ಮೆನುವಿನಲ್ಲಿ ಮಾಂಸಾಹಾರ ನಿಷೇಧ..!

By Suvarna Web DeskFirst Published Dec 15, 2017, 8:55 PM IST
Highlights

ಉತ್ತರ ಪ್ರದೇಶದಲ್ಲಿ ಯಾವುದೇ ರೀತಿಯಾದ ಕಾರ್ಯಕ್ರಮ ನಡೆದರೂ ಕೂಡ ಅಲ್ಲಿನ ಮೆನುವಿನಲ್ಲಿ ಸಸ್ಯಹಾರಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಸ್ಯಹಾರಿಯಾಗಿರುವ ನಿಟ್ಟಿನಲ್ಲಿ ಎಲ್ಲಾ ಕಡೆಯೂ ಕೂಡ ಸಸ್ಯಹಾರಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ.

ಲಕ್ನೋ (ಡಿ.15): ಉತ್ತರ ಪ್ರದೇಶದಲ್ಲಿ ಯಾವುದೇ ರೀತಿಯಾದ ಕಾರ್ಯಕ್ರಮ ನಡೆದರೂ ಕೂಡ ಅಲ್ಲಿನ ಮೆನುವಿನಲ್ಲಿ ಸಸ್ಯಹಾರಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಸ್ಯಹಾರಿಯಾಗಿರುವ ನಿಟ್ಟಿನಲ್ಲಿ ಎಲ್ಲಾ ಕಡೆಯೂ ಕೂಡ ಸಸ್ಯಹಾರಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ.

ಮೊದಲ ಬಾರಿಗೆ ಇಲ್ಲಿ ಗುರುವಾರದಿಂದ ಆರಂಭವಾಗಿರುವ ಐಎಎಸ್ ಅಧಿಕಾರಿಗಳ ಸಮ್ಮೇಳನದ ಆಹಾರದ ಮೆನುವಿನಲ್ಲಿ ಚಿಕನ್, ಮಟನ್, ಮೀನಿನ ಖಾದ್ಯಗಳನ್ನೂ ಮೆನುವಿನಿಂದ ಹೊರಕ್ಕಿಡಲಾಗಿದೆ.  

Latest Videos

ಈ ಹಿಂದೆ ಸರ್ಕಾರದಿಂದ ನಡೆಯುವ ಯಾವುದೇ ಕಾರ್ಯಕ್ರಮ ಇರಲಿ ಅಲ್ಲಿ ಸಸ್ಯಹಾರಾ ಹಾಗೂ ಮಾಂಸಹಾರಗಳಿಗೆ ಒತ್ತು ನೀಡಲಾಗುತ್ತಿತ್ತು. ಆದರೆ ಇದೀಗ ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾದ ಬಳಿಕ ಸರ್ಕಾರದ ಕಾರ್ಯಕ್ರಮದಲ್ಲಿ  ಮಾಂಸಾಹಾರಗಳನ್ನೂ ಹೊರಗಿಡಲಾಗಿದೆ.

 

click me!