ಈತ ಮೋದಿಗಿಂತಲೂ ಪವರ್ಫುಲ್ ನಾಯಕ :ಬಿಜೆಪಿ ಗೆದ್ದರೆ ಆತನೇ ಪ್ರಧಾನಿ?

Published : May 30, 2017, 11:20 PM ISTUpdated : Apr 11, 2018, 12:46 PM IST
ಈತ ಮೋದಿಗಿಂತಲೂ ಪವರ್ಫುಲ್ ನಾಯಕ :ಬಿಜೆಪಿ ಗೆದ್ದರೆ ಆತನೇ ಪ್ರಧಾನಿ?

ಸಾರಾಂಶ

ಇಂಥದ್ದೊಂದು ಸುದ್ದಿ ಇದೀಗ ಕೇಳಿ ಬರುತ್ತಿದೆ. ದೇಶಾದ್ಯಂತ ಮೋದಿ ಹವಾ ಇನ್ನೂ ಇದೆ. ಮೋದಿ ಹೋದಲ್ಲೆಲ್ಲಾ ಜನ ಕಿಕ್ಕಿರಿದು ಸೇರ್ತಾರೆ. ಮೋದಿ ಮೋದಿ ಅಂತ ಕೂಗ್ತಾ ಇರ್ತಾರೆ. ಮೋದಿ ನೋಟ್​ ಬ್ಯಾನ್ ಮಾಡಿದ್ರು. ಸರ್ಜಿಕಲ್​ ದಾಳಿ ಮೂಲಕ ಪಾಕಿಸ್ತಾನಕ್ಕೆ ತಕ್ಕ ತಿರುಗೇಟು ಕೊಟ್ರು. ವಿಶ್ವಮಟ್ಟದಲ್ಲಿ ಭಾರತದ ವರ್ಚಸ್ಸು ಹೆಚ್ಚಿಸಿದ್ರು. ಭ್ರಷ್ಟರನ್ನು ಬಗ್ಗು ಬಡೀತಿದ್ದಾರೆ. ಹೀಗಾಗಿ ಮುಂದಿನ ಸಲಾನೂ ಮೋದಿನೇ ಪ್ರಧಾನಿಯಾಗಿ ಇರಬೇಕು ಅಂತ ಬಹುತೇಕರು ಇಚ್ಛೆ ಪಡ್ತಿದ್ದಾರೆ. ಆದರೆ ಬಿಜೆಪಿಯಲ್ಲಿ ಮತ್ತೊಬ್ಬ ಪವರ್​ಫುಲ್ ಲೀಡರ್​ ಹುಟ್ಟಿಕೊಂಡಿದ್ದಾರೆ. ಆ ಲೀಡರ್​​ ಮೋದಿಗಿಂತಲೂ ಪವರ್​​ಫುಲ್ಲಾಗಿ ಬೆಳೀತ್ತಿದ್ದಾರೆ. ಅವರ ಏಳಿಗೆಯನ್ನ ನೋಡ್ತಾ ಇದ್ರೆ, ಮೋದಿಯನ್ನೂ ಮೀರಿಸಬಹುದು ಅನ್ನೋ ಮಾತುಗಳೂ ಕೇಳಿ ಬರ್ತಿವೆ. ಅಂದ್ಹಾಗೆ ಮೋದಿಗಿಂತಲೂ ಪ್ರಖರವಾಗಿ ಬೆಳೀತಾ ಇರೋ ಬಿಜೆಪಿಯ ಸೆಕೆಂಡ್​ ಹೀರೋ ಯಾರು ಗೊತ್ತಾ?

ನರೇಂದ್ರ ಮೋದಿ, ಭಾರತ ಕಂಡ ಅಗ್ರೆಸ್ಸಿವ್ ನಾಯಕ. ದೇಶದ ಪ್ರಧಾನಿಯಾಗಿ ವಿಶ್ವ ಮಟ್ಟದಲ್ಲಿ ಭಾರತವನ್ನು ಬಲಿಷ್ಠಗೊಳಿಸುತ್ತಿರುವ ಜನ ಸೇವಕ.  ಮೋದಿ ಮಾತಿನ ಮೋಡಿಗಾರ. ಎದುರಾಳಿಗಳನ್ನ ಮಾತಿನಲ್ಲೇ ಕಟ್ಟ ಹಾಕಬಲ್ಲ ಚಾಣಕ್ಯ. ಮೋದಿ ಚತುರ ವಾಗ್ಮಿಯಾಗಿರೋದ್ರಿಂದಲೇ ಕಾಂಗ್ರೆಸ್​ ಪಕ್ಷವನ್ನ ಧೂಳೀಪಟ ಮಾಡಿ ಕಮಲವನ್ನ ಅರಳಿಸಿದರು.

ಮೋದಿ ಅಧಿಕಾರಕ್ಕೆ ಬಂದು 3 ವರ್ಷಗಳು ಕಳೆದಿವೆ. ಈಗ ನಾಲ್ಕನೇ ವರ್ಷಕ್ಕೆ ಕಾಲಿಟ್ಟಿದೆ ಮೋದಿ ಸರ್ಕಾರ. 2019ರಲ್ಲಿ ಎಲೆಕ್ಷನ್​ ಕೂಡ ಬರುತ್ತೆ. ಆಗಲೂ ಬಿಜೆಪಿನೆ ಅಧಿಕಾರಕ್ಕೆ ಬರೋ ಸಾಧ್ಯತೆ ಇದೆ. ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದಿದ್ದೇ ಆದರೆ, ಮೋದಿಯೇ ಪ್ರಧಾನಿ ಆಗಿ ಮುಂದುವರಿಯಲಿದ್ದಾರೆ ಅನ್ನೋ ಮಾತುಗಳೂ ಕೇಳಿ ಬಂದಿವೆ. ಆದರೆ ಒಂದಷ್ಟು ಜನ ಬೇರೆಯದ್ದೇ ಮಾತುಗಳನ್ನಾಡ್ತಿದ್ದಾರೆ. 2019ರ ಚುನಾವಣೆಯಲ್ಲಿ ಬಿಜೆಪಿ ಗೆದ್ದರೇ ಮೋದಿ ಪ್ರಧಾನಿ ಆಗೋ ಸಾಧ್ಯತೆ ಕಡಿಮೆ ಇದೆ. ಯಾಕಂದರೆ ಬಿಜೆಪಿಯಲ್ಲಿ ಮೋದಿಗಿಂತಲೂ ಪವರ್​​ಫುಲ್ ನಾಯಕ​ ಉದಯಿಸಿದ್ದಾನೆ. ಆತನೇ ಮುಂದಿನ ಪ್ರಧಾನಿಯಾಗೋ ಸಾಧ್ಯತೆ ಇದೆ ಅಂತ ಹೇಳಲಾಗುತ್ತಿದೆ. ಒಂದು ವೇಳೆ ಈ ಒಳಸಂಚು ನಿಜವಾಗಿದ್ದೇ ಆದರೆ, 2019ರಲ್ಲಿ ಮೋದಿ ಪ್ರಧಾನಿಯಾಗಿರಲ್ಲ.

ಇಂಥದ್ದೊಂದು ಸುದ್ದಿ ಇದೀಗ ಕೇಳಿ ಬರುತ್ತಿದೆ. ದೇಶಾದ್ಯಂತ ಮೋದಿ ಹವಾ ಇನ್ನೂ ಇದೆ. ಮೋದಿ ಹೋದಲ್ಲೆಲ್ಲಾ ಜನ ಕಿಕ್ಕಿರಿದು ಸೇರ್ತಾರೆ. ಮೋದಿ ಮೋದಿ ಅಂತ ಕೂಗ್ತಾ ಇರ್ತಾರೆ. ಮೋದಿ ನೋಟ್​ ಬ್ಯಾನ್ ಮಾಡಿದ್ರು. ಸರ್ಜಿಕಲ್​ ದಾಳಿ ಮೂಲಕ ಪಾಕಿಸ್ತಾನಕ್ಕೆ ತಕ್ಕ ತಿರುಗೇಟು ಕೊಟ್ರು. ವಿಶ್ವಮಟ್ಟದಲ್ಲಿ ಭಾರತದ ವರ್ಚಸ್ಸು ಹೆಚ್ಚಿಸಿದ್ರು. ಭ್ರಷ್ಟರನ್ನು ಬಗ್ಗು ಬಡೀತಿದ್ದಾರೆ. ಹೀಗಾಗಿ ಮುಂದಿನ ಸಲಾನೂ ಮೋದಿನೇ ಪ್ರಧಾನಿಯಾಗಿ ಇರಬೇಕು ಅಂತ ಬಹುತೇಕರು ಇಚ್ಛೆ ಪಡ್ತಿದ್ದಾರೆ. ಆದರೆ ಬಿಜೆಪಿಯಲ್ಲಿ ಮತ್ತೊಬ್ಬ ಪವರ್​ಫುಲ್ ಲೀಡರ್​ ಹುಟ್ಟಿಕೊಂಡಿದ್ದಾರೆ. ಆ ಲೀಡರ್​​ ಮೋದಿಗಿಂತಲೂ ಪವರ್​​ಫುಲ್ಲಾಗಿ ಬೆಳೀತ್ತಿದ್ದಾರೆ. ಅವರ ಏಳಿಗೆಯನ್ನ ನೋಡ್ತಾ ಇದ್ರೆ, ಮೋದಿಯನ್ನೂ ಮೀರಿಸಬಹುದು ಅನ್ನೋ ಮಾತುಗಳೂ ಕೇಳಿ ಬರ್ತಿವೆ. ಅಂದ್ಹಾಗೆ ಮೋದಿಗಿಂತಲೂ ಪ್ರಖರವಾಗಿ ಬೆಳೀತಾ ಇರೋ ಬಿಜೆಪಿಯ ಸೆಕೆಂಡ್​ ಹೀರೋ ಯಾರು ಗೊತ್ತಾ?

ಯೋಗಿ ಆದಿತ್ಯನಾಥ್​​.. ಉತ್ತರ ಪ್ರದೇಶದ ಮುಖ್ಯಮಂತ್ರಿ. ಇಷ್ಟು ದಿನ ಯೋಗಿ ಅಂದ್ರೆ ಯಾರು ಅಂತಾನೂ ಗೊತ್ತಿರಲಿಲ್ಲ. ಆದ್ರೀಗ ಇಡೀ ದೇಶವೇ ಯೋಗಿ ಯೋಗಿ ಅಂತಿದೆ. ಮೋದಿ ಮೋದಿ ಅಂತಿದ್ದ ಜನರೂ ಇತ್ತೀಚಿನ ದಿನಗಳಲ್ಲಿ ಯೋಗಿ ಯೋಗಿ ಅನ್ನೋ ಮಟ್ಟಕ್ಕೆ ಬದಲಾಗಿದ್ದಾರೆ. ಯೋಗಿ ಅದಿಕಾರಕ್ಕೆ ಬಂದಿದ್ದು ಕೆಲವೇ ದಿನಗಳಾದ್ರೂ, ಅಲ್ಪಾವಧಿಯಲ್ಲೇ ದೇಶದ ಗಮನ ಸೆಳೆದಿದ್ದಾರೆ ಯೋಗಿ. ಮೋದಿಗಿಂತಲೂ ಪವರ್​ಫುಲ್ಲಾಗಿ ಬೆಳೆದು ನಿಂತಿರೋ ಯೋಗಿ ಆದಿತ್ಯನಾಥ್​ ಮುಂದಿನ ಪ್ರಧಾನಿಯಾದ್ರೂ ಅಚ್ಚರಿ ಇಲ್ಲ ಅನ್ನೋ ಮಾತುಗಳೂ ಕೇಳಿ ಬಂದಿವೆ.

2014ರ ಚುನಾವಣೆ ಟೈಮಲ್ಲಿ ಇಡೀ ದೇಶವೇ ಮೋದಿಮಯವಾಗಿತ್ತು. ಆದರೆ ಕಾಲಾನಂತರದಲ್ಲಿ ಬಿಜೆಪಿ ಮುಖಂಡರು ಮತ್ತು ಆರ್​​ಎಸ್​ಎಸ್​ ನಾಯಕರಿಗೆ ಮೋದಿ ಮೇಲಿನ ಒಲವು ಕಡಿಮೆಯಾಯ್ತು ಅಂತ ಹೇಳಲಾಗುತ್ತಿದೆ. ಉತ್ತರ ಪ್ರದೇಶದ ಚುನಾವಣೆ ಟೈಮಲ್ಲಿ ಮೋದಿಯನ್ನೇ ಬದಿಗೊತ್ತಿದ ಆರ್​ಎಸ್​ಎಸ್​ ಮತ್ತು ಬಿಜೆಪಿ ನಾಯಕರು ಅಲ್ಲಿನ ಚಿತ್ರಣವನ್ನೇ ಬದಿಲಿಸಿ ಬಿಟ್ಟಿದ್ರು. ಮೋದಿ ಮತ್ತು ತಂಡ ಯುಪಿ ಬಿಜೆಪಿ ರಾಜ್ಯಾಧ್ಯಕ್ಷ ಕೇಶವ ಪ್ರಸಾದ್ ಮೌರ್ಯ ಅವ್ರನ್ನ ಸಿಎಂ ಮಾಡಬೇಕು ಅನ್ನೋ ಆಲೋಚನೆಯಲ್ಲಿತ್ತು. ಕೇಂದ್ರದಲ್ಲಿ ಹಿಡಿತ ಹೊಂದಿದ್ದ ಮನೋಜ್​ ಸಿನ್ಹಾ ಅಥವಾ ಮೋದಿ ಆಪ್ತ ಮತ್ತು ಕೇಂದ್ರ ಸಚಿವ ರಾಜನಾಥ್​ ಸಿಂಗ್​ ಅಥವಾ ಸಚಿವೆ ಉಮಾಭಾರತಿ. ಇವರಲ್ಲಿ ಯಾರಾದ್ರೂ ಒಬ್ಬರು ಯುಪಿ ಸಿಎಂ ಆಗಬಹುದು ಅಂತ ಎಲ್ಲರು ಆಲೋಚಿಸ್ತಿದ್ರು. ಆದರೆ ಇವರೆಲ್ಲರ ಬದಲಿಗೆ ಯುಪಿ ಸಿಎಂ ಕುರ್ಚಿಯಲ್ಲಿ ಬಂದು ಕೂತಿದ್ದು ಯೋಗಿ ಆದಿತ್ಯನಾಥ್​.

ಮೋದಿ ಮತ್ತು ತಂಡದ ಆಯ್ಕೆಯನ್ನ ಬದಿಗೊತ್ತಿದ್ದ ಆರ್​​ಎಸ್​​ಎಸ್​ ಮತ್ತು ಕೆಲ ಬಿಜೆಪಿ ನಾಯಕರು ಯೋಗಿ ಆದಿತ್ಯನಾಥ್​​ ಬೆಂಬಲಕ್ಕೆ ನಿಂತ್ರು. ಕಟು ಹಿಂದೂವಾದಿಯಾಗಿರೋ ಯೋಗಿಯನ್ನ ಸಿಎಂ ಮಾಡಬೇಕು ಅಂತ ಪಟ್ಟು ಹಿಡಿದ್ರು. ಪರಿಣಾಮ ಎಲ್ಲೋ ಮೂಲೆಯಲ್ಲಿದ್ದ ಯೋಗಿ ಆದಿತ್ಯನಾಥ್​ ಉತ್ತರ ಪ್ರದೇಶದ ಸಿಎಂ ಆದ್ರು. ಈಗ ಇದೇ ಯೋಗಿ ಆದಿತ್ಯನಾಥ್​​, ಭಾರತದ ಪ್ರಬಲ ನಾಯಕನಾಗಿ ಬೆಳೆದು ನಿಂತಿದ್ದಾರೆ. ಮೋದಿಗಿಂತಲೂ ಹೆಚ್ಚು ವರ್ಚಸ್ಸನ್ನ ಪಡೀತಿದ್ದಾರೆ. ಯಾವ ಮಟ್ಟಕ್ಕೆ ಅಂದ್ರೆ, ಇವರನ್ನೇ ಮುಂದಿನ ಪ್ರಧಾನಿ ಮಾಡಬೇಕು ಅನ್ನೋ ಆಲೋಚನೆಗಳು ಕೆಲವರಲ್ಲಿ ಶುರುವಾಗಿವೆ ಅಂತ ಹೇಳಲಾಗುತ್ತಿದೆ.

ಮೂರು ವರ್ಷದಿಂದ ಮೋದಿ ಸರ್ಕಾರ ಆಳ್ವಿಕೆಯಲ್ಲಿದೆ. ಆದರೆ ಒಂದು ವಿಷಯವನ್ನ ಮೋದಿ ಮರೆತೇ ಬಿಟ್ಟಿದ್ರು. ಮೋದಿ ಮರೆತ್ತಿದ್ದ ಆ ಕೆಲಸವನ್ನು ಯೋಗಿ ಕೆಲವೇ ದಿನಗಳಲ್ಲಿ ಮಾಡಿ ಮುಗಿಸಿದ್ದರು. ಇದು ಯೋಗಿ ವರ್ಚಸ್ಸು ಹೆಚ್ಚಾಗುವಂತೆ ಮಾಡಿದೆ.

ಮೋದಿಗಿಂತಲೂ ಬಲಿಷ್ಠ ನಾಯಕರಾಗುತ್ತಿದ್ದಾರೆ ಯೋಗಿ.

ಮೋದಿ ಅಧಿಕಾರಕ್ಕೆ ಬಂದು ಮೂರು ವರ್ಷಗಳೇ ಕಳೆದಿವೆ. ಆದರೆ ಜನರಿಗೆ ಕೊಟ್ಟ ಕೆಲವು ಭರವಸೆಗಳನ್ನ ಮೋದಿ ಈಡೇರಿಸುವಲ್ಲಿ ನಿಧಾನಗತಿ ಧೋರಣೆ ತಾಳಿದ್ರು. ಆದ್ರೆ ಕಠು ಹಿಂದೂವಾದಿಯಾಗಿರೋ ಯೋಗಿ ಆದಿತ್ಯನಾಥ್​, ಉತ್ತರ ಪ್ರದೇಶದ ಸಿಎಂ ಆಗ್ತಿದ್ದಂತೆ, ಕಠಿಣ ಕಾನೂನುಗಳನ್ನ ಜಾರಿಗೊಳಿಸಿದ್ರು.. ಸದಾ ಗಲಭೆಗಳಿಂದಲೇ ಸದ್ದು ಮಾಡ್ತಿದ್ದ ಯುಪಿನಲ್ಲಿ, ಎಲ್ಲವನ್ನೂ ಹತೋಟಿಗೆ ತಂದರು. ಬಾಲ ಬಿಚ್ತಿದ್ದ ಕ್ರಿಮಿ ಕೀಟಗಳನ್ನ ಹೊಸಕಿ ಹಾಕಿದ್ರು. ಇಷ್ಟೇ ಅಲ್ಲ. ಮುಂದೆ ಇನ್ನೂ ಇದೆ ವೇಯ್ಟ್ ಮಾಡಿ ಅಂತಾನೂ ಹೇಳಿದ್ರು.

ಉತ್ತರ ಪ್ರದೇಶದಲ್ಲಿ ಭ್ರಷ್ಟರ ಬೇಟೆ ನಡೆಯಲಿದೆ. ದುಷ್ಟ ಸಂಹಾರ ನಡೆಯಲಿದೆ ಅಂತ ಖಡಕ್ಕಾಗಿ ಸದನದಲ್ಲೇ ಘರ್ಜಿಸಿದ್ರು ಯೋಗಿ. ಇದಾದ ಕೆಲವೇ ದಿನಗಳಲ್ಲಿ ಆ್ಯಂಟಿ ರೋಮಿಯೋ ಪಡೆ ಬೀದಿಗಿಳಿದಿತ್ತು. ಹೆಣ್ಣುಮಕ್ಕಳ ಪಾಲಿಗೆ ಕೀಚಕರಾಗಿ ಕಾಡ್ತಿದ್ದವರನ್ನ ಬಗ್ಗು ಬಡಿದಿತ್ತು. ಆ್ಯಂಟಿ ರೋಮಿಯೋ ಪಡೆ ಬೀದಿ ಕಾಮಣ್ಣರ ಕಾಟಕ್ಕೆ ಬ್ರೇಕ್ ಹಾಕಿತ್ತು. ಯೋಗಿಯ ಈ ನಿರ್ಧಾರ ಅಪಾರ ಜನಮೆಚ್ಚುಗೆ ಗಳಿಸಿತ್ತು. ಇದರ ಜೊತೆಯಲ್ಲೇ, ಯೋಗಿ ಕೈಗೆತ್ತಿಕೊಂಡ ಮಹತ್ತರ ನಿರ್ಧಾರ ಅಂದರೆ ಅಕ್ರಮ ಕಸಾಯಿ ಖಾನೆಗಳಿಗೆ ಬೀಗ ಹಾಕಿಸಿದ್ದು.

ಯೋಗಿ ಹಿಂದೂ ನಾಯಕ. ಹಿಂದೂ ದೇವರ ಆರಾಧಕ. ಹೀಗಾಗಿ ಯುಪಿ ಸಿಎಂ ಆಗ್ತಿದ್ದಂತೆ, ಅಕ್ರಮ ಕಸಾಯಿ ಖಾನೆಗಳನ್ನು ಬಂದ್ ಮಾಡಿಸಿದ್ರು ಯೋಗಿ ಆದಿತ್ಯನಾಥ್​​. ಇದು ಯೋಗಿ ಜನಪ್ರಯತೆಯನ್ನು ಡಬಲ್ ಮಾಡಿತ್ತು. ಆರ್​ಎಸ್​ಎಸ್​ ನಾಯಕರು, ಹಿಂದೂ ಮುಖಂಡರು ಯೋಗಿ ಕಾರ್ಯವೈಖರಿಯನ್ನ ಮೆಚ್ಚಿದ್ರು. ಗೋಹತ್ಯೆ ನಿಷೇಧಿಸಿ ಅಂತ ಮೋದಿ ಮೇಲೆ ಒತ್ತಡವನ್ನೂ ಹಾಕಿದ್ರು. ಯೋಗಿಯ ಕಾರ್ಯವೈಖರಿಯಿಂದಲೇ, ಮೋದಿ ಅಂಡ್ ಟೀಂ ಗೋ ಹತ್ಯೆ ನಿಷೇಧಿಸಿತ್ತು. ಯುಪಿನಲ್ಲಿ ಗೋ ಭಕ್ಷಕರೇ ಹೆಚ್ಚಾಗಿದ್ರು. ಅಂಥಾ ನೆಲದಲ್ಲಿ ಗೋವುಗಳ ರಕ್ಷಣೆಗೆ ತೊಡೆ ತಟ್ಟಿ ನಿಂತಿದ್ರು ಯೋಗಿ.

ಯೋಗಿ ಶ್ರೀಸಾಮಾನ್ಯರ ನಡುವೆ ಶ್ರೀ ಸಾಮಾನ್ಯರಾಗಿದ್ದವರು. ಜನರ ನಡುವಲ್ಲಿ ಬೆರೆತವರು. ಸಿಎಂ ಆದರೂ ಬದಲಾಗಿಲ್ಲ. ತಮ್ಮ ಮನೆಗೆ ಬರೋ ಜನರ ಸಮಸ್ಯೆಗಳನ್ನ ಖುದ್ದು ಯೋಗಿನೇ ಆಲಿಸ್ತಾರೆ. ಪ್ರೀತಿಯಿಂದ ಮಾತಾಡಿಸಿ ಅದಕ್ಕೆ ಪರಿಹಾರಾನೂ ಒದಗಿಸ್ತಾರೆ. ಒಬ್ಬ ಹುಡುಗನ ಮೇಲೆ ದೌರ್ಜನ್ಯ ನಡೆದಿದೆ ಅಂತ ಗೊತ್ತಾಗ್ತಿದ್ದ ಹಾಗೆ, ಸೀದಾ ಆ ಹುಡುಗನ ಹತ್ತಿರ ಓಡಿ ಬಂದಿದ್ರು ಯೋಗಿ ಆದಿತ್ಯನಾಥ್​. ಅಷ್ಟೇ ಅಲ್ಲ. ಆ ಹುಡುಗನ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಗುಡುಗಿದ್ರು. ಇನ್ನು ಕಾರಲ್ಲಿ ಹೋಗ್ತಿದ್ದಾಗ ಯಾರಾದ್ರೂ ಎದುರಿಗೆ ಬಂದ್ರೂ, ಕಾರು ನಿಲ್ಲಿಸಿ ಅವ್ರ ಸಮಸ್ಯೆಗಳನ್ನ ಆಲಿಸ್ತಾರೆ. ಗುಡಿಸಲುಗಳಿಗೆ ಹೋಗಿ ಅವರ ಸಮಸ್ಯೆಗಳನ್ನ ಆಲಿಸ್ತಾರೆ. ಆ ಕ್ಷಣವೇ ನೆಲೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಖಡಕ್ ಆದೇಶ ನೀಡ್ತಾರೆ. ಇನ್ನು ಆಸ್ಪತ್ರೆಯಲ್ಲಿ ಮಗುವೊಂದು ಸಾವು ಬದುಕಿನ ನಡುವೆ ಹೋರಾಡ್ತಿತ್ತು. ಮಗುವನ್ನ ಉಳಿಸಿಕೊಳ್ಳೋಕೆ ದುಡ್ಡಿಲ್ಲ ಅಂತ ಪೋಷಕರು ಅಳ್ತಾ ಇದ್ದಾಗ, ಸೀದಾ ಆಸ್ಪತ್ರೆಗೆ ಬಂದು ಮಗುವಿನ ಚಿಕಿತ್ಸೆಗೆ ಸ್ಪಂದಿಸಿದ್ದು ಯೋಗಿ ಆದಿತ್ಯನಾಥ್​.

ಜಾತಿ ಧರ್ಮದ ಭೇದವಿಲ್ಲ. ಮೇಲು ಕೀಳು ಇಲ್ವೇ ಇಲ್ಲ. ಎಲ್ಲರ ಏಳಿಗೆಗಾಗಿ ಸ್ಪಂದಿಸುತ್ತಿದ್ದಾರೆ ಯೋಗಿ. ಸಹಾಯ ಅಂತ ಯೋಗಿಯನ್ನ ಹುಡುಕಿಕೊಂಡು ಯಾರೇ ಬರಲಿ. ಅವರ ಸಮಸ್ಯೆಗಳನ್ನು ಬಗೆಹರಿಸಿ ಕಳಿಸ್ತಾರೆ ಈ ಸನ್ಯಾಸಿ. ಈ ಎಲ್ಲಾ ಕಾರಣಗಳಿಂದ ಮೋದಿಗಿಂತಲೂ ಹೆಚ್ಚು ಜನಪ್ರಿಯತೆಯನ್ನ ಗಳಿಸ್ತಾ ಇದ್ದಾರೆ ಈ ಹಠವಾದಿ.

ವರದಿ: ಶೇಖರ್ ಪೂಜಾರಿ, ಸುವರ್ಣ ನ್ಯೂಸ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾತ್ರಿ ಕಣ್ಣೇ ಕಾಣೊಲ್ಲವೆಂದು ಹಗಲಿನಲ್ಲಿಯೇ ಕಿರುತೆರೆ ನಟ ಪ್ರವೀಣ್ ಮನೆಗೆ ಕನ್ನ ಹಾಕಿದ ಇರುಳು ಕುರುಡ!
ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ