
ನವದೆಹಲಿ(ಡಿ.9): `ವಂದೇ ಮಾತರಂ ಗೀತೆ ತಾಯಿಗೆ ಸಲ್ಲಿಸುವ ಗೌರವವಾಗಿದೆ. ಅದರೊಂದಿಗೆ ನಿಮಗಿರುವ ಸಮಸ್ಯೆಯಾದರೂ ಏನು? ನಿಮ್ಮ ತಾಯಿಗೆ ಸಲ್ಯೂಟ್ ಮಾಡದಿದ್ದರೆ, ಇನ್ಯಾರಿಗೆ ಗೌರವ ನಮನ ಸಲ್ಲಿಸುತ್ತೀರಿ.
ಸಂಸತ್ತಿನ ಮೇಲೆ ದಾಳಿಗೈದ ಅಫಜಲ್ ಗುರುವಿಗೆ ಪ್ರಣಾಮ ಸಲ್ಲಿಸುವಿರಾ?,' ಹೀಗೆಂದು ವಂದೇ ಮಾತರಂ ವಿರೋಧಿಸುವವರನ್ನು ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಖಾರವಾಗಿ ಪ್ರಶ್ನಿಸಿದ್ದಾರೆ.
ಶುಕ್ರವಾರ ಇಲ್ಲಿ ಹಮ್ಮಿಕೊಳ್ಳಲಾದ ದಿ. ಅಶೋಕ್ ಸಿಂಘಾಲ್ ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, `ಭಾರತ್ ಮಾತಾ ಕೀ ಜೈ ಎಂದರೆ, ಅಖಂಡ ಭಾರತಕ್ಕೆ ಗೌರವ ಸಲ್ಲಿಸಿದಂತೆ,' ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.