ಸಿಎಂ ಗನ್ ಮೆನ್ ಆತ್ಮಹತ್ಯೆ

Published : Aug 27, 2018, 08:10 PM ISTUpdated : Sep 09, 2018, 10:19 PM IST
ಸಿಎಂ ಗನ್ ಮೆನ್ ಆತ್ಮಹತ್ಯೆ

ಸಾರಾಂಶ

ಇತ್ತೀಚಿಗಷ್ಟೆ ವಿಕಾಸ್ ಸಿಂಗ್ ಅವರನ್ನು ಸಿದ್ದಾರ್ಥ್ ನಗರ ಜಿಲ್ಲೆಯಿಂದ ಮುಖ್ಯಮಂತ್ರಿಗಳ ಭದ್ರತಾ ಸಿಬ್ಬಂದಿಯಾಗಿ ನಿಯೋಜಿಸಲಾಗಿತ್ತು.ಹೆಂಡತಿಯೊಂದಿಗೆ ಬಹಳ ಹೊತ್ತು ಜಗಳವಾಡಿ ಕೆಲ ಹೊತ್ತಿನ ನಂತರ ಗುಂಡು ಹೊಡೆದುಕೊಂಡಿದ್ದಾರೆ.

ಗೋರಕ್'ಪುರ[ಆ.27]: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಭದ್ರತಾ ಸಿಬ್ಬಂದಿಯೊಬ್ಬರು ತಮ್ಮ ಮನೆಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿಕಾಸ್ ಸಿಂಗ್ [35] ಆತ್ಮಹತ್ಯೆ ಮಾಡಿಕೊಂಡವರು. ಇವರು ತಮ್ಮ ಬುದ್ಧ ವಿಹಾರದ ಪ್ರದೇಶದ ಮನೆಯಲ್ಲಿ  ಸರ್ವಿಸ್ ರಿವಾಲ್ವಾರ್'ನಿಂದಲೇ ಗುಂಡು ಹೊಡೆದುಕೊಂಡಿದ್ದಾರೆ. ಕೋರಬಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಾಥಮಿಕ ತನಿಖೆಗಳ ವರದಿಯಂತೆ ಕೌಟಂಬಿಕ ಜಗಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎಸ್ಪಿ ವಿನಯ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಇತ್ತೀಚಿಗಷ್ಟೆ ವಿಕಾಸ್ ಸಿಂಗ್ ಅವರನ್ನು ಸಿದ್ದಾರ್ಥ್ ನಗರ ಜಿಲ್ಲೆಯಿಂದ ಮುಖ್ಯಮಂತ್ರಿಗಳ ಭದ್ರತಾ ಸಿಬ್ಬಂದಿಯಾಗಿ ನಿಯೋಜಿಸಲಾಗಿತ್ತು.ಹೆಂಡತಿಯೊಂದಿಗೆ ಬಹಳ ಹೊತ್ತು ಜಗಳವಾಡಿದ ಕೆಲ ಹೊತ್ತಿನ ನಂತರ ಗುಂಡು ಹೊಡೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಈತನ ಪತ್ನಿ ತಾಯಿ ಹಾಗೂ ಮಕ್ಕಳು ಮಹಡಿ ಮೇಲಿದ್ದರು. ಆತ್ಮಹತ್ಯೆಗೆ ಬಳಸಿದ ರಿವಾಲ್ವಾರ್ ಅನ್ನು ಜಫ್ತಿ ಮಾಡಲಾಗಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜಕೀಯ ತೀಟೆಗೆ ಆರೋಪ, ಯಾವುದೇ ತನಿಖೆಗೆ ಸಿದ್ಧ: ಸಚಿವ ಕೃಷ್ಣ ಬೈರೇಗೌಡ
ಮುಂದಿನ 72 ಗಂಟೆಯಲ್ಲಿ ಭೂಮಿಯತ್ತ 10 ಕ್ಷುದ್ರ ಗ್ರಹ, ಡೇಂಜರ್ ಝೋನ್‌ನಲ್ಲಿದೆಯಾ ಜಗತ್ತು?