ಸಚಿವ ಸಂಪುಟ ಖಾತೆ ಹಂಚಿಕೆ ಮಾಡಿದ ಯೋಗಿ ಆದಿತ್ಯನಾಥ್

By Suvarna Web DeskFirst Published Mar 22, 2017, 1:40 PM IST
Highlights

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೂತನ ಶಾಸಕರಿಗೆ ಸಂಪುಟ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. ಆದಿತ್ಯನಾಥ್ ನಿರ್ಣಾಯಕ ಖಾತೆಗಳಾದ ಗೃಹ ಮತ್ತು ಕಂದಾಯ ಖಾತೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ.

ನವದೆಹಲಿ (ಮಾ.22): ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೂತನ ಶಾಸಕರಿಗೆ ಸಂಪುಟ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. ಆದಿತ್ಯನಾಥ್ ನಿರ್ಣಾಯಕ ಖಾತೆಗಳಾದ ಗೃಹ ಮತ್ತು ಕಂದಾಯ ಖಾತೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ.

ಲೋಕೋಪಯೋಗಿ ಖಾತೆ, ಆಹಾರ ಸಂಸ್ಕರಣೆ, ಮನರಂಜನೆ ತೆರಿಗೆ ಮತ್ತು ಸಾರ್ವಜನಿಕ ಉದ್ದಿಮೆ ಇಲಾಖೆಯನ್ನು ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯರಿಗೆ ನೀಡಲಾಗಿದೆ. ಇನ್ನೋರ್ವ ಉಪಮುಖ್ಯಮತ್ರಿ ದಿನೇಶ್ ಶಾ ಅವರಿಗೆ ಉನ್ನತ ಮತ್ತು ಪ್ರಾಥಮಿಕ ಶಿಕ್ಷಣ, ವಿಜ್ಞಾನ-ತಂತ್ರಜ್ಞಾನ, ಇಲೆಕ್ಟ್ರಾನಿಕ್ಸ್ ಮತ್ತು ಐಟಿ ಇಲಾಖೆಯ ಜವಾಬ್ದಾರಿಯನ್ನು ವಹಿಸಲಾಗಿದೆ.

Latest Videos

ಬಿಜೆಪಿ ವಕ್ತಾರ ಸಿದ್ಧಾರ್ಥ್ ನಾಥ್ ಸಿಂಗ್ ಅವರಿಗೆ ಆರೋಗ್ಯ ಖಾತೆಯನ್ನು ವಹಿಸಲಾಗಿದೆ. ಚೇತನ್ ಚೌಹಾಣ್ ಗೆ ಕ್ರೀಡಾ ಖಾತೆಯನ್ನು ವಹಿಸಲಾಗಿದೆ. 

ಹಣಕಾಸು ಖಾತೆ- ರಾಜೇಶ್ ಅಗರ್ ವಾಲ್
ಕೃಷಿ ಇಲಾಖೆ- ಸೂರ್ಯ ಪ್ರತಾಪ್ ಶಾಹಿ
ಇಂಧನ ಖಾತೆ- ಶಶಿಕಾಂತ್ ಶರ್ಮಾ
ಮಕ್ಕಳಾಭಿವೃದ್ದಿ ಖಾತೆ –ರೀಟಾ ಬಹುಗುಣ ಜೋಷಿ
ಅಬಕಾರಿ ಖಾತೆ- ಜೈ ಪ್ರಕಾಶ್ ಸಿಂಗ್ 
ಮಹಿಳಾ ಅಭಿವೃದ್ದಿ ಖಾತೆ- ಸ್ವಾತಿ ಸಿಂಗ್ 
ಸಂಸದೀಯ ವ್ಯವಹಾರ ಖಾತೆ- ಸುರೇಶ್ ಖನ್ನಾ
click me!