ಪ್ರಧಾನಿ ಅಭ್ಯರ್ಥಿಯಾಗಲು ನಾನು ಸಿದ್ಧ :ವಂಶಪಾರಂಪರ್ಯ ಎಲ್ಲಡೆ ಇದೆ

By Suvarna Web DeskFirst Published Sep 12, 2017, 3:44 PM IST
Highlights

ವಂಶಪಾರಂಪರ್ಯ ಅಧಿಕಾರಕ್ಕೆ ನನ್ನನ್ನ ಮಾತ್ರ ದೂಷಿಸುವ ಅಗತ್ಯವಿಲ್ಲ.ತಮಿಳುನಾಡಿನಲ್ಲಿ ಸ್ಟಾಲಿನ್, ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್, ಹಿಮಾಚಲ ಪ್ರದೇಶದಲ್ಲಿ ಅನುರಾಗ್ ಠಾಕೂರ್, ಸಿನಿಮಾದಲ್ಲಿ ಅಭಿಷೇಕ್ ಬಚ್ಚನ್, ಉದ್ಯಮದಲ್ಲಿ ಮುಕೇಶ್, ಅನಿಲ್ ಇವರೆಲ್ಲರೂ ವಂಶ ಪಾರಂಪರ್ಯದಿಂದ ಬೆಳೆದು ಬಂದವರೆ' ಎಂದು ಉದಾಹರಣೆ ನೀಡಿದರು.

ಕ್ಯಾಲಿಫೋರ್ನಿಯಾ(ಸೆ.12): ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಪ್ರಧಾನಿ ಅಭ್ಯರ್ಥಿಯಾಗಲು ಸಿದ್ಧ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ತಿಳಿಸಿದ್ದಾರೆ.

2 ವಾರಗಳ ಅಮೆರಿಕಾ ಪ್ರವಾಸ ಕೈಗೊಂಡಿರುವ ಅವರು,ಕ್ಯಾಲಿಫೋರ್ನಿಯಾ ವಿವಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರಧಾನಿ ಅಭ್ಯರ್ಥಿಯ ಆಯ್ಕೆ, ಪಕ್ಷದ ನಾಯಕರಿಗೆ ಬಿಟ್ಟ ವಿಚಾರ. ಆದರೆ ತಾವು ಪ್ರಧಾನಿ ಅಭ್ಯರ್ಥಿಯಾಗಲು ಸಿದ್ಧ ಎಂದು ಹೇಳಿದ್ದಾರೆ.

ವಂಶಪಾರಂಪರ್ಯ ಅಧಿಕಾರಕ್ಕೆ ನನ್ನನ್ನ ಮಾತ್ರ ದೂಷಿಸುವ ಅಗತ್ಯವಿಲ್ಲ.ತಮಿಳುನಾಡಿನಲ್ಲಿ ಸ್ಟಾಲಿನ್, ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್, ಹಿಮಾಚಲ ಪ್ರದೇಶದಲ್ಲಿ ಅನುರಾಗ್ ಠಾಕೂರ್, ಸಿನಿಮಾದಲ್ಲಿ ಅಭಿಷೇಕ್ ಬಚ್ಚನ್, ಉದ್ಯಮದಲ್ಲಿ ಮುಕೇಶ್, ಅನಿಲ್ ಇವರೆಲ್ಲರೂ ವಂಶ ಪಾರಂಪರ್ಯದಿಂದ ಬೆಳೆದು ಬಂದವರೆ' ಎಂದು ಉದಾಹರಣೆ ನೀಡಿದರು.

ಅಧಿಕಾರದ ಸೊಕ್ಕು ತಲೆಗೇರಿದ್ದೇ ಕಾಂಗ್ರೆಸ್ ಸೋಲಿಗೆ ಕಾರಣ.2012ರ ನಂತರ ನಾವು ಜನರ ಜೊತೆ ಸಂವಾದವನ್ನೇ ಬಿಟ್ಟೆವು ಪಕ್ಷದ ಅವನತಿಯ ಕುರಿತು ರಾಹುಲ್ ಗಾಂಧಿ ಮಾತನಾಡಿದರು. ಪ್ರಧಾನಿ ಮೋದಿ ಆಡಳಿತವನ್ನು ಟೀಕಿಸಿದ ಅವರು' ಬಿಜೆಪಿ ಸರ್ಕಾರ ದ್ವೇಷ, ಹಿಂಸೆಯ ಹಾಗೂ ರಾಜಕೀಯ ದೃವೀಕರಣದ ಮೂಲಕ ಅಧಿಕಾರ ನಡೆಸುತ್ತಿದೆ ಎಂದು ಅವರು ಬೆಂಗಳೂರಿನಲ್ಲಿ ನಡೆದ ಗೌರಿ ಲಂಕೇಶ್ ಹತ್ಯೆ ಹಾಗೂ ಗೋರಕ್ಷಕರ ದಾಳಿಯನ್ನು ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು.

ದೇಶದಲ್ಲಿ ನಡೆಯುತ್ತಿರುವ ಅವ್ಯಸ್ಥೆಯಿಂದಾಗಿ ತಮ್ಮದೆ ದೇಶದಲ್ಲಿ ವಾಸಿಸುವ ಕೋಟ್ಯಂತರ ಮಂದಿ ಭವಿಷ್ಯದ ಬಗ್ಗೆ ನಂಬಿಕೆಯನ್ನೆ ಕಳೆದುಕೊಂಡಿದ್ದಾರೆ. ಏನು ಅರಿಯದ ಮುಗ್ದರು ತೀರ್ವಗಾಮಿಗಳಾಗಿ ಪರಿವರ್ತಿತರಾಗುತ್ತಿದ್ದಾರೆ.ನೋಟು ರದ್ದತಿಯಿಂದ ದೇಶದ ಜನರು ಪಡಬಾರದ ಪಾಡುಪಟ್ಟರು. ಅರ್ಥವ್ಯವಸ್ಥೆ ಕೂಡ ಅಧೋಗತಿಗಿಳಿಯಿತು' ಎಂದು ಸರ್ಕಾರದ ನಿರ್ಧಾರಗಳನ್ನು ಟೀಕಿಸಿದರು.

click me!