ಯುವಕನೋರ್ವ ಮದಕರಿ ನಾಯಕ ಪ್ರತಿಮೆ ಮೇಲೇರಿ ಕುಳಿತು ಅವಮಾನಗೊಳಿಸಿದ್ದಾನೆ. ಎಲ್ಲಿ? ಏನಿದ ಘಟನೆ? ಇಲ್ಲಿದೆ ವಿವರ
ಚಿತ್ರದುರ್ಗ, (ಅ.30) : ಯುವಕನೋರ್ವ ಮದಕರಿ ನಾಯಕ ಪ್ರತಿಮೆ ಮೇಲೇರಿ ಕುಳಿತು ಅವಮಾನಗೊಳಿಸಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಚಿತ್ರದುರ್ಗ ನಗರದಲ್ಲಿರುವ ಮದಕರಿ ನಾಯಕ ಪ್ರತಿಮೆ ಪ್ರತಿಮೆಗೆ ಹೂಮಾಲೆ ಹಾಕಲು ಹೋದಾಗ ಮದಕರಿ ಕುದುರೆ ಮೇಲೆ ಕುಳಿತು ಫೋಟೋಗೆ ಫೋಸ್ ಕೊಟ್ಟಿದ್ದಾನೆ.
ಮದಕರಿ ಕುದುರೆ ಮೇಲೆ ಕುಳಿತು ಫೋಟೋ ಕ್ಲಿಕ್ಕಿಸಿಕೊಂಡ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದ್ದು, ಇದಕ್ಕೆ ಆಕ್ರೋಶಗಳು ಸಹ ವ್ಯಕ್ತವಾಗಿವೆ.
ಫೋಟೋಗೆ ಫೋಸ್ ಕೊಟ್ಟ ಯುವಕನ ವಿರುದ್ಧ ತಕ್ಷಣವೇ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲದೇ ಪ್ರತಿಮೆ ಬಳಿಗೆ ತೆರಳಲು ಮೆಟ್ಟಿಲು ಅಳವಡಿಸಿದ್ದಕ್ಕೆ ಆಕ್ರೋಶಗೊಂಡಿದ್ದಾರೆ.
ನಾಯಕರ ಪ್ರತಿಮೆ, ಮೂರ್ತಿ, ಭಾವಚಿತ್ರಗಳಿಗೆ ಸೂಕ್ತ ರಕ್ಷಣೆ ನೀಡುವಂತೆ ಕೆಲವರು ಸಾಮಾಜಿಕ ಜಾಲತಾಣ ಮೂಲಕ ಮನವಿ ಮಾಡಿದ್ದು, ಮದಕರಿ ನಾಯಕ ಪ್ರತಿಮೆ ಬಳಿ ಅಳವಡಿಸಿರುವ ಮೆಟ್ಟಿಲು ತೆರವಿಗೆ ಆಗ್ರಹಿಸಿದ್ದಾರೆ.