ತಿದ್ದಾರೆ. ನಿನ್ನೆ ನವ ಜೋಡಿ ಛಂಡೀಘಡದ ಖಾಸಗಿ ಹೊಟೆಲ್​​​​​​'ನಲ್ಲಿ ಮೆಹಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ರು. ಇಂಗ್ಲೆಂಡ್​​​​ ಆಟಗಾರರು ಮೆಹಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನವ ಜೋಡಿಗಳಿಗೆ ಶುಭ ಹಾರೈಸಿದರು.

ಭಾರತದ ಸ್ಫೋಟಕ ಬ್ಯಾಟ್ಸ್​​​​ಮನ್​​​​​ ಯುವರಾಜ್​​​ ಸಿಂಗ್​​​​ ಬಾಲಿವುಡ್​​​​​ನ ಹೇಜಲ್​​ ಕೀಚ್​​​​​​​ರೊಂದಿಗೆ ಇಂದು ಹಸೆಮಣೆ ಏರುತ್ತಿದ್ದಾರೆ. ನಿನ್ನೆ ನವ ಜೋಡಿ ಛಂಡೀಘಡದ ಖಾಸಗಿ ಹೊಟೆಲ್​​​​​​'ನಲ್ಲಿ ಮೆಹಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ರು. ಇಂಗ್ಲೆಂಡ್​​​​ ಆಟಗಾರರು ಮೆಹಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನವ ಜೋಡಿಗಳಿಗೆ ಶುಭ ಹಾರೈಸಿದರು.

ಗೃಹಸ್ಥಾಶ್ರಮಕ್ಕೆ ಕಾಲಿಡುತ್ತಿರುವ ಯುವಿ​​​​​​​: ಇಂದು ಯುವರಾಜ್ ಸಿಂಗ್ ಮದುವೆ

ಸ್ಪೋಟಕ ಹೊಡೆತಗಳಿಂದ ಮನೆಮಾತಾಗಿರುವ ಯುವಿ ಈಗ ಹೊಸ ಇನ್ನಿಂಗ್ಸ್​​​​​ ಆರಂಭಿಸಲು ರೆಡಿಯಾಗಿದ್ದಾರೆ. ಮೈದಾನದಲ್ಲಿ ಬೌಂಡರಿ ಸಿಕ್ಸ್​​​ೡಗಳಿಂದ ಕೋಟ್ಯಂತರ ಅಭಿಮಾನಿಗಳ ಮನಗೆದ್ದಿದ್ದ ಯುವಿ, ಮನಸ್ಸನ್ನ ಕದ್ದಿರುವ ಬಾಲಿವುಡ್​​​ ನಟಿ ಹೇಜಲ್​​​​ ಕೀಚ್​​. ಇಂದು ಸಪ್ತಪದಿ ತುಳಿಯಲಿದ್ದಾರೆ.

ತಮ್ಮ ಬಹು ದಿನಗಳ ಗೆಳತಿ ಬಾಲಿವುಡ್​​​​ ನಟಿ, ಬ್ರಿಟೀಷ್​​​​​ ಸುಂದರಿ ಹೇಜಲ್​​​​ ಕೀಚ್​​​​ನೊಂದಿಗೆ ಯುವಿ ಇಂದು ಚಂಡೀಘಡದ ಫತೇಘರ್ ಸಾಹಿಬ್ ಗುರುದ್ವಾರದಲ್ಲಿ ಸಿಖ್​​​​​ ಸಂಪ್ರದಾಯದಂತೆ ತಾಳಿ ಕಟ್ಟುವ ಶಾಸ್ತ್ರ ನಡೆಯಲಿದೆ. ಅದಕ್ಕಾಗಿ ಈಗಾಗಲೇ ಭರ್ಜರಿ ತಯಾರಿ ಕೂಡ ನಡೆದಿದೆ.  ಸಮಾರಂಭದಲ್ಲಿ ಪ್ರಧಾನಿ ನರೆಂದ್ರ ಮೋದಿ ಸೇರಿದಂತೆ ಟೀಂ ಇಂಡಿಯಾದ ಮಾಜಿ ಹಾಗೂ ಹಾಲಿ ಆಟಗಾರರು ಉಪಸ್ಥಿತಿರಿದ್ದು, ಯುವ ಜೋಡಿಗೆ ಶುಭ ಹಾರೈಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ನವ ಜೋಡಿ ನಿನ್ನೆ ಛಂಡೀಘಡದ ಖಾಸಗಿ ಹೊಟೆಲ್​​​​​​'ನಲ್ಲಿ ಮೆಹಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ರು. ವಧು ವರರ ಸಂಬಂಧಿಗಳೂ ಕಾಯ್ಕ್ರಮದಲ್ಲಿ ಪಾಲ್ಗೊಂಡಿದ್ರು. ಸದ್ಯ ಭಾರತದಲ್ಲಿ ಟೆಸ್ಟ್​​​ ಸರಣಿಯಲ್ಲಿ ಪಾಲ್ಗೊಂಡಿರುವ ಇಂಗ್ಲೆಂಡ್​​​​ ಆಟಗಾರರು ಸಹ ಮೆಹಂದಿ ಕಾರ್ಯಕ್ರಮದಲ್ಲಿ ಹಾಜರಾಗಿ ನವ ಜೋಡಿಗಳಿಗೆ ಶುಭ ಹಾರೈಸಿದ್ರು.

ಇವತ್ತಿನ ಶಾಸ್ತ್ರ ಮುಗಿದ ನಂತರ ಡಿಸೆಂಬರ್​​​​​​​ 2ರಂದು ಗೋವಾದಲ್ಲಿ ತಮ್ಮ ತಾಯಿಯ ಇಚ್ಚೆಯಂತೆ ಹಿಂದು ಸಂಪ್ರದಾಯದ ಪ್ರಕಾರ ಮದುವೆ ಶಾಸ್ತ್ರ ನೆರವೇರಲಿದೆ. ನಂತರ ಡಿಸೆಂಬರ್ 5ಕ್ಕೆ ವಾಣಿಜ್ಯ ನಗರಿ ಮುಂಬೈಯಲ್ಲಿ ಆರತಕ್ಷತೆ ನಡೆಯಲಿದ್ದು ಅಂದು ಗಣ್ಯಾತಿಗಣ್ಯರಿಗೆ ಆಹ್ವಾನ ನೀಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರೈಲ್ವೆ ಪರಿಷ್ಕೃತ ದರ ಇಂದಿನಿಂದ ಜಾರಿಗೆ
ದರ್ಶನ್ ಪತ್ನಿ ವಿಜಯಲಕ್ಷ್ಮೀ ನಿಂದನೆ ಪ್ರಕರಣ: ನಕಲಿ ಖಾತೆಗಳ ಮಾಹಿತಿ ಕೋರಿ ಮೆಟಾಗೆ ಸಿಸಿಬಿ ಪತ್ರ