ಓರ್ವ ಯುವಕನನ್ನು ಅಪಹರಿಸಿ 3 ದಿನ ಅತ್ಯಾಚಾರವೆಸಗಿದ ಮೂವರು ಮಹಿಳೆಯರು

Published : May 30, 2017, 10:38 PM ISTUpdated : Apr 11, 2018, 01:13 PM IST
ಓರ್ವ ಯುವಕನನ್ನು ಅಪಹರಿಸಿ 3 ದಿನ ಅತ್ಯಾಚಾರವೆಸಗಿದ ಮೂವರು ಮಹಿಳೆಯರು

ಸಾರಾಂಶ

ಅಪರಿಚಿತ ಸ್ಥಳಕ್ಕೆ ಕರೆದೋಯ್ದು ಮೂರು ದಿನಗಳ ಕಾಲ ಬಂಧನದಲ್ಲಿಟ್ಟುಕೊಂಡು ಮನಸೋಇಚ್ಛೆ ಲೈಂಗಿಕವಾಗಿ ಹಿಂಸಿಸಿ ಸಾಕಷ್ಟು ಅತ್ಯಾಚಾರವೆಸಗಿದ್ದಾರೆ.

ಬೆನೋನಿ(ಮೇ.30): ಪುರುಷರು ಮಹಿಳೆಯರನ್ನು ಅಪಹರಿಸಿ ಅತ್ಯಾಚಾರವೆಸಗುವ ಸುದ್ದಿಗಳನ್ನು ಕೇಳಿರುತ್ತೇವೆ. ಆದರೆ ಇಲ್ಲಿ ಮಹಿಳೆಯರೆ ಪುರುಷರನ್ನು ಅಪಹರಿಸಿ 3 ದಿನ ಬಂಧನದಲ್ಲಿಟ್ಟುಕೊಂಡು ಅತ್ಯಾಚಾರವೆಸಗಿದ ಘಟನೆ ದಕ್ಷಿಣ ಆಫ್ರಿಕಾದ ಬೆನೋಮಿ ಪಟ್ಟಣದಲ್ಲಿ ನಡೆದಿದೆ.

ಮೇ 19ರಂದು 23 ವರ್ಷದ ಯುವಕನನ್ನು ಕಾರಿನಿಂದ ಮೂವರು ಮಹಿಳೆಯರು ಅಪಹರಿಸಿ ಅಪರಿಚಿತ ಸ್ಥಳಕ್ಕೆ ಕರೆದೋಯ್ದು ಮೂರು ದಿನಗಳ ಕಾಲ ಬಂಧನದಲ್ಲಿಟ್ಟುಕೊಂಡು ಮನಸೋಇಚ್ಛೆ ಲೈಂಗಿಕವಾಗಿ ಹಿಂಸಿಸಿ ಸಾಕಷ್ಟು ಅತ್ಯಾಚಾರವೆಸಗಿದ್ದಾರೆ. ಕೊಠಡಿಯಲ್ಲಿ ಯುವಕನನ್ನು ವಿಪರೀತವಾಗಿ ತೊಂದರೆ ನೀಡಿರುವ ಮಹಿಳೆಯರು ಬಲವಂತವಾಗಿ ಮದ್ಯಪಾನ ಕೂಡ ಮಾಡಿಸಿದ್ದಾರೆ.

ಮೂರು ದಿನಗಳ ನಂತರ ಮೇ.22 ರಂದು  ಬಿಡುಗಡೆಗೊಂಡ ಆ ಯುವಕ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾನೆ.  ತೀರ್ವ ಆಘಾತಕ್ಕೊಳಗಾದ ಈ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಮಹಿಳೆಯರ ಬಂಧನಕ್ಕೆ ಬಲೆ ಬೀಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಲೈಂಗಿಕ ಕಿರುಕುಳದ ಆರೋಪದ ನಂತರ ವಿದ್ಯಾರ್ಥಿ ಸಾವು: 4ನೇ ಮಹಡಿಯಿಂದ ಕೆಳಗೆ ಹಾರಿರುವ ಶಂಕೆ
ಹೊಸ ವರ್ಷದ ರಾತ್ರಿ ಬೆಂಗಳೂರಲ್ಲಿ ಪ್ರಯಾಣಕ್ಕೆ ವಿಶೇಷ ಬಸ್‌ ವ್ಯವಸ್ಥೆ! ಎಲ್ಲಿಂದ? ಎಲ್ಲಿಗೆ?