ನೀವು ನೋಟ್ ಬಂದ್ ಮಾಡಿದರೆ ಜನ ನಿಮ್ಮನ್ನು ವೋಟಿನಲ್ಲಿ ಬಂದ್ ಮಾಡುತ್ತಾರೆ : ಮೋದಿಗೆ ದೀದಿ ಎಚ್ಚರಿಕೆ

By Suvarna web DeskFirst Published Nov 29, 2016, 11:15 AM IST
Highlights

ಹೆಚ್ಚು ಮುಖಬೆಲೆಯ ನೋಟುಗಳನ್ನು ನಿಷೇಧಿಸಿರುವ ಮೋದಿಯವರ ಕ್ರಮವನ್ನು ಖಂಡಿಸುತ್ತಾ  ಇದೊಂದು ಕಪ್ಪು ತುರ್ತು ಪರಿಸ್ಥಿತಿ ಎಂದು ಪ.ಬಂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಲಕ್ನೋ (ನ.29): ಹೆಚ್ಚು ಮುಖಬೆಲೆಯ ನೋಟುಗಳನ್ನು ನಿಷೇಧಿಸಿರುವ ಮೋದಿಯವರ ಕ್ರಮವನ್ನು ಖಂಡಿಸುತ್ತಾ  ಇದೊಂದು ಕಪ್ಪು ತುರ್ತು ಪರಿಸ್ಥಿತಿ ಎಂದು ಪ.ಬಂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರಿಗೆ ಶೀಘ್ರದಲ್ಲಿಯೇ ಹೊರ ಹೋಗುವ ದಾರಿಯನ್ನು ದೇಶದ ಜನತೆ ತೋರಿಸಲಿದೆ ಎಂದು ದೀದಿ ಗುಡುಗಿದ್ದಾರೆ.

“ದೇಶದಲ್ಲಿ ಆರ್ಥಿಕತೆ ತಗ್ಗಿದೆ. ಜಿಡಿಪಿ ನಷ್ಟದಲ್ಲಿದೆ. ಹಣದ ಅಮಾನ್ಯವು ಕಪ್ಪುಹಣದ ವಿರುದ್ಧ ಹೋರಾಟವಲ್ಲ. ಬದಲಿಗೆ ಇದು ಕಪ್ಪು ತುರ್ತುಪರಿಸ್ಥಿತಿ. ಇದರಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಕೆಲವು ಹಳ್ಳಿಗಳಲ್ಲಿ ಬ್ಯಾಂಕುಗಳ ಸೌಲಭ್ಯವಿಲ್ಲ. ಜನರು ಹೇಗೆ ಬದುಕಬೇಕು? ನಿಮಗೆ ಚೆಕ್ ಗಳಲ್ಲಿ ವೇತನ ಪಡೆದರೆ ದಿನ ನಿತ್ಯದ ಖರ್ಚುಗಳಿಗೆ ಏನು ಮಾಡಬೇಕು ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.

ನೀವು ‘ನೋಟ್ ಬಂಧಿ’ಯನ್ನು ಮಾಡಿದ್ದೀರಿ. ಜನರು ನಿಮಗೆ ವೋಟ್ ಬಂಧಿ ಮಾಡಲಿದ್ದಾರೆ ಎಂದು ಮಮತಾ ಬ್ಯಾನರ್ಜಿ ಮೋದಿಯವರಿಗೆ ಎಚ್ಚರಿಕೆ ನೀಡಿದ್ದಾರೆ.    

click me!